ಫೆಬ್ರವರಿ 10 ರ ಉಪವಾಸ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ

Spread the love

ಫೆಬ್ರವರಿ 10 ರ ಉಪವಾಸ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಮೂಲವಾಗಿರುವ ನೇತ್ರಾವತಿ ನದಿಯನ್ನು ಬರಡಾಗಿಸುವ ರಾಜ್ಯ ಸರಕಾರದ ಯೋಜನೆಯಾಗಿರುವ ಎತ್ತಿನ ಹೊಳೆ ಯೋಜನೆ (ನೇತ್ರಾವತಿ ನದಿ ತಿರುವು) ಯನ್ನು ಕರಾವಳಿಗರು ಕಳೆದ 3-4 ವರ್ಷಗಳಿಂದ ಪಕ್ಷ್ಷಾತೀತವಾಗಿ, ಜಾತ್ಯಾತೀತವಾಗಿ ಮತ್ತು ಧರ್ಮಾತೀತವಾಗಿ ವಿರೋದಿಸುತ್ತಲೇ ಬಂದಿದ್ದಾರೆ.
ಈ ಹೋರಾಟವನ್ನು ಕೈಗೆತ್ತಿಕೊಂಡ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯು ಅನೇಕ ಪ್ರತಿಭಟನೆಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದೆ. ಆದರೂ ರಾಜ್ಯ ಸರಕಾರ ಯಾವುದೇ ಮಾತುಕತೆಯ ಮುಖಾಂತರ ಈ ಯೋಜನೆಯನ್ನು ಕೈಬಿಡುವ ನಿರ್ಧಾರಕ್ಕೆ ಬಂದಿರುವುದಿಲ್ಲ.

ಶಾಂತಿಯುತ ಹೋರಾಟದ ದಿಕ್ಕನ್ನು ಬದಲಿಸಿರುವ ಸಮಿತಿಯ ಹೋರಾಟ ಇದೀಗ ಉಗ್ರ ಸ್ವರೂಪವನ್ನು ಪಡೆದ ನಿರ್ಧಾರದ ಪ್ರಕಾರ ಫೆಬ್ರವರಿ 10 ರಂದು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹವನ್ನು ಕೈಗೆತ್ತಿಕೊಂಡಿದೆ. ಈ ಉಪವಾಸ ಸತ್ಯಾಗ್ರದ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿ ಈ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಲಾಗುವುದು ಎಂದು ಸಮಿತಿಯು ಅದ್ಯಕ್ಷರು ಈಗಾಗಲೇ ತಿಳಿಸಿರುತ್ತಾರೆ.
ಆದ್ದರಿಂದ ಈ ಹೋರಾಟಕ್ಕೆ ದ.ಕ.ದ ಸಂಸದರಾದ ನಳಿನ್‍ಕುಮಾರ್ ಕಟೀಲ್ ರವರು ಸಂಪೂರ್ಣ ಬೆಂಬಲ ನೀಡುವುದರೊಂದಿಗೆ, ಭಾರತೀಯ ಜನತಾ ಪಾರ್ಟಿಯ ಎಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರ ಸಭೆ, ಗ್ರಾಮ ಪಂಚಾಯತ್ ಮತ್ತು ಮಂಗಳೂರು ಮಹಾನಗರಪಾಲಿಕೆಯ ಎಲ್ಲಾ ಜನಪ್ರತಿನಿದಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು,ಮಾಜಿ ಶಾಸಕರುಗಳು, ಮಾಜಿ ಸಚಿವರು ಮತ್ತು ಎಲ್ಲಾ ಜಿಲ್ಲಾ ಮತ್ತು ಮಂಡಲ ಪದಾದಿಕಾರಿಗಳು ಬೆಂಬಲ ನೀಡುವುದರೊಂದಿಗೆ, ದ.ಕ ಜಿಲ್ಲಾ ಭಾರತೀಯ ಜನತಾ ಪಾರ್ಟಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯು ಕೈಗೆತ್ತಿಕೊಂಡ ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡುತ್ತದೆ.
ಈ ಉಪವಾಸ ಸತ್ಯಾಗ್ರಹದಲ್ಲಿ ಸಾರ್ವಜನಿಕರು ಮತ್ತು ಭಾರತೀಯ ಜನತಾ ಪಾರ್ಟಿಯ ಎಲ್ಲಾ ಪ್ರಮುಖರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿ ಈ ಯೋಜನೆಯನ್ನು ಕೈಬಿಡುವ ಹಾಗೆ ಸಮಿತಿಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾದ್ಯಕ್ಷರಾದ ಸಂಜೀವ ಮಠಂದೂರುರವರು ತಿಳಿಸಿರುತ್ತಾರೆ.


Spread the love