ಫೆಬ್ರವರಿ 10ರೊಳಗೆ ಪಡಿತರ ನೀಡಲು ಕ್ರಮ- ಜಿಲ್ಲಾಧಿಕಾರಿ

Spread the love

ಫೆಬ್ರವರಿ 10ರೊಳಗೆ ಪಡಿತರ ನೀಡಲು ಕ್ರಮ- ಜಿಲ್ಲಾಧಿಕಾರಿ

ಉಡುಪಿ : ಆಹಾರ ಇಲಾಖೆಯಲ್ಲಿ ಸುಧಾರಣೆ ತರಲು ಎಲ್ಲಾ ವ್ಯವಹಾರಗಳನ್ನು ಗಣಕೀಕರಣ ಮಾಡುವ ಪ್ರಕ್ರಿಯೆ ಜಾರಿಯಲ್ಲಿ ಇರುವುದರಿಂದ ಫೆಬ್ರವರಿ 2017 ರ ಮಾಹೆಯ ಒಂದನೇ ತಾರೀಕಿನಿಂದ ಪಡಿತರ ವಿತರಣೆ ಮಾಡುವಲ್ಲಿ ವಿಳಂಬವಾಗಿರುತ್ತದೆ. ಆದರೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಇದೇ ತಿಂಗಳ 10ರೊಳಗೆ ಪಡಿತರವನ್ನು ಲಭ್ಯಗೊಳಿಸಿ, ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗುವುದು.

ಫೆಬ್ರವರಿ ಮಾಹೆಯಿಂದ ಪಡಿತರ ವಿತರಣೆಯಲ್ಲಿ ಹೆಸರು ಕಾಳನ್ನು ಸಹಾ ಸೇರಿಸಲಾಗುತ್ತಿದ್ದು, ಪಡಿತರ ಪದಾರ್ಥದಲ್ಲಿ ಅಕ್ಕಿ, ತಾಳೆ ಎಣ್ಣೆ, ಸಕ್ಕರೆ, ಉಪ್ಪು, ಬೇಳೆಕಾಳು ಹಾಗೂ ಸೀಮೆ ಎಣ್ಣೆ ಪಡೆಯಬಹುದಾಗಿದೆ.

ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಸೂಚಿಸಿದಂತೆ ಜಿಲ್ಲಾ ಮಟ್ಟದ ಅರ್ಹ ಆದ್ಯತಾ ಕುಟುಂಬಗಳ ಫಲಾನುಭವಿಗಳೂ ಆಧಾರ್ ಸೀಡಿಂಗ್ ಮಾಡಿರುವುದಿಲ್ಲವೆಂಬ ಕಾರಣಕ್ಕೆ ಉಚಿತ ಪಡಿತರ ಪಡೆಯದೇ ಇರುವುದು ಸರಿಯಲ್ಲ ಎಂಬ ಕಾರಣಕ್ಕೆ ಮತ್ತೊಂದು ಸುತ್ತಿನ ಆಧಾರ್ ಸೀಡಿಂಗ್ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾದ್ಯಂತ ಆಹಾರ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ, ಪುರಸಭೆ, ಪಟ್ಟಣ ಪಂಚಾಯತ್, ನೌಕರರ ಸಹಯೋಗದೊಂದಿಗೆ ಅರ್ಹ ಫಲಾನುಭವಿಗಳಿಂದ ಆಧಾರ್ ನಂಬರ್ ಸಂಗ್ರಹಿಸುವ ಕಾರ್ಯ ಆರಂಭವಾಗಬೇಕಿದೆ. ಈ ಹಿನ್ನಲೆಯಲ್ಲಿ ಅರ್ಹ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಯನ್ನು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ, ಪ್ರಾಂಚೈಸಿಗಳಲ್ಲಿ, ಗ್ರಾಮ ಪಂಚಾಯತ್‍ಗಳಲ್ಲಿ, ತಾಲೂಕು ಕಚೇರಿಯಲ್ಲಿ, ಪುರಸಭೆ, ಪಟ್ಟಣ ಪಂಚಾಯತ್ ಗಳಲ್ಲಿ ಆಧಾರ್‍ಗಳನ್ನು ಲಿಂಕ್ ಮಾಡಿಸಬೇಕಾಗಿರುತ್ತದೆ. ಲಿಂಕ್ ಆದ ಆಧಾರ್ ನಂಬರ್‍ಗಳು ಆಹಾರ ನಿರೀಕ್ಷಕರ ಲಾಗಿನ್‍ನಲ್ಲಿ ಮ್ಯಾಪಿಂಗ್ ಮಾಡಲು ದೊರಕುವುದು. ಆಹಾರ ನಿರೀಕ್ಷಕರು ಲಾಗ್ ಇನ್ ಮ್ಯಾಪಿಂಗ್ ಮಾಡಿ ಮುಗಿಸಲು ಸೂಚಿಸಲಾಗಿದೆ. ಒಂದು ವೇಳೆ ಆಧಾರ್ ಸಂಖ್ಯೆ ನೀಡದೆ ರದ್ದಾಗಿದ್ದಲ್ಲಿ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದವರು ಸಂಬಂಧಪಟ್ಟ ಪಂಚಾಯತ್‍ಗಳಲ್ಲಿ ಲಿಂಕ್ ಮಾಡಿಸಬೇಕು. ಪಟ್ಟಣ ಪ್ರದೇಶದವರು ಯಾವುದೇ ಪ್ರಾಂಚೈಸಿಗಳಲ್ಲಿ ಆಧಾರ್ ಜೋಡಣೆ ಮಾಡಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love