ಪ್ರಾಚೀನ ಜೀವಂತ ನಾಗರಿಕತೆ ಎಂದರೆ ಅದು ಭಾರತೀಯ ನಾಗರಿಕತೆ -ಮೇಜರ್ ಜನರಲ್ ಭಕ್ಷಿ 

Spread the love

ಪ್ರಾಚೀನ ಜೀವಂತ ನಾಗರಿಕತೆ ಎಂದರೆ ಅದು ಭಾರತೀಯ ನಾಗರಿಕತೆ -ಮೇಜರ್ ಜನರಲ್ ಭಕ್ಷಿ 

ಮಂಗಳೂರು: ಮಂಗಳೂರಿನ ಡಾ. ಟಿಎಮ್‍ಎ ಪೈ ಸಮಾವೇಶ ಕೇಂದ್ರದಲ್ಲಿ ನಡೆದ “ಲಿಟ್ ಫೆಶ್ಟ್”ನ ಎರಡನೆ ದಿನದ ಕಾರ್ಯಕ್ರಮದಲ್ಲಿ ಮೇಜರ್ ಜನರಲ್ ಜಿ ಡಿ ಭಕ್ಷಿಯವರ “ಚಿಲ್ಡ್ರನ್ ಆಫ್ ಸರಸ್ವತಿ” ಎಂಬ ಪುಸ್ತಕ ಕುರಿತು ಶಿಫಾಲಿ ವೈದ್ಯ, ಜಿ ಡಿ ಭಕ್ಷಿಯವರ ಜತೆ ಚರ್ಚೆ ನಡೆಸಿದರು.

ಮೇಜರ್ ಜನರಲ್ ಭಕ್ಷಿ ಮಾತನಾಡಿ ಮೊದಲು ನಮ್ಮ ಮೂಲ ಯಾವುದು, ನಮ್ಮ ಗುರುತಿಸುವಿಗೆ ಏನೆಂದು ಪ್ರತಿಯೊಬ್ಬನು ಅರಿತುಕೊಳ್ಳಬೇಕು ಅಗ ಮಾತ್ರ ನಮ್ಮ ಇತಿಹಾಸವನ್ನು ಕಂಡುಕೊಳ್ಳಲು ಸಾಧ್ಯ. ಅಲ್ಲದೇ ಸ್ವಾತಂತ್ರ್ಯದ ನಂತರ ನಾವು ಯಾಕೆ ನಮ್ಮ ಇತಿಹಾಸವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ನಾವೆಲ್ಲ ಪಾಶ್ಚಿಮಾತ್ಯ ಇತಿಹಾಸಕಾರರು ಬೈಬಲ್‍ನ್ನು ಸಾಕ್ಷೀಕರಿಸಿ ಹೇಳುವ ಸಿದ್ದಾಂತವನ್ನು ಒಪ್ಪುತ್ತಿದ್ದೆವೆಯೇ ಹೊರತು ನಮ್ಮ ಇತಿಹಾಸಕಾರರು ವೇದವನ್ನು ಆಧಾರಿಸಿ ಹೇಳುವ ಅಂಶವನ್ನು ನಾವು ಒಪ್ಪಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು.

ಭಾರತೀಯ ನಾಗರೀಕತೆ ಪ್ರಪಂಚದ ಉಳಿದೆಲ್ಲಾ ನಾಗರೀಕತೆಗಿಂತ ಪ್ರಾಚೀನವಾಗಿದ್ದು ಎಂದು ಉಲ್ಲೇಖಿಸಿದ ಅವರು, ನಮ್ಮ ಪ್ರಾಚೀನ ನಾಗರೀಕತೆಯ ಜನರು ಅತ್ಯಾದುನಿಕ ವ್ಯವಸ್ಥೆಯಲ್ಲಿ ಬದುಕುತಿದ್ದ ಕಾಲದಲ್ಲಿ ಪಾಶ್ಚಿಮಾತ್ಯ ನಾಗರೀಕತೆಯ ಜನರು ಗುಹೆ ಪೊಟರೆಗಳಲ್ಲಿ ವಾಸಿಸುತ್ತಿದ್ದು, ಪ್ರಾಣಿಯ ಚರ್ಮ, ಸೊಪ್ಪುಗಳನ್ನು ಬಳಸಿ ತಮ್ಮ ದೇಹವನ್ನು ಮುಚ್ಚಿಕೊಳ್ಳುತ್ತಿದ್ದರು ಎಂದರು. ಇದರಿಂದ ನಮ್ಮ ನಾಗರೀಕತೆಯ ಪ್ರಾಚೀನತೆಯ ದರ್ಶನವಾಗುತ್ತದೆ ಎಂದರು.

ಭೂಮಿಯಲ್ಲಿರುವ ಪ್ರಾಚೀನ ಜೀವಂತ ನಾಗರಿಕತೆ ಎಂದರೆ ಅದು ಭಾರತೀಯ ನಾಗರಿಕತೆ. ಭಾರತವು ಸುಮಾರು 600 ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದರೂ ಇಂದೂ ಭಾರತ ಶೇಕಡ 80ರಷ್ಟು ಹಿಂದುಗಳಿಂದ ಕೂಡಿದ ದೇಶವಾಗಿದೆ. ಭಾರತವು ಇಂದು ಹೆಚ್ಚಿನ ಯುವ ಸಮುದಾಯವನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.

ಉತ್ತರ ಭಾರತದಲ್ಲಿ ಅನೇಕ ಸಂಸ್ಕøತಿಯು ಕಣ್ಮರೆಯಾಗುತ್ತಿದ್ದು, ಆದರೆ ದಕ್ಷಿಣ ಭಾರತವು ತನ್ನ ಸಂಸ್ಕøತಿಯನ್ನು ಕಾಪಿಡುತ್ತಾ ಬಂದಿದೆ. ಯಾವಾಗ ಭಾರತವು ಪುನಃ ಸಾಂಸ್ಕøತಿಕ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಡವಾಗುತ್ತದೋ ಅಂದೂ ಸರಸ್ವತಿ ನದಿಯು ಪುನಃ ಹರಿಯಲು ಆರಂಭಿಸಿದಂತೆ ಅಂದು ಭಾರತವು ಆಕಾಶವನ್ನು ಸ್ಪರ್ಶಿಸುತ್ತದೆ ಎಂದರು.

ಆರ್ಯನ್ ಮತ್ತು ದ್ರಾವಿಡಿಯನ್, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಜಾತಿಗಳ ಮೂಲಕ ಬ್ರಿಟಿಷರು ಭಾರತೀಯರನ್ನು ವಿಭಾಗಿಸಲು ಅನೇಕ ಪ್ರಯತ್ನ ನಡೆಸಿದರು. ಅವರ ಪ್ರಯತ್ನ ಸಂಪೂರ್ಣವಾಗಿ ಸುಳ್ಳನ್ನು ಆಧರಿಸಿದ್ದವು. ಗಾಂಧೀಜಿ ಅಹಿಂಸಾ ತತ್ವ ಎಲ್ಲ ಸಂಧರ್ಭದಲ್ಲೂ ಒಪ್ಪಿತವಾದ ಸಿದ್ದಾಂತವಲ್ಲವಾಗಿದ್ದು, ನಮ್ಮನ್ನು ಪರಕೀಯರು ಆಕ್ರಮಣ ಮಾಡಿದಾಗಲೂ ನಾವು ಶಾಂತಿಯ ಮಂತ್ರವನ್ನು ಪಠಿಸಿದರೆ, ನಾವು ಪರಕೀಯದ ಸ್ವತ್ತಾಗಬಹುದು. ಆದ್ದರಿಂದ ಆಕ್ರಮಣಕಾರರಿಂದ ನಮ್ಮನು ನಾವು ರಕ್ಷಿಸಿಕೊಳ್ಳಲು ಹೋರಾಡಲೇಬೇಕು.


Spread the love