ಫಾದರ್ ಮುಲ್ಲರ್ ಹೋಮಿಯೋಪತಿಕ್ ವೈದ್ಯಕೀಯ ಕಾಲೇಜು, ಆಸ್ಪತ್ರೆ – ವಿಶ್ವ ಹೋಮಿಯೋಪತಿ ದಿನಾಚರಣೆ

Spread the love

ಫಾದರ್ ಮುಲ್ಲರ್ ಹೋಮಿಯೋಪತಿಕ್ ವೈದ್ಯಕೀಯ ಕಾಲೇಜು, ಆಸ್ಪತ್ರೆ – ವಿಶ್ವ ಹೋಮಿಯೋಪತಿ ದಿನಾಚರಣೆ

ಹೋಮಿಯೋಪತಿಯನ್ನು ವೈಜ್ಞಾನಿಕ ವಿಚಾರಗಳೊಂದಿಗೆ ಜನರಿಗೆ ಪ್ರಸ್ತುತಪಡಿಸುವಲ್ಲಿ ಫಾದರ್ ಮುಲ್ಲರ್ ಸಂಸ್ಥೆ ಯಶಸ್ವಿ ಹೆಜ್ಜೆಯನ್ನಿಟ್ಟಿದ್ದು, ವಿದ್ಯಾರ್ಥೀಗಳು ಪ್ರಸ್ತುತತೆಯನ್ನು ಅಳವಡಿಸಿ ಅಧ್ಯಯನದೊಂದಿಗೆ ಸಂಶೋಧನೆ ನಡೆಸುವ ಮನೋಭಾವ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಸಿಎಜಿ ಇಂಡಿಯಾದ ಸೀನಿಯರ್ ಅಕೌಂಟೆAಟ್ ಜನರಲ್ ಡಾ| ರಾಹುಲ್ ಪಿ. ಹೇಳಿದರು.

ಹೋಮಿಯೋಪತಿ ಜನಕ ಡಾ| ಸ್ಯಾಮುವೆಲ್ ಹಾನ್ನಿಮನ್ 269ನೇ ಜನ್ಮದಿನದ ಸ್ಮರಣಾರ್ಥ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿಕ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಮಂಗಳವಾರ ಜರಗಿದ ವಿಶ್ವ ಹೋಮಿಯೋಪತಿ ದಿನ -2024 ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಹೊರಜಗತ್ತಿನ ದಾಸ್ಯಗಳಿಗೆ ಬಲಿಯಾಗದೆ, ಜೀವನದ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಿರಿ, ತನ್ನ ಸಹಪಾಠಿಗಳು ಹೋಮಿಯೋಪತಿಯಲ್ಲಿ ವೃತ್ತಿ ಮುಂದುವರಿಸಿ ಯಶಸ್ಸಿನ ಹಾದಿಯಲ್ಲಿದ್ದಾರೆ. ಯಶಸ್ಸಿಗೆ ವಯಸ್ಸಿನ ವಯೋಮಿತಿಯಲ್ಲ. ನಿರಂತರ ಅಧ್ಯಯನ ನಡೆಸುವವರಾಗಿರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ| ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ಹೋಮಿಯೋಪತಿ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದವರು ವಿವಿಧ ಕ್ಷೇತ್ರಗಳಲ್ಲಿ ಇದ್ದರೂ ಯಶಸ್ಸಿನ ಹಾದಿಯಲ್ಲಿದ್ದಾರೆ ಎಂದರು.

ಹೋಮಿಯೋಪತಿ ದಿನಾಚರಣೆ ಮೂಲಕ ಹಳೇಯ ವಿದ್ಯಾರ್ಥಿಗಳನ್ನು ಹಾಗೂ ಅವರ ವ್ಯಕ್ತಿತವಗಳನ್ನು ಮೆಲುಕು ಹಾಕುವ ಕಾರ್ಯ ಆಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕೇರಳ ಸರಕಾರದ ಹೋಮಿಯೋಪತಿ ವಿಭಾಗದ ವೈದ್ಯಕೀಯ ಅಧಿಕಾರಿ ಡಾ| ಜೆರಾಲ್ಡ್ ಜಯಕುಮಾರ್ ಮತ್ತು ಡಾ| ಬಿನುರಾಜ್ ಟಿ.ಕೆ. ಜತೆಗೂಡಿ ಹೊರತಂದ ‘ಹೋಮಿಯೋ ಎವಿಡೆನ್ಸ್ ಡಾಟ್‌ಕಾಂ ಎಂಬ ಡಿಜಿಟಲ್ ಡಾಟಾಬೇಸ್ ವೆಬ್‌ಸೈಟ್‌ಗೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತಾಧಿಕಾರಿ ಫಾ| ರೋಷನ್ ಕ್ರಾಸ್ತಾ ಬಿಡುಗಡೆಗೊಳಿಸಿದರು.


Spread the love