ಫಿಯೋನಾ ಕೊಲೆ ಆರೋಪಿ ಸ್ಯಾಮ್ಸನ್ ಗಾಂಜಾ ವ್ಯಸನಿ – ಡಾ.ಪಿ.ಎಸ್. ಹರ್ಷಾ

Spread the love

ಫಿಯೋನಾ ಕೊಲೆ ಆರೋಪಿ ಸ್ಯಾಮ್ಸನ್ ಗಾಂಜಾ ವ್ಯಸನಿ – ಡಾ.ಪಿ.ಎಸ್. ಹರ್ಷಾ

ಮಂಗಳೂರು: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್ ಕುಟಿನ್ಹಾ (16) ಕೊಲೆಯ ಆರೋಪಿ ಸ್ಯಾಮ್ಸನ್ ಗಾಂಜಾ ವ್ಯಸನಿ ಆಗಿರುವುದು ಖಚಿತವಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷಾ ತಿಳಿಸಿದ್ದಾರೆ.

ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಯಲ್ಲಿ ಮಾತನಾಡಿದ ಅವರು, ಸ್ವೀಡಲ್ ತಂದೆ ನೀರಿನ ಕಂಟ್ರಾಕ್ಟ್ ಆಗಿದ್ದು ಉದ್ಯಮದಲ್ಲಿ ನಷ್ಟ ಅನುಭವಿಸಿದ್ದರು. ತಾಯಿ ಪ್ರತಿಷ್ಠಿತ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಸಹೋದರ ಸ್ಯಾಮ್ಸನ್ ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವಾಗಲೇ ದುಶ್ಚಟಕ್ಕೆ ಬಲಿಯಾಗಿ ಕಾಲೇಜಿನಿಂದ ಹೊರಬಿದ್ದಿದ್ದ. ಬಳಿಕ ಮನೆಯಲ್ಲೇ ಕಾಲಹರಣ ಮಾಡಿಕೊಂಡು ದಿನಕಳೆಯುತ್ತಿದ್ದ ವಿಷಯ ಪೊಲೀಸರಿಗೆ ಸಿಕ್ಕಿತು. ಕೂಡಲೇ ಸಂಶಯದ ಮೇಲೆ ಆತನನ್ನು ತೀವ್ರ ವಿಚಾರಣೆಗೆ ಪೊಲೀಸರು ಮುಂದಾದರು. ಈ ಸಂದರ್ಭ ಅವನು ನೀಡುತ್ತಿದ್ದ ಉತ್ತರದಲ್ಲಿ ತಾಳೆಯಾಗುತ್ತಿರಲಿಲ್ಲ ಮತ್ತು ಕೆಲವೊಂದು ಪ್ರಶ್ನೆಗೆ ತಬ್ಬಿಬ್ಬಾಗುತ್ತಿದ್ಘಿ. ಈ ಸಂದರ್ಭ ನಮ್ಮ ಬಳಿ ಲಭ್ಯವಿದ್ದ ಸಾಕ್ಷ್ಯಾಧಾರದ ಮೇಲೆ ನಿಖರವಾದ ಪ್ರಶ್ನೆ ಕೇಳಿದಾಗ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬಂದು ತಂಗಿಯನ್ನು ತಾನೇ ಸುತ್ತೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.

ಪ್ರಾಥಮಿಕ ತನಿಖೆಯಲ್ಲಿ ಆತ ಒಬ್ಬನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಗಿ ಹಾಗೂ ಮೃತದೇಹವನ್ನು ತೋಡೊಂದಕ್ಕೆ ಎಸೆದಿರುವುದಾಗಿ ಹೇಳಿದ್ದಾನೆ. ನಿರಂತರ ಮಳೆ ಬರುತ್ತಿದ್ದ ಕಾರಣ ಆ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾನೆ ಎಂದು ಅವರು ಮಾಹಿತಿ ನೀಡಿದರು.

ಅ. 8ರಂದು ಫಿಯೋನಾ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ನಾಪತ್ತೆಯಾಗಿದ್ದಾಳೆ, ಯಾರೋ ಅಪಹರಿಸಿರುವ ಸಾಧ್ಯತೆಯಿದೆಯೆಂದು ಕೊಣಾಜೆ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ತನಿಖೆ ಆರಂಭಿಸಿದ್ದರು. ಪ್ರಾಥಮಿಕ ಹಂತದಲ್ಲಿ ಹಲವಾರು ಅನುಮಾನಗಳ ಹಿನ್ನೆಲೆಯಲ್ಲಿ ಸಹಪಾಠಿಗಳು, ಒಡನಾಡಿಗಳ ವಿಚಾರಣೆ ನಡೆಸಲಾಯಿತು. ತಾಂತ್ರಿಕವಾಗಿಯೂ ಬೇರೆ ಬೇರೆ ಆಯಾಮಗಳಲ್ಲಿ ಪರಿಶೀಲನೆ ನಡೆಯಿತು. ಆದರೆ ಎಲ್ಲೂ ಯಾವುದೇ ಸಾಕ್ಷ್ಯ ಸಿಗಲಿಲ್ಲ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಆಳವಾಗಿ ತನಿಖೆ ನಡೆಸಿದಾಗ ಕೊಲೆಯಾದ ಸ್ವೀಡಲ್ ಕುಟಿನ್ಹಾ ಅ.8ರಂದು ಮನೆಯಿಂದ ಹೊರಗೆ ಹೋದದ್ದನ್ನು ಯಾರೂ ನೋಡಿರಲಿಲ್ಲ ಮಾತ್ರವಲ್ಲ ಈ ಬಗ್ಗೆ ಯಾವುದೇ ಕುರಹು ಸಿಕ್ಕಿಲ್ಲ. ಮೊಬೈಲ್ ಕೂಡಾ ಕೋಣಾಜೆ ವ್ಯಾಪ್ತಿಯಲ್ಲಿರುವಾಗಲೇ ಸ್ವಿಚ್ ಆಫ್ ಆಗಿದೆ. ಈ ಕಾರಣದಿಂದ ಪೊಲೀಸರು ಮನೆಯವರ ತೀವ್ರ ವಿಚಾರಣೆಗೆ ಮುಂದಾದರು ಎಂದು ಹೇಳಿದರು.

ಅರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಕ್ಕೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.


Spread the love