Home Mangalorean News Kannada News ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲು ಶಾಸಕ ವೇದವ್ಯಾಸ್ ಕಾಮತ್ ಕಚೇರಿಯಲ್ಲಿ ಪ್ರತ್ಯೇಕ ಡೆಸ್ಕ್ 

ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲು ಶಾಸಕ ವೇದವ್ಯಾಸ್ ಕಾಮತ್ ಕಚೇರಿಯಲ್ಲಿ ಪ್ರತ್ಯೇಕ ಡೆಸ್ಕ್ 

Spread the love

ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಮಾಹಿತಿ ನೀಡಲು ಶಾಸಕ ವೇದವ್ಯಾಸ್ ಕಾಮತ್ ಕಚೇರಿಯಲ್ಲಿ ಪ್ರತ್ಯೇಕ ಡೆಸ್ಕ್ 

ಮಂಗಳೂರು : ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಮಾಹಿತಿ ನೀಡುವ ನಿಟ್ಟಿನಲ್ಲಿ ಶಾಸಕರ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶಾಂತಿ ನೆಲೆಸುವ ಉದ್ಧೇಶದಿಂದ ಸಾರ್ವಜನಿಕರು ಸಹಕರಿಸಬೇಕು. ಮತ್ತು ಕಾಯ್ದೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹವಿದ್ದರೂ ಅದನ್ನು ತಿಳಿದುಕೊಳ್ಳಲು ಶೀಘ್ರವೇ ಶಾಸಕರ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಸಂಪೂರ್ಣ ಭಿನ್ನವಾಗಿದ್ದು ಎನ್.ಆರ್.ಸಿ ಪ್ರಕೃಿಯೆ ಪ್ರತ್ಯೇಕವಾದುದು. ಇದರ ನಿಯಮ ಮತ್ತು ಪ್ರಕೃಿಯೆಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಸಿ.ಎ.ಎ ಸಂಸತ್ತಿನಲ್ಲಿ ಅಂಗೀಕಾರಪಡೆದು ಇದೀಗ ದೇಶಾದ್ಯಂತ ಜಾರಿಯಾಗುವ ಹಂತದಲ್ಲಿದೆ. ಸಿ.ಎ.ಎ ಪ್ರಕ್ರಿಯೆಯಿಂದ ಭಾರತೀಯ ಮುಸಲ್ಮಾನರು ಸೇರಿದಂತೆ ಯಾವುದೇ ಸಮುದಾಯದವರೂ ಭಯ ಭೀತರಾಗುವ‌ ಅವಶ್ಯಕತೆ ಇಲ್ಲ. ದೇಶದ ಜನರ ಹಿತ ದೃಷ್ಟಿಯಿಂದಲೇ ಕಾನೂನು ರೂಪಿಸಲಾಗಿದೆ ಎಂದು ಶಾಸಕರು ತಿಳಿಸಿರುತ್ತಾರೆ.


Spread the love

Exit mobile version