ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ; ಅಮಿತ್ ಶಾಗೆ ಬೆಂಗಳೂರಿನಲ್ಲಿ ಸನ್ಮಾನ
ಬೆಂಗಳೂರು: ಮೀನುಗಾರರ ಬಹುದಶಕಗಳ ಬೇಡಿಕೆಯಾಗಿದ್ದ ಪತ್ಯೇಕ ಮೀನುಗಾರಿಕಾ ಸಚಿವಾಲಯದ ಮನವಿಗೆ ಸ್ಪಂದಿಸಿ ಈ ಬಾರಿ ಬಜೆಟ್ನಲ್ಲಿ ಘೋಷಿಸಿದ ಕೇಂದ್ರ ಸರಕಾರದ ಪರವಾಗಿ ಭಾರತೀಯಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರವರನ್ನು ಅಖಿಲ ಭಾರತೀಯ ಮೀನುಗಾರರ ವೇದಿಕೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಅಖಿಲ ಭಾರತ ಮೀನುಗಾರರ ವೇದಿಕೆಯ ನೇತೃತ್ವದಲ್ಲಿಕೇಂದ್ರ ಸರಕಾರಕ್ಕೆ ಮೀನುಗಾರರ ವಿವಿಧ ಬೇಡಿಕೆಗಳ ಬಗ್ಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಬಜೆಟ್ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಿ 750 ಕೋಟಿಅನುದಾನವನ್ನು ಒದಗಿಸಿ ಮೀನುಗಾರರ ಬಹುದಶಕಗಳ ಬೇಡಿಕೆಯನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಸಮಸ್ತ ಮೀನುಗಾರರ ಪರವಾಗಿ ಬೆಳ್ಳಿಯ ದೋಣಿಯ ಸ್ಮರಣಿಕೆ ನೀಡಿ ಅಮಿತ್ ಶಾ ರವರನ್ನು ಸನ್ಮಾನಿಸಲಾಯಿತು.
ಮಲ್ಪೆ ಮೀನುಗಾರಿಕಾ ಬೋಟ್ ಸುವರ್ಣತ್ರಿಭುಜ ಹಾಗೂ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಅಮಿತ್ ಶಾ ಹಾಗೂ ಕೇಂದ್ರ ಸಚಿವರಾದ ಡಿ ವಿ ಸದಾನಂದಗೌಡ, ಅನಂತಕುಮಾರ್ ಹೆಗಡೆಯವರನ್ನು ಭೇಟಿಮಾಡಿ ಆಗ್ರಹಿಸಲಾಯಿತು. ಈ ಬಗ್ಗೆ ಶೀಘ್ರದಲ್ಲೇ ಕೇಂದ್ರರಕ್ಷಣಾ ಸಚಿವರಾದ ನಿರ್ಮಲ ಸೀತರಾಮನ್ ನೇತೃತ್ವದಲ್ಲಿಉನ್ನತ ಮಟ್ಟದ ಸಭೆ ನಡೆಸಿ ರಕ್ಷಣಾಕಾರ್ಯಚರಣೆಯನ್ನುಇನ್ನಷ್ಟು ಚುರುಕುಗೊಳಿಸುವಂತೆ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ಎಸ್ಯಡ್ಯೂರಪ್ಪ, ಸಂಸದರಾದ ಶ್ರೀ ನಳಿನ್ ಕುಮಾರ್ಕಟೀಲು, ಶಾಸಕರಾದ ಸಿ ಟಿ ರವಿ, ಲಾಲಾಜಿಆರ್. ಮೆಂಡನ್, ಮೀನು ಮಾರಾಟ ಫೆಡರೇಷನ್ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಮೀನುಗಾರರ ವೇದಿಕೆಯ ಪ್ರತಿನಿಧಿಗಳಾದ ಕರುಣಾಕರ ಸಾಲ್ಯಾನ್, ದಯಾನಂದ ಸುವರ್ಣ, ಗೋಪಾಲ ಆರ್ ಕೆ., ನಿತ್ಯಾನಂದ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.