ಪ್ರತಿಭೆಗಳಿಗೆ ವೇದಿಕೆ ಒದಗಿಸಿದಾಗ ಉತ್ತಮ ಸಾಧನೆ ಸಾಧ್ಯ – ಜ್ಯೋತೀಷರತ್ನಂ ಸಾಮಗ ನರಸಿಂಹ ಆಚಾರ್ಯ

Spread the love

ಪ್ರತಿಭೆಗಳಿಗೆ ವೇದಿಕೆ ಒದಗಿಸಿದಾಗ ಉತ್ತಮ ಸಾಧನೆ ಸಾಧ್ಯ – ಜ್ಯೋತೀಷರತ್ನಂ ಸಾಮಗ ನರಸಿಂಹ ಆಚಾರ್ಯ

  • ಫ್ರೆಂಡ್ಸ್ ಯೂತ್ ಕ್ಲಬ್ ಮಟಪಾಡಿ ವತಿಯಿಂದ ದೇಶ ಭಕ್ತಿಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ

ಬ್ರಹ್ಮಾವರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆ ಒದಗಿಸಿದಾಗ ಉತ್ತಮ ಸಾಧನೆ ತೋರಲು ಸಾಧ್ಯವಾಗುತ್ತದೆ ಎಂದು ಜ್ಯೋತಿರ್ನಿಕೇತನಮ್, ಮಟಪಾಡಿ ಇದರ ಜ್ಯೋತೀಷರತ್ನಂ ಸಾಮಗ ನರಸಿಂಹ ಆಚಾರ್ಯ ಹೇಳಿದರು.

ಅವರು ಫ್ರೆಂಡ್ಸ್ ಯೂತ್ ಕ್ಲಬ್ ಮಟಪಾಡಿ ಇವರ ವತಿಯಿಂದ ಚಪ್ಟೇಗಾರ್ ಸಭಾಭವನದಲ್ಲಿ ಆಯೋಜಸಿದ್ದ ಆಹ್ವಾನಿತ ಸ್ಥಳೀಯ ಶಾಲಾ ವಿದ್ಯಾರ್ಥಿಗಳ ದೇಶ ಭಕ್ತಿಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಂವಿಧಾನದ ಚೌಕಟ್ಟಿನಲ್ಲಿರುವ ಸ್ವತಂತ್ರ ದೇಶದ ಭಾರತವಾಗಿದ್ದು ಇದು ಸ್ವತಂತ್ರಗೊಂಡು 78 ವರ್ಷಗಳು ಪೊರೈಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ದೇಶ ಭಕ್ತಿಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಮೂಲಕ ವೇದಿಕೆಯನ್ನು ನೀಡಿರುವ ಸಂಘಟನೆಯ ಕಾರ್ಯ ಶ್ಲಾಘನಾರ್ಹ ಎಂದು ಶುಭ ಹಾರೈಸಿದರು.

ಮಟಪಾಡಿ ವಾರ್ಡ್ ಹೋಲಿ ಫ್ಯಾಮಿಲಿ ಚರ್ಚ್ ಬ್ರಹ್ಮಾವರ ಇದರ ಗುರಿಕಾರರಾದ ಜೋಸೆಫ್ ಬಾಂಜ್, ಉದ್ಯಮಿ ಯೂಸುಫ್ ಸೈಯ್ಯದ್, ಸಿವಿಲ್ ಕಂಟ್ರಾಕ್ಟರ್ ಸಂದೇಶ್ ಪೂಜಾರಿ, ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಗೌರವ ಸಲಹೆಗಾರರಾದ ಸ್ಟೀವನ್ ಸಿಕ್ವೇರಾ, ಅಧ್ಯಕ್ಷರಾದ ಶರತ್ ನಾಯಕ್, ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಾಯಕ್ ಉಪಸ್ಥೀತರಿದ್ದರು.

ಉದ್ಘಾಟನೆಯ ಬಳಿಕ ಆಹ್ವಾನಿತ ಸ್ಥಳೀಯ ಶಾಲಾ ವಿದ್ಯಾರ್ಥಿಗಳ ದೇಶ ಭಕ್ತಿಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರುಗಿತು. ಅಭಿಜಿತ್ ಪಾಂಡೇಶ್ವರ್, ಸುಶ್ಮೀತಾ ಸಾಲಿಗ್ರಾಮ, ಸ್ವಪ್ನಾ ಕಿಶೋರ್ ಭಂಡಾರಿ ತೀರ್ಪುಗಾರರಾಗಿ ಸಹಕರಿಸಿದರು.

ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿ , ಸಾಂಸ್ಕೃತಿಕ ಕಾರ್ಯದರ್ಶಿ ಭರತ ನಾಯಕ್ ವಂದಿಸಿದರು. ಅಖಿಲಾ ಹೆಗ್ಡೆ ಪ್ರಾರ್ಥನೆ ನೆರವೇರಿಸಿ, ಪತ್ರಕರ್ತ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು


Spread the love