ಫರಂಗಿಪೇಟೆಯಲ್ಲಿ ತಲವಾರು ದಾಳಿಗೆ ಎರಡು ಬಲಿ; ಮೂರು ಮಂದಿ ಗಾಯ
ಮಂಗಳೂರು: ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಇಬ್ಬರು ಮೃತಪಟ್ಟು ಇಬ್ಬರು ಮಂದಿ ಗಾಯಗೊಂಡ ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತರನ್ನು ಅಡ್ಯಾರ್-ಕಣ್ಣೂರು ನಿವಾಸಿ ಫಯಾಝ್ ಎಂದು ಗುರುತಿಸಲಾಗಿದ. ಗಾಯಗೊಂಡ ಫಝಲ್ ಮತ್ತು ಮುಸ್ಥಾಖ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಗಳ ಪ್ರಕಾರ ಎರಡು ತಂಡಗಳೊಂದಿಗೆ ಜಗಳ ನಡೆದಿದ್ದು, ಧಾಳಿಯಲ್ಲಿ ಫಯಾಝ್ ಎಂಬವರು ಸ್ಥಳದಲ್ಲೆ ಮೃತಪಟ್ಟಿದ್ದು, ಝೀಯಾ ಹಮೀಝ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತರ ಎರಡು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರುಗಳಲ್ಲಿ ಬಂದ ತಂಡ ಏಕಾಎಕಿ ತಲವಾರು ದಾಳಿ ನಡೆಸಿದ್ದು ಇದರಿಂದ ಗಂಭೀರ ಗಾಯಗೊಂಡ ಫಯಾಝ್ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.