ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಮೂರನೇ ದಿನ ಪುರುಷರ ಹೈಜಂಪ್‌ನಲ್ಲಿ ಕರ್ನಾಟಕದ ಹರ್ಷಿತ್ ಚಿನ್ನ ಗೆದ್ದಿದ್ದಾರೆ.
ಪುರುಷರ ಹೈಜಂಪ್‌ನಲ್ಲಿ ಹರ್ಷಿತ್ 2.13 ಮೀ. ಹಾರಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಇದೇ ಪಂದ್ಯಾಟದಲ್ಲಿ ಕರ್ನಾಟಕದವರೇ ಆದ ಸುಪ್ರೀತ್ ರಾಜ್ ಮತ್ತು ಆರ್ಮಿಯ ಶ್ರೀನೀಶ್ 2.09 ಮೀ. ಹಾರುವ ಮೂಲಕ ಬೆಳ್ಳಿ ಪಡೆದಿದ್ದಾರೆ. ಈ ಮೂಲಕ ಕರ್ನಾಟಕ ಫೆಡರೇಶನ್ ಕಪ್‌ನಲ್ಲಿ ಒಟ್ಟು ನಾಲ್ಕು ಚಿನ್ನ ಪಡೆದಿದೆ.
ಟ್ರಿಪಲ್ ಜಂಪ್‌ನಲ್ಲಿ ಕರ್ನಾಟಕ ಬೆಳ್ಳಿ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಮೂರನೇ ದಿನ ಮಹಿಳಾ ಟ್ರಿಪಲ್ ಜಂಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಜಾಯ್‌ಲಿನ್ ಎಂ. ಲೋಬೊ 12.62 ಮೀ. ದೂರ ಹಾರಿ ಬೆಳ್ಳಿ ಪಡೆದಿದ್ದಾರೆ.
ಇದೇ ಸ್ವರ್ಧೆಯಲ್ಲಿ ಕೇರಳದ ಶೀನಾ ಎನ್.ವಿ. ಚಿನ್ನ ಮತ್ತು ಕೇರಳದ ಶಿಲ್ಪಾ ಚಾಕೊ ಕಂಚು ಪಡೆದರು. ಪುರುಷರ ಪೋಲ್‌ವಾಲ್ಟ್ನಲ್ಲಿ ಕರ್ನಾಟಕದ ಪಿ. ಬಾಲಕೃಷ್ಣ ಬೆಳ್ಳಿ, ತಮಿಳುನಾಡಿನ ಜೆ. ಪ್ರೀತ್ ಚಿನ್ನ ಮತ್ತು ಟಾಟಾ ಮೋಟಾರ್ನ ಕೃಷ್ಣ ಪ್ರಶಾಂತ್ ಕಂಚು ಗೆದ್ದಿದ್ದಾರೆ.
ಹ್ಯಾಮರ್ ಎಸೆತದಲ್ಲಿ ಉತ್ತರ ಪ್ರದೇಶಕ್ಕೆ ಚಿನ್ನ:
ಪುರುಷರ ಹ್ಯಾಮರ್ ಎಸೆತದಲ್ಲಿ ಇಂಡಿಯನ್ ನೇವಿಯ ನೀರಜ್ ಕುಮಾರ್ ಚಿನ್ನ ಗೆದಿದ್ದಾರೆ. ತಮಿಳುನಾಡಿನ ಎನ್. ಶಂಕರ್ ಬೆಳ್ಳಿ ಮತ್ತು ಉತ್ತರಖಂಡದ ಅಭಿಷೇಕ್ ಯಾದವ್ ಕಂಚು ಪಡೆದ್ದಿದ್ದಾರೆ.
ಮಹಿಳಾ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ರಿತು ಧಿಮನ್ ಚಿನ್ನ ಗೆದ್ದಿದ್ದಾರೆ. ಪಂಜಾಬ್‌ನ ಸರಬ್‌ಜೀತ್ ಕೌರ್ ಬೆಳ್ಳಿ ಮತ್ತು ಒಡಿಶಾದ ಸರಿತಾ ಸಿಂಗ್ ಕಂಚು ಗೆದ್ದರು.
ಆರ್ಮಿಯ ಜೈವೀರ್ ಸಿಂಗ್ ಚಿನ್ನ:
ಪುರುಷರ 3,000 ಮೀ.ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಆರ್ಮಿಯ ಜೈವೀರ್ ಸಿಂಗ್ ಚಿನ್ನ ಗೆಲ್ಲುವ ಮೂಲಕ ಚೀನದ ವೂಹಾನ್‌ನಲ್ಲಿ ನಡೆಯುವ ಏಶ್ಯನ್ ಆ್ಯತ್ಲೆಟಿಕ್ ಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಆರ್ಮಿಯ ನವೀನ್ ಕುಮಾರ್ ಬೆಳ್ಳಿ ಗೆದ್ದಿದ್ದಾರೆ. ಮಹಾರಾಷ್ಟ್ರದ ಸಚಿನ್ ಬಾಜಿರಾವ್ ಕಂಚು ಪಡೆದರು.
ಹರ್ಯಾಣದ ಪರಿತಿಗೆ ಚಿನ್ನ:
ಮಹಿಳಾ 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಹರಿರ್ಯಾಣದ ಪರಿತಿ ಲಾಂಬಾ ಚಿನ್ನ ಗೆದ್ದಿದ್ದಾರೆ. ಉತ್ತರಪ್ರದೇಶದ ನಂದಿನಿ ಗುಪ್ತಾ ಬೆಳ್ಳಿ ಮತ್ತು ತಮಿಳುನಾಡಿನ ಎಸ್. ಪದ್ಮಾವತಿ ಕಂಚು ಪಡೆದಿದ್ದಾರೆ.