ಪೋಲೀಸ್ ದೌರ್ಜನ್ಯ : ಮಂಗಳೂರು ಸೆಂಟ್ರಲ್ ಕಮಿಟಿ ಖಂಡನೆ
ಮಂಗಳೂರು: ಅಹ್ಮದ್ ಖುರೈಷಿಯವರನ್ನು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಸಿ. ಸಿ. ಬಿ. ಪೋಲೀಸ್ಸ ನಡೆಸಿದಂತಹ ದೈಹಿಕ ಹಲ್ಲೆಯನ್ನು ಹಾಗೂ ಪೋಲೀಸ್ ದೌರ್ಜನ್ಯವನ್ನು ಪ್ರತಿಭಟಿಸಿ ಪಿ. ಎಫ್. ಐ. ಕಾರ್ಯಕರ್ತರು ಪೋಲೀಸ್ ಆಯುಕ್ತರ ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಂದರ್ಭದಲ್ಲಿ ನಡೆದಂತಹ ಲಾಠಿ ಚಾರ್ಜನ್ನು, ಅಮಾಯಕರ ಬಂಧನವನ್ನು ಅಲ್ಲದೆ ಪೋಲೀಸರ ಮೇಲೆ ನಡೆದಂತಹ ಹಲ್ಲೆ ಹಗೂ ಅಶಾಂತಿಯನ್ನು ಮಂಗಳೂರು ಸೆಂಟ್ರಲ್ ಕಮಿಟಿಯು ತೀವ್ರವಾಗಿ ಖಂಡಿಸುತ್ತದೆ.
ಈ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರು ಪ್ರತಿಯೊಂದು ಹಂತದಲ್ಲಿಯೂ ಆತಂಕದಲ್ಲಿ ಬದುಕುವಂತಾಗಿದೆ. ಪೋಲೀಸ್ ಇಲಾಖೆಯು ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ನಡೆಸುವಂತಹ ಕಾನೂನು ಕ್ರಮದಿಂದಾಗಿ ಜನಸಾಮಾನರು ತೊಂದರೆ ಅನುಭವಿಸಬೇಕಾಗುತ್ತದೆಂದು ಸಂಘದ ಮುಖಂಡರಾದ ಅಲಿ ಹಸನ್, ಅಬ್ದುಲ್ ಅಜೀಜ್ ಮತ್ತು ಯಾಸೀನ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.