Spread the love
ಪ್ರದರ್ಶನ ವೇಳೆಯಲ್ಲಿ ಬಾಡಿ ಬಿಲ್ಡರ್ ಕುಸಿದು ಬಿದ್ದು ಸಾವು
ಮಂಗಳೂರು: ಬಾಡಿ ಬಿಲ್ಡರ್ ಒರ್ವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ಡೋನ್ ಬಾಸ್ಕೊ ಹಾಲಿನಲ್ಲಿ ನಡೆದಿದೆ.
ಮೃತರನ್ನು ಫರಂಗೀಪೇಟೆಯ ವಿನಯ್ ರಾಜ್ (34) ಎಂದು ಗುರುತಿಸಲಾಗಿದೆ. ಮೃತರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್ ಆಗಿದ್ದರು.
ಪೋಲಿಸ್ ಮಾಹಿತಿಗಳ ಪ್ರಕಾರ ಭಾನುವಾರ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಪಂದ್ಯಾವಳಿ ನಗರದ ಡೋನ್ ಬಾಸ್ಕೊ ಹಾಲಿನಲ್ಲಿ ನಡೆಯುತ್ತಿದ್ದು ವಿನಯ್ ರಾಜ್ ಕೂಡ ಸ್ಪರ್ಧಾಕಾಂಕ್ಷಿಯಾಗಿ ಭಾಗವಹಿಸಿ ಪ್ರದರ್ಶನ ನೀಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love