ಪ್ರಜ್ಞಾ ಸ್ವಾಧಾರ ಕೇಂದ್ರದಿಂದ ಮೂವರು ಕಾಣೆ
ಮಂಗಳೂರು : ಮಂಗಳೂರು ನಗರದ ಜಪ್ಪಿನಮೊಗರು ಗ್ರಾಮದ ಪ್ರಜ್ಞಾ ಸ್ವಾಧಾರ ಕೇಂದ್ರಕ್ಕೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯವರು ಠಾಣಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 26-09-2018 ರಂದು ದಾಖಲು ಮಾಡಿರುವ ರಾಣಿ ,ಸೋನಿಯಾ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯವರು ವಾರಸುದಾರರಿಲ್ಲದೇ ತಿರುಗಾಡುತ್ತಿದ್ದ ನರ್ಗಿಸ್ ಎಂಬವರನ್ನು ಫೆಬ್ರವರಿ 4 ರಂದು ದಾಖಲು ಮಾಡಿರುತ್ತಾರೆ.
ಇವರುಗಳು ಫೆಬ್ರವರಿ 4 ರಂದು ರಾತ್ರಿ 8 ಗಂಟೆಗೆ ಪ್ರಜ್ಞಾ ಸ್ವಾಧಾರ ಕೇಂದ್ರದ ಹಿಂಬದಿಯಿಂದ ಓಡಿ ಹೋಗಿ ಕಾಣೆಯಾಗಿದ್ದಾರೆ.
ಕಾಣೆಯಾದ 3 ಮಹಿಳೆಯರ ಚಹರೆ ಇಂತಿವೆ: ರಾಣಿ ಪ್ರಾಯ 26 ವರ್ಷ ಗಂಡ ಇಮ್ರಾನ್, ಉತ್ತರಹಳ್ಳಿ ಬೆಂಗಳೂರು, 152 ಸೆ.ಮೀ. ಎತ್ತರ, ಗೋಧಿ ಮೈ ಬಣ್ಣ, ಕಪ್ಪು ಕೂದಲು, ದುಂಡು ಮುಖ,ದಪ್ಪ ಶರೀರ, ಕೇಸರಿ ಬಣ್ಣದ ಪ್ಯಾಂಟ್ ಹಾಗೂ ಶಾಲ್ ಹೊಂದಿರುವ ಚೂಡಿದಾರ ಧರಿಸಿರುತ್ತಾರೆ, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ.
ಸೋನಿಯಾ ಪ್ರಾಯ 19 ವರ್ಷ, ಗಂಡ ಮೂರ್ ಸಾನಿದ್, ಉತ್ತರ ಹಳ್ಳಿ ಬೆಂಗಳೂರು, 135 ಸೆ.ಮೀ. ಎತ್ತರ, ಸಾಧಾರಣ ಶರೀರ, ಬಿಳಿ ಮೈ ಬಣ್ಣ, ಕಪ್ಪು ಕೂದಲು, ಕೋಲು ಮುಖ, ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ, ಕನ್ನಡ ಭಾಷೆ ಮಾತನಾಡುತ್ತಾರೆ.
ನರ್ಗಿಸ್ ಪ್ರಾಯ 35 ವರ್ಷ, ಗಂಡ ಗಫರ್, ಹೌರಾ ಬ್ರಿಡ್ಜ್ ಹತ್ತಿರ, ಕೊಲ್ಕತ್ತ, 135 ಸೆ.ಮೀ. ಎತ್ತರ, ಸಾಧಾರಣ ಶರೀರ, ಕಪ್ಪು ಮೈ ಬಣ್ಣ, ದುಂಡು ಮುಖ, ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ, ಹಿಂದಿ ಮಾತನಾಡುತ್ತಾರೆ.
ಇವರುಗಳ ಬಗ್ಗೆ ಮಾಹಿತಿ ದೊರತಲ್ಲಿ ಕಂಕನಾಡಿ ನಗರ ಠಾಣೆ ದೂರವಾಣಿ ಸಂಖ್ಯೆ 0824-2220529, 9480805354 ಇವರಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಕಂಕನಾಡಿ ನಗರ ಠಾಣೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.