ಪ್ರಚಾರವಿಲ್ಲದೆ ಸ್ವಂತ ಖರ್ಚಿನಿಂದ ಅಸಹಾಯಕರಿಗೆ ಊಟ, ಉಪಾಹಾರ ನೀಡುತ್ತಿರುವ ಮಮತಾ ಕೇಶವ್

Spread the love

ಪ್ರಚಾರವಿಲ್ಲದೆ ಸ್ವಂತ ಖರ್ಚಿನಿಂದ ಅಸಹಾಯಕರಿಗೆ ಊಟ, ಉಪಾಹಾರ ನೀಡುತ್ತಿರುವ ಮಮತಾ ಕೇಶವ್

ಮಂಗಳೂರು: ವಿಶ್ವವ್ಯಾಪ್ತಿಯಲ್ಲಿ ಕೊರೋನಾ ಸಾಂಕ್ರಾಮಿಕರೋಗದಿಂದ ತತ್ತರಿಸುತ್ತಿದು ಇದರ ದುಷ್ಪರಿಣಾಮ ಭಾರತ ದೇಶಕ್ಕೂ ಬಹಳ ಆರ್ಥಿಕ ,ಸಾಮಾಜಿಕ ಅರೋಗ್ಯ ಹಾಗು ಹಲವಾರು ಈ ರೋಗಕ್ಕೆ ಬಲಿಯಾಗಿದಾರೆ.
ಹೀಗಿರುವಾಗ ಹತ್ತು ಹಲವಾರು ಸಂಸ್ಥೆಗಳು ,ರಾಜಕೀಯಪಕ್ಷದವರು ನೆರವಿನ ಹಸ್ತ ನೀಡಿರುತಾರೆ . ಅದೇ ರೀತಿ ಮಂಗಳೂರಿನ ಚಿಲಿಂಬಿ ನಿವಾಸಿ ಮಮತಾ ಕೇಶವ (42 ವರ್ಷ ) ಇವರು ಯಾವುದೇ ಪ್ರಚಾರ ಅಥವಾ ಸ್ವಾರ್ಥ ಇಲ್ಲದೆ ತನ್ನ ಸ್ವಂತ ಖರ್ಚಿನಿಂದ ಸಮಾಜಕ್ಕೆ ಉಪಹಾರ ಹಾಗು ಊಟದ ವ್ಯವಸ್ಥೆಯನ್ನು ಮಾಡಿ ಅಸಾಯಕರ ಹಾಗು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುತ್ತಾರೆ .

ಇವರು ಯಾವುದೇ ಪ್ರಚಾರ ಮಾಧ್ಯಮಕ್ಕೆ ಮುಂದೆ ಬರದೇ ತನ್ನ ಸ್ವಾಭಿಮಾನ ಹಾಗು ಮನುಷತ್ವಕ್ಕೆ ಸಮಾಧಾನವಾಗಿ ಕೆಲಸ ಮಾಡಿ ಬಂದಿರುತ್ತಾರೆ.ಇವರು ಯಾವುದೇ ಸ್ವಾರ್ಥ ವಿಲ್ಲದೆ ತನ್ನ ಆತ್ಮಸಾಕ್ಷಿಯಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತಿದ್ದರೆ .

ಮಮತಾ ಕೇಶವ್ ರವರು ಸುಮಾರು 25 ದಿವಸದಿಂದ ದೀನಾಲು ಬೆಳ್ಳಿಗೆ 8 :00 ಗಂಟೆಗೆ 150 ಮಂದಿ ಅಸಾಯಕರಿಗೆ ಉಪಹಾರ ಹಾಗು ರಾತ್ರಿ ಸರಿಯಾಗಿ 8 :00 ಗಂಟೆಗೆ 60 ಮಂದಿಗೆ ಊಟದ ವ್ಯವಸ್ಥೆಗೆ ಯನ್ನು ಸ್ವಂತ ಖರ್ಚಿನಿಂದ ಮಾಡ್ತಾ ಬಂದಿರುತಾರೆ . ಇವರು ಉರ್ವಸ್ಟೋರ್ , ಲೇಡಿಹಿಲ್ ,ಮಣ್ಣಗುಡ್ಡ , ಚಿಲಿಂಬಿ, ಹಾಗು ಇತರ ಜಾಗಗಳ್ಲಲಿ ತನ್ನ ಸ್ವಂತ ವಾಹನದಲ್ಲಿ ಆಹಾರ ಸರಬರಾಜು ಮಾಡುತ್ತ ಬಂದಿದಾರೆ . ಇನ್ನು ಕೂಡ ಲೊಕ್ಡೌನ್ ಮುಗಿಯುವವರೆಗೆ ಸೇವೆಮಾಡುವ ಇರಾದೆಯಲ್ಲಿ ಇರುತಾರೆ . ಇವರಿಗೆ ಸ್ಫೂರ್ತಿ ಹಾಗು ಸಹಾಯವಾಗಿ ಅವರ ಜೊತೆ ಮಂಗಳೂರಿನ ವಕೀಲರಾದ ಶ್ರೀ ರಾಘವೇಂದ್ರ ರಾವ್ , ಸುಧೀರ್ರಾಜ್ , ಚಿತ್ರಾಕ್ಷ , ಹಾಗು ಸತೀಶ್ ಅವರು ಬೆಂಬಲ ನಿಂತಿದಾರೆ.


Spread the love