ಪ್ರಾಧಿಕಾರಕ್ಕೆ ಸದಸ್ಯರ ನೇಮಕಾತಿ, ಕಾಪು ಕ್ಷೇತ್ರದ ಕಡೆಗಣನೆ – ಹರೀಶ್ ಕಿಣಿ

Spread the love

ಪ್ರಾಧಿಕಾರಕ್ಕೆ ಸದಸ್ಯರ ನೇಮಕಾತಿ, ಕಾಪು ಕ್ಷೇತ್ರದ ಕಡೆಗಣನೆ – ಹರೀಶ್ ಕಿಣಿ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ನೇಮಕಾತಿಯಲ್ಲಿ ಕಾವು ಕ್ಷೇತ್ರದ ಗ್ರಾಮಗಳಾದ ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, 80 ಬಡಗಬೆಟ್ಟು ಗ್ರಾಮಗಳ ಯಾವೊಬ್ಬನನ್ನು ಸದಸ್ಯರನ್ನಾಗಿ ನೇಮಿಸದೇ ರಾಜ್ಯ ಬಿ.ಜೆ.ಪಿ ಸರಕಾರ ಆ ಭಾಗದ ಜನರಿಗೆ ಅನ್ಯಾಯ ವೆಸಗಿದೆ.ಇದು ಕಾವು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಅವರ ಈ ಭಾಗದ ಜನರ ಕುರಿತ, ಈ ಭಾಗದ ಅಭಿವೃದ್ಧಿ ಕುರಿತು ಅವರ ನಿರ್ಲಕ್ಷ್ಯ ಹಾಗೂ ವೈಫಲ್ಯವನ್ನು ತೋರಿಸುತ್ತದೆ ಎಂದು ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಕಿಣಿ ಹೇಳಿದ್ದಾರೆ.

ಈ ಭಾಗದಿಂದ ಸಾಕಷ್ಟು ಆದಾಯ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂದಾಯವಾಗುತ್ತಿದೆ. ಈ ಹಿಂದಿನ ಪ್ರಾಯಶಃ ಎಲ್ಲ ನೇಮಕಾತಿಗಳಲ್ಲಿ ಆ ಭಾಗದ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು… ಸದಸ್ಯರನ್ನಾಗಿ, ಅಧ್ಯಕ್ಷರನ್ನಾಗಿ ನೇಮಕಗೊಳಿಸುತ್ತಿದರು. ಆದರೆ ಈ ಬಾರಿ ಯಾವುದೇ ಸದಸ್ಯರನ್ನು ನೇಮಕಗೊಳಿಸುವ ಇದ್ದುದರಿಂದ ಅಭಿವೃದ್ಧಿಗೆ ಹಿನ್ನಡೆ ಆಗುವ ಸಂಭವವಿದೆ. ಆದುದರಿಂದ ಅನ್ಯಾಯವನ್ನು ಸರಿಪಡಿಸಿ, ಈ ಪ್ರದೇಶದ ಓರ್ವ ನನ್ನಾದರೂ ಸದಸ್ಯರನ್ನಾಗಿ ನೇಮಕ ಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love