ಫೆ. 20-23 : ಉದ್ಯಾವರದಲ್ಲಿ ಏಳನೇ ವರ್ಷದ ನಿರಂತರ ಬಹುಭಾಷಾ ನಾಟಕೋತ್ಸವ
ಉದ್ಯಾವರ: ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆ 7ನೇ ವರ್ಷದ ಬಹುಭಾಷಾ ನಾಟಕೋತ್ಸವವನ್ನು ಫೆಬ್ರವರಿ 20 ರಿಂದ 23ರ ವರೆಗೆ ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜು, ಮೈದಾನ, ಗ್ರಾಮ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಆಯೋಜಿಸಲಾಗಿದೆ.
ಫೆಬ್ರವರಿ 20ರಂದು ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ) ಬೈಕಾಡಿ ಬ್ರಹ್ಮಾವರದ ಮಂದಾರ ತಂಡದಿಂದ ಬೆತ್ತಲಾಟ ಕನ್ನಡ ನಾಟಕ, ಫೆಬ್ರವರಿ 21ರಂದು ಪ್ರತಿಷ್ಠಿತ ಸುಮನಸ ಕೊಡವೂರು ಉಡುಪಿ ಇವರಿಂದ ತುಳು ಭಾಷೆಯಲ್ಲಿ ಈದಿ, ಫೆಬ್ರವರಿ 22ರಂದು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಇವರಿಂದ ಹ್ಯಾಂಗ್ ಆನ್ ಕನ್ನಡದಲ್ಲಿ ಮತ್ತು ಫೆಬ್ರವರಿ 23 ಕೊನೆಯ ದಿನ ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಇವರಿಂದ ಕೊಂಕಣಿ ಭಾಷೆಯಲ್ಲಿ ಪಯ್ಣ್ ಪರ್ವತಕ್ ಪ್ರದರ್ಶನವಾಗಲಿದೆ.
ಪ್ರತಿದಿನ ಸಂಜೆ 6:30ಕ್ಕೆ ಸರಿಯಾಗಿ ನಾಟಕಗಳು ಆರಂಭವಾಗಲಿದ್ದು, ಎಲ್ಲಾ ನಾಟಕಗಳಿಗೆ ಉಚಿತ ಪ್ರವೇಶವಿರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.