Home Mangalorean News Kannada News ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ವಿಜ್ ಕಾರ್ಯಕ್ರಮ 

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ವಿಜ್ ಕಾರ್ಯಕ್ರಮ 

Spread the love

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ವಿಜ್ ಕಾರ್ಯಕ್ರಮ 

ಮಂಗಳೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಂದು ಆಯೋಜನೆಗೊಂಡಿರುವ ಕ್ವಿಜ್ ಕಾರ್ಯಕ್ರಮವೂ ಒಂದು. ನಮ್ಮ ಜಿಲ್ಲೆಯ ಸಂಸ್ಕøತಿ, ಚರಿತ್ರೆ, ಅಭಿರುಚಿಗಳು, ಪರಂಪರೆಯನ್ನು ಅರಿಯುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಅವರಿಂದು ನಗರದ ಪುರಭವನದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಆಯೋಜಿಸಿದ ಮಂಗಳೂರು ಕ್ವಿಜ್ ಲೀಗ್ ಹಂತ-1 ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆಯೋಜಿಸಲಾದ ಕ್ವಿಜ್ ಕಾರ್ಯಕ್ರಮ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ಇಂದು ಹುಟ್ಟುಹಬ್ಬ ಆಚರಿಸಿದ ಸರ್ಕಾರಿ ಬಿ ಎಡ್ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಅವರಿಗೆ ದೀಪ ಬೆಳಗುವ ಅವಕಾಶ ಲಭ್ಯವಾಯಿತು.

ಅಪರ ಜಿಲ್ಲಾಧಿಕಾರಿ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯ ಶೆಟ್ಟಿ, ಅರುಣ್ , ರಮ್ಯ ರಶ್ಮಿ ಕ್ಯೂ ಫ್ಯಾಕ್ಟರಿ ಇವರು ವೇದಿಕೆಯಲ್ಲಿದ್ದರು. ಕ್ವಿಜ್ ಮಾಸ್ಟರ್ ಸ್ನೇಹಜ್ ಶ್ರೀನಿವಾಸ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಸಂಬಂಧಿಸಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಾಮಾನ್ಯ ರಸಪ್ರಶ್ನೆ ಸ್ಪರ್ಧೆ ನೇತ್ರಾವತಿ ಎಕ್ಸ್‍ಪ್ರೆಸ್‍ನಲ್ಲಿ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಅಂತಿಮ ಸುತ್ತಿಗೆ ತಲಾ ಎರಡು ವಿದ್ಯಾರ್ಥಿಗಳಂತೆ 6 ತಂಡಗಳನ್ನು ಆಯ್ಕೆ ಮಾಡಲಾಯಿತು.

ನೇತ್ರಾವತಿ ಎಕ್ಸ್‍ಪ್ರೆಸ್‍ನ ರಸಪ್ರಶ್ನೆ ವಿಜೇತರಾಗಿ ಪ್ರಥಮ ಬಹುಮಾನ ವಿದ್ಯಾರ್ಥಿಗಳಾದ ಪ್ರೀತಮ್ ಉಪಾಧ್ಯ ಮತ್ತು ಪೃಥ್ವಿ ಮೊಂತೆರೋ, ದ್ವಿತೀಯ ಬಹುಮಾನವನ್ನು ಎನ್ ಐ ಟಿಕೆ ಸುರತ್ಕಲ್ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಪ್ರಜ್ಞಾ ಎನ್ ಹೆಬ್ಬಾರ್ ಮತ್ತು ರಕ್ಷಿತ್ ಕುಮಾರ್ ಜೆ, ತೃತೀಯ ಬಹುಮಾನವನ್ನು ಬಿಜೈ ಲೂಡ್ಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಾದ ಶ್ರೇಯಸ್ ಮತ್ತು ಶಾರ್ದುಲ್ ಪಡೆದುಕೊಂಡರು.

ಮಂಗಳಾ ಎಕ್ಸ್ ಪ್ರೆಸ್‍ನ ರಸಪ್ರಶ್ನೆಯ ವಿಜೇತರಾಗಿ ಪ್ರಥಮ ಬಹುಮಾನವನ್ನು ರಜತ್ ಶೆಟ್ಟಿ, ದ್ವಿತೀಯ ಬಹುಮಾನವನ್ನು ಡಾ ಅನಿಲ್ ಶೆಟ್ಟಿ ಮತ್ತು ವಿಕಾಸ್ ಮೂಡಬಿದ್ರೆ, ತೃತೀಯ ಬಹುಮಾನವನ್ನು ವಿಶ್ವಾಸ್ ಕೆ ಪೈ ಮತ್ತು ಅಣ್ಣಪ್ಪ ಕಾಮತ್ ಪಡೆದುಕೊಂಡರು.

ಮಂಗಳಾ ಎಕ್ಸ್ ಪ್ರೆಸ್‍ನ ರಸಪ್ರಶ್ನೆಯ ವಿಜೇತರನ್ನು ಹೊರತುಪಡಿಸಿ ಡಾ ನಂದಕಿಶೋರ್ ಮತ್ತು ವಿವೇಕ್ ಪಿಂಟೋ, ಶಿಲ್ಪಾ ಪೈ ಮತ್ತು ಶ್ರೀನಿವಾಸ ಕೆ ಜೆ ಮತ್ತು ನೀಲ್ ಗೊರಾಡಿಯಾ ಮತ್ತು ಕ್ಲಿಂಟನ್ ಬ್ಯಾಪ್ಟಿಸ್ಟ್ ಅಂತಿಮ ಸುತ್ತಿಗೆ ಆಯ್ಕೆಯಾದರು. ವಿಜೇತರಿಗೆ ಬಹುಮಾನವನ್ನು ಮಹಾನಗರಪಾಲಿಕೆಯ ಆಯುಕ್ತರಾದ ಮೊಹಮ್ಮದ್ ನಜೀರ್ ವಿತರಿಸಿದರು.


Spread the love

Exit mobile version