ಪ್ರಾಪರ್ಟಿ ಕಾರ್ಡ್ ಕಚೇರಿಗೆ ಶಾಸಕ ಡಿ ವೇದವ್ಯಾಸ ಕಾಮತ್ ದೀಢಿರ್ ಭೇಟಿ
ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪ್ರಾಪರ್ಟಿ ಕಾರ್ಡ್ ಕಚೇರಿಗೆ ದೀಢಿರ್ ಭೇಟಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.
ಬೇರೆ ಕಡೆ ಸಭೆಯಲ್ಲಿ ಇದ್ದ ಶಾಸಕ ಕಾಮತ್ ಅವರು ಪ್ರಾಪರ್ಟಿ ಕಾರ್ಡ್ ಕಚೇರಿಯಲ್ಲಿ ಆಗುತ್ತಿರುವ ತೊಂದರೆಯನ್ನು ಅನುಭವಿಸಿದ ನಾಗರಿಕರೊಬ್ಬರು ಅಲ್ಲಿಂದಲೇ ಮಾಡಿದ ಕರೆಗೆ ತಕ್ಷಣ ಸ್ಪಂದಿಸಿ ಪ್ರಾಪರ್ಟಿ ಕಚೇರಿಗೆ ಧಾವಿಸಿದರು.
ನಂತರ ಮಾತನಾಡಿದ ಶಾಸಕ ಕಾಮತ್ ಅವರು ಹಿಂದೆ ಕಂದಾಯ ಸಚಿವರಾಗಿದ್ದ ಆರ್ ವಿ ದೇಶಪಾಂಡೆಯವರಿಗೆ ಸವಿಸ್ತಾರವಾಗಿ ಪ್ರಾಪರ್ಟಿ ಕಾರ್ಡ್ ಸಮಸ್ಯೆಯನ್ನು ವಿವರಿಸಿದ್ದೆ. ಮಂಗಳೂರಿನ ಜನರ ಪರವಾಗಿ ಧ್ವನಿ ಎತ್ತಿದ್ದೆ. ಆದರೂ ಹಿಂದಿನ ಸರಕಾರ ಏನೂ ಮಾಡಿರಲಿಲ್ಲ. ಇಲ್ಲಿನ ಸಮಸ್ಯೆಗಳಿಗೆ ಮುಖ್ಯ ಕಾರಣ ಪ್ರಾಪರ್ಟಿ ಕಾರ್ಡ್ ಮಾಡಿಸಲು ಬರುವ ಜನರಿಗೆ ಸರಿಯಾದ ಸೌಲಭ್ಯ ಇಲ್ಲದೇ ಇರುವುದು. ಅದರಿಂದ ಇಲ್ಲಿ ತುಂಬಾ ರಷ್ ಇರುತ್ತದೆ. ಹಾಗೆ ಎರಡನೇಯದಾಗಿ ಸಾಫ್ಟ್ ವೇರ್ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಇನ್ನು ಪ್ರಾಪರ್ಟಿ ಕಾರ್ಡ್ ರಿಜಿಸ್ಟ್ರೇಶನ್ ಮಾಡಿಸಲು ಬರುವ ನಾಗರಿಕರಿಗೆ ಮುಕ್ತವಾಗಿರುವ ವ್ಯವಸ್ಥೆ ಮಾಡಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತರುತ್ತೇನೆ. ಹಾಗೆ ನೂತನ ಕಂದಾಯ ಸಚಿವರಿಗೆ ಈ ಬಗ್ಗೆ ಶೀಘ್ರ ಸ್ಪಂದಿಸಿ ಶಾಶ್ವತ ಪರಿಹಾರಕ್ಕೆ ಮನವಿ ಮಾಡುತ್ತೇನೆ ಎಂದು ಶಾಸಕ ಕಾಮತ್ ಹೇಳಿದರು.
ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ವಿನಯ್ ಶೆಟ್ಟಿ ಇದ್ದರು.