ಪೋಲಿಸ್ ಠಾಣೆಯಲ್ಲಿ ಸಿಬಂದಿಗಳಿಂದ ಮದ್ಯಪಾನ ಆರೋಪ ಸತ್ಯಕ್ಕೆ ದೂರ; ಎಸ್ಪಿ ಸುಧೀರ್ ಕುಮಾರ್

Spread the love

ಪೋಲಿಸ್ ಠಾಣೆಯಲ್ಲಿ ಸಿಬಂದಿಗಳಿಂದ ಮದ್ಯಪಾನ ಆರೋಪ ಸತ್ಯಕ್ಕೆ ದೂರ; ಎಸ್ಪಿ ಸುಧೀರ್ ಕುಮಾರ್

ಮಂಗಳೂರು: ಕರ್ತವ್ಯ ನಿರತ ಪೋಲಿಸರು ಠಾಣೆಯಲ್ಲಿ ಮದ್ಯಪಾನ ಮಡಿದ್ದಾರೆ ಎಂದು ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಪೋಲಿಸ್ ಠಾಣೆಯ ಒಳಗೆ ಕರ್ತವ್ಯ ನಿರತ ಪೋಲಿಸರಿಬ್ಬರು ಮದ್ಯಪಾನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಚಾರ ಸತ್ಯಕ್ಕೆ ದೂರವಾಗಿದೆ. ಠಾಣೆಯಲ್ಲಿ ಮದ್ಯಪಾನ ನಡೆದಿಲ್ಲ ಸಾಮಾಜಿಕ ಜಾಲತಾಣದಲ್ಲಿ ಹೆಸರಿಸಲ್ಪಟ್ಟ ಪೋಲಿಸರು ಠಾಣೆಯಲ್ಲಿ ಅಂತಹ ಕೃತ್ಯ ನಡೆಸಿಲ್ಲ. ಆ ಘಟನೆ ಅ. 11 ರಂದು ನಡೆದಿದ್ದು, ನಿಕೋಲಸ್ ಎಂಬ ಪೋಲಿಸ್ ತಮ್ಮ ಹುಟ್ಟು ಹಬ್ಬದ ನಿಮಿತ್ತ ಮದ್ಯದ ಬಾಟಲಿ ಖರೀದಿಸಿದ್ದರು. ಪೋಲಿಸ್ ವಸತಿ ಗೃಹಕ್ಕೆ ಹೋಗುವ ಹಾದಿಯಲ್ಲಿ ಮದ್ಯೆ ಠಾಣೆಗೆ ಆಗಮಿಸಿ ಟೇಬಲ್ ಮೇಲೆ ಇರಿಸಿದ್ದರು. ಈ ವೇಳೆ ಟೇಬಲ್ ಪಕ್ಕ ಕುಳಿತಿದ್ದ ಪೊಲೀಸರು ಬರುವಂತೆ ಯಾರೋ ಫೋಟೊ ತೆಗೆದಿದ್ದಾರೆ. ಅದನು ಡ್ಯಾನಿ ಎಂಬ ಪೋಲಿಸ್ ಸಂಗ್ರಹಿಸಿ ತನ್ನ ಸ್ನೇಹಿತರಿಗೆ ನೀಡಿದ್ದಾರೆ.

ಠಾಣೆಯಲ್ಲಿ ಮದ್ಯಪಾನ ಸೇವನೆ ನಡೆದಿಲ್ಲ. ಠಾಣೆಗೆ ಮದ್ಯ ತರುವುದು ಅಪರಾಧ. ಆದ್ದರಿಂದ ಮದ್ಯ ತಂದವರು ಹಾಗೂ ಫೋಟೊ ಸಂಗ್ರಹಿಸಿ ಇಬ್ಬರ ತೇಜೋವಧೆಗೆ ಕಾರಣರಾದ ಇಬ್ಬರ ವಿರದ್ದ ಇಲಾಖಾ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.


Spread the love