ಪ್ರಾಣಿಗಳನ್ನು ಅವುಗಳ ಪಾಡಿಗೆ ಬದುಕಲು ಬಿಡಿ: ಪ್ರಾಣಿ ಪಕ್ಷಿ ಪ್ರೇಮಿ ತೌಸೀಫ್ ಅಹ್ಮದ್

Spread the love

ಪ್ರಾಣಿಗಳನ್ನು ಅವುಗಳ ಪಾಡಿಗೆ ಬದುಕಲು ಬಿಡಿ: ಪ್ರಾಣಿ ಪಕ್ಷಿ ಪ್ರೇಮಿ ತೌಸೀಫ್ ಅಹ್ಮದ್

ಮೂಡುಬಿದಿರೆ: ನಮ್ಮ ಸುತ್ತಮುತ್ತಲಲ್ಲಿ ಬದುಕುವ ಜೀವಿಗಳಿಗೆ ನಮ್ಮಂತೆಯೇ ಜೀವಿಸುವ ಹಕ್ಕಿದೆ. ಆದರೆ ನಾವಿಂದು ಅಂತಹ ಜೀವಿಗಳನ್ನು ಕಡೆಗಣಿಸಿ, ನಮ್ಮ ಸ್ವಾರ್ಥವನ್ನು ಮೆರೆಯುತ್ತಿದ್ದೆವೆ. ಯುವ ಜನತೆ ಇಂತಹ ಮನಸ್ಥಿತಿಯಿಂದ ಹೊರಬಂದು ಎಲ್ಲವನ್ನು ಪ್ರೀತಿಸುವಂತಾಗಬೇಕು ಎಂದು ಪ್ರಾಣಿ ಪಕ್ಷಿ ಪ್ರೇಮಿ ತೌಸೀಫ್ ಅಹ್‍ಮದ್ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಪದವಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಜರುಗಿದ ಸ್ಪೀಕರ್ಸ್ ಕ್ಲಬ್‍ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತಿಂಗಳಿಗೆ ಹತ್ತು ಸಾವಿರ ಖರ್ಚು ಮಾಡಿ ವಿದೇಶಿ ನಾಯಿ ಮರಿಯನ್ನು ಸಾಕುವ ಜನರು, ನಮ್ಮ ದೇಶದ ನಾಯಿಗಳಿಗೆ ಬೀದಿ ನಾಯಿಗಳೆಂದು ಪಟ್ಟ ಕಟ್ಟಿ, ಹಿಂಸೆ ನೀಡುತ್ತವೆ. ಕೆಲವರು ಪ್ರಾಣಿ ಪಕ್ಷಿಗಳನ್ನು ಅಕ್ಕರೆಯಿಂದ ತಂದು, ಮನೆಯಲ್ಲಿ ಗೂಡು, ಪಂಜರಗಳಲ್ಲಿ ಬಂಧಿಸಿ ಇಟ್ಟು ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಮನುಷ್ಯರು ತಾವು ಉತ್ತಮ ಬದುಕನ್ನು ಕಟ್ಟಿಕೊಳ್ಳುವಂತೆಯೇ ಇತರರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ, ಸಂತೋಷದಿಂದ ಬದುಕಲು ಬಿಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ಪೀಕರ್ಸ್ ಕ್ಲಬ್ ಸಂಯೋಜಕಿ, ಶಿಲ್ಪಾ ಭಟ್ ಎನ್ ಎಚ್, ಕಾಮಾರ್ಸ ವೃತ್ತಿಪರ ವಿಭಾಗದ ಸಂಯೋಜಕ ಅಶೋಕ್ ಕೆ.ಜಿ, ಸ್ಪೂರ್ತಿ ಭಟ್, ಅಳ್ವಾಸ್ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲಾವಣ್ಯ ಸ್ವಾಗತಿಸಿ, ಗಂಗಾ ವಂದಿಸಿದರು. ಸಿಂಚನಾ ಹೆಬ್ಬಾರ್ ನಿರೂಪಿಸಿದರು.


Spread the love