Home Mangalorean News Kannada News `ಪ್ರಧಾನಮಂತ್ರಿ ಶ್ರಮ್‍ ಯೋಗಿ ಮನ್-ಧನ್‍ ಯೋಜನಾ’ ಜಾಗೃತಿ ಕಾರ್ಯಕ್ರಮ

`ಪ್ರಧಾನಮಂತ್ರಿ ಶ್ರಮ್‍ ಯೋಗಿ ಮನ್-ಧನ್‍ ಯೋಜನಾ’ ಜಾಗೃತಿ ಕಾರ್ಯಕ್ರಮ

Spread the love

`ಪ್ರಧಾನಮಂತ್ರಿ ಶ್ರಮ್‍ ಯೋಗಿ ಮನ್-ಧನ್‍ ಯೋಜನಾ’ ಜಾಗೃತಿ ಕಾರ್ಯಕ್ರಮ

ವಿದ್ಯಾಗಿರಿ: ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ರೂಪಿಸುವುದು ದೇಶದ ಪ್ರಗತಿಯ ಸಂಕೇತವಾಗಿದೆ. ವಲಸೆ ಕಾರ್ಮಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಿರುವುದರಿಂದ ಅವರನ್ನು ಒಂದೇ ಸೂರಿನಡಿ ತರುವುದು ಕ್ಲಿಷ್ಟಕರ ಸಂಗತಿ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಕೇಂದ್ರ ಸರಕಾರವು `ಪ್ರಧಾನಮಂತ್ರಿ ಶ್ರಮ್‍ಯೋಗಿ ಮನ್-ಧನ್‍ಯೋಜನಾ’ ಜಾರಿತರಲಾಗಿದೆ ಎಂದು ಕರ್ನಾಟಕ ರಾಜ್ಯ ಕೇಂದ್ರ ಕಾರ್ಮಿಕ ಸೇವೆಯ ಸೆಸ್ ಮತ್ತು ಕಲ್ಯಾಣ ಆಯುಕ್ತ ಎಮ್.ಕೆ ಶೇಖರ್ ಹೇಳಿದರು.

ಅವರು ಕಾರ್ಮಿಕಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಜಂಟಿ ಆಯೋಗದಲ್ಲಿ ನಡೆದ `ಪ್ರಧಾನಮಂತ್ರಿ ಶ್ರಮ್‍ಯೋಗಿ ಮನ್-ಧನ್‍ಯೋಜನಾ’ ಜಾಗೃತಿಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅಸಂಘಟಿತಕಾರ್ಮಿಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇವರ ಪರಿಶ್ರಮವನ್ನು ಗೌರವಿಸಿ, ಅವರಿಗೆ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ತರಲಾಗಿದೆ. ಭಾರತದ ಪ್ರಜೆಗಳಾದ ನಾವು ನಮ್ಮ ದೇಶದ ಸಂವಿಧಾನ ಹಾಗೂ ಅದನ್ನೊಳಗೊಂಡ ಕಾಯಿದೆಗಳಿಗೆ ಗೌರವ ನೀಡುವುದರ ಜತೆಗೆ ಅಭಿವೃದ್ಧಿಯೆಡೆಗೆ ಗಮನ ಹರಿಸಬೇಕು.

ಕಾರ್ಮಿಕನೋರ್ವ ನಿವೃತ್ತಿಯನ್ನು ಹೊಂದಿದ ನಂತರ ಅವನ ಜೀವನೋಪಾಯಕ್ಕೆ ಯಾವುದೇ ಆಶ್ರಯವಿರುವುದಿಲ್ಲ. ಅಂಥವರಿಗೆ ಪಿಂಚಣಿ ಧನದ ಅಗತ್ಯತೆ ತುಂಬಾ ಇರುತ್ತದೆ. ಇದೊಂದು ದೂರದೃಷ್ಟಿತ್ವ ಇರುವ ಯೋಜನೆ ಎಂದು ವೈದ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ ಹೇಳಿದರು.

ಮುಖ್ಯ ವೈದ್ಯಾಧಿಕಾರಿ ಡಾ. ರಾಮಕೃಷ್ಣ ಭಟ್, ವೈದ್ಯಾಧಿಕಾರಿಗಳಾದ ಡಾ.ಶರತ್‍ಕುಮಾರ್, ಡಾ.ಉಜ್ಮಾ ಜಾಫರ್, ಡಾ.ಉಜ್ವಲ್‍ಯು ಸುವರ್ಣ, ಫಾರ್ಮಾಸಿಸ್ಟ್ ಶ್ರೀನಿವಾಸ್ ಬಿ ಮತ್ತುಕಾರ್ಯಕ್ರಮ ಸಂಯೋಜಕ ಕೃಷ್ಣಮೂರ್ತಿ ಉಪಸ್ಥಿತರಿದ್ದರು.


Spread the love

Exit mobile version