ಫೆಬ್ರವರಿ 8 ಕ್ಕೆ ದುಬೈಯಲ್ಲಿ ಧ್ವನಿ ರಂಗ ಸಿರಿ ಉತ್ಸವ 2019
ಪ್ರೆಶಿಯಸ್ ಪಾರ್ಟೀಸ್ ಮತ್ತು ಎಂಟರ್ಟೈನ್ಮೆಂಟ್ ಅವರ ಪ್ರಸ್ತುತಿಯಲ್ಲಿ ಭಾರತೀಯ ರಂಗಭೂಮಿಯ ಶ್ರೇಷ್ಠ ಹಾಗು ಪ್ರಖ್ಯಾತ ಕನ್ನಡ ನಾಟಕಗಳನ್ನು ದುಬೈಯಲ್ಲಿ ಸತತವಾಗಿ ರಂಗವೇರಿಸುತ್ತಿರುವ ಏಕೈಕ ಕನ್ನಡ ವೇದಿಕೆ, ‘ಧ್ವನಿ ಪ್ರತಿಷ್ಠಾನ ‘ ದ 33 ನೇ ವಾರ್ಷಿಕೋತ್ಸವದ ಅಂಗವಾಗಿ “ಧ್ವನಿ” ರಂಗ ಸಿರಿ ಉತ್ಸವವನ್ನು 2019 ಫೆಬ್ರವರಿ 8 ರಂದು ಸಂಜೆ 5-15ರಿಂದ ಎಮಿರೇಟ್ಸ್ ಥಿಯೇಟರ್ ಜುಮೇರಾ, ದುಬೈಯಲ್ಲಿ ಆಯೋಜಿಸಿದ್ದಾರೆ. ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿ ‘ಮೃಚ್ಛಕಟಿಕ , ಎಂಬ ಕನ್ನಡ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ಮೃಚ್ಛಕಟಿಕ – ಸಂಸ್ಕೃತ ಮಹಾಕವಿ ಶೂದ್ರಕನಿಂದ ಸುಮಾರು 3-4 ನೇ ಶತಮಾನದಲ್ಲಿ ರಚನೆಗೊಂಡ ಭಾರತದ ಮೊಟ್ಟ ಮೊದಲ ಸಾಮಾಜಿಕ ನಾಟಕ. ಇದರಲ್ಲಿ ಕವಿ ಬಳಸಿಕೊಂಡ ಘಟನೆಗಳು ಹಾಗು ವಿಚಾರಗಳು ಇಂದಿಗೂ ಪ್ರಸುತ ಮತ್ತು ಸರ್ವಕಾಲಿಕ . ಈ ನಾಟಕ ಭಾರತದ ಬಹುತೇಕ ಎಲ್ಲಾ ಭಾಷೆಗಳ ಜೊತೆಗೆ ಇಂಗ್ಲಿಷ್ ಭಾಷೆಗೂ ತರ್ಜಿಮೆಗೊಂಡಿದೆ . 18 ನೆಯ ಶತಮಾನದಲ್ಲಿಯೇ ಇದರ ಇಂಗ್ಲಿಷ್ ರೂಪ Toy cart ನಂತರ ಪುನಃ ಭಾಷಾಂತರಗೊಂಡು The Little Clay Cart ಅಮೇರಿಕ ಹಾಗು ಯುರೋಪಿನಾದ್ಯಂತ ಪ್ರದರ್ಶನಗೊಂಡಿವೆ .ಡಾ. ಎನ್ .ಎಸ್ .ಲಕ್ಷ್ಮೀನಾರಾಯಣ ಭಟ್ಟರವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿರುತ್ತಾರೆ .
ಖ್ಯಾತ ರಂಗ ನಿರ್ದೇಶಕ , ಸಾಹಿತಿಗಳಾದ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಅವರು ‘ಮೃಚ್ಚಕಟಿಕ’ ನಾಟಕವನ್ನು ನಿರ್ದೇಶಿಸಿದ್ದಾರೆ ಕರ್ನಾಟಕದ ಉದ್ದಗಲಗಳಿಂದ ಯು. ಎ .ಇ ಗೆ ಬಂದು ನೆಲೆಸಿರುವ ಪ್ರತಿಭಾವಂತ ಹವ್ಯಾಸಿ ರಂಗಕಲಾವಿದರುಗಳಾದ ಆರತಿ ಅಡಿಗ, ಪ್ರಭಾಕರ್ ಕಾಮತ್, ವಾಸು ಬಾಯರ್ ,ನಾಗಭೂಷಣ್ ಕಶ್ಯಪ್, ಮೋಹನ್ ಬಿ .ಪಿ , ಸಪ್ನಾಕಿರಣ್ ,ಅಶೋಕ್ ಅಂಚನ್,ಜಾನೆಟ್ ಸಿಕ್ವೆರಾ ,ಜೇಶ್ ಬಾಯರ್ ,ಆದೇಶ ಹಾಸನ ,ರುದ್ರಯ್ಯ ನವಲಿ ಹಿರೇಮಠ್, ವೆಂಕಟೇಶ್ ರಾವ್,ಸಂಧ್ಯಾ ರವಿಕುಮಾರ್,ಶೋಭಿತಾ ಪ್ರೇಮ್ ಜೀತ್ , ಬೇಬಿ ಸಾನ್ವಿ ರಾಕೇಶ್ ಶರ್ಮ, ನರಸಿಂಹನ್ ಜಿ .ಎಸ್ ,ಗುರುರಾಜ್ ಪುತ್ತೂರು, ಸಂದೀಪ್ ದೇವಾಡಿಗ ,ರಮೇಶ್ ಲಾಕ್ಯ , ಹರೀಶ್ ಪೂಜಾರಿ, ಜಯಂತ್ ಶೆಟ್ಟಿ,ಕೃಷ್ಣ ಕುಮಾರ್, ವಿನಾಯಕ್ ಹೆಗ್ಡೆ ಮತ್ತುಶ್ವೇತಾ ನಾಡಿಗ್ ಶರ್ಮ ನಾಟಕದ ಪಾತ್ರಗಳನ್ನು ಪೋಷಿಸಲಿದ್ದಾರೆ .
ಗಣೇಶ್ ರೈ ವೇದಿಕೆ ವಿನ್ಯಾಸ , ಅರುಣ್ ಕಾರ್ಲೊ ಸಂಗೀತ , ಅರುಣ್ ಮಣಿಪಾಲ್ ಬೆಳಕಿನ ಸಂಯೋಜನೆ ಜೊತೆಗೆ ಮೃಚ್ಛಕಟಿಕ ನಾಟಕದ ಪರದೆಯ ಹಿಂದೆ ಸಹಕರಿಸುವ ರಂಗಾಸಕ್ತರು ಸತೀಶ್ ಹೆಗ್ಡೆ , ಅನಿಲ್ ಪೂಜಾರ , ರಿತೇಶ್ ಅಂಚನ್ ,ಸಂತೋಷ್ ಪೂಜಾರಿ ,ಅಶೋಕ್ ಬೈಲೂರ್ ,ಗಣೇಶ ಕುಲಾಲ್ , ಸುಗಂಧ ರಾಜ್ ಬೇಕಲ್ ಉದಯ್ ನಂಜಪ್ಪ ,ಸಾಯಿ ಮಲ್ಲಿಕಾ ,ಲತಾ ಹೆಗ್ಡೆ ,ದೀಪಾ ಮರಿಯಾ ಮುಂತಾದವರು .