ಫೆ 23: ಶಿರ್ವ ಡೋನ್ ಬೋಸ್ಕೊ ಸಿಬಿಎಸ್ಇ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಡಿಸಿಎಮ್ ಪರಮೇಶ್ವರ್
ಉಡುಪಿ: ಶಿರ್ವ ಆರೋಗ್ಯ ಮಾತಾ ಚರ್ಚಿನ ಆಡಳಿತಕ್ಕೊಳಪಟ್ಟ ಡೋನ್ ಬೊಸ್ಕೊ ಸಿಬಿಎಸ್ಇ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಿಬಿಎಸ್ಇ ನೊಂದಾವಣೆ ಅನಾವರಣ ಕಾರ್ಯಕ್ರಮ ಫೆಬ್ರವರಿ 23 ರ ಸಂಜೆ 4.30ಕ್ಕೆ ಶಿರ್ವ ಶಾಲಾ ಆವರಣದಲ್ಲಿ ಜರುಗಲಿದೆ ಎಂದು ಶಾಲೆಯ ಸಂಚಾಲಕರಾದ ವಂ|ಡೆನಿಸ್ ಡೆಸಾ ಹೇಳಿದರು.
ಅವರು ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ್ರಷ್ಟಿಕೋನ ಎನ್ನುವುದು ಅಗೋಚರವಾಗಿರುವುದನ್ನು ಸಾಕ್ಷಾತ್ಕಾರ ಗೊಳಿಸುವ ಕಲೆ. ಈ ನಿಟ್ಟಿನಲ್ಲಿ ಶಿರ್ವದ ಡೊನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆ ಮೌಲ್ಯಾಧಾರಿತ ಶಿಕ್ಷಣದ ಮೂಲಕ, ಎಲ್ಲಾ ವಿಧ್ಯಾರ್ಥಿಗಳನ್ನು ಸಮರ್ಥ, ಪ್ರಬುದ್ಧ ಹಾಗೂ ಎಲ್ಲಾಕ್ಕಿಂತ ಮಿಗಿಲಾಗಿ ಒಬ್ಬ ಜವಾಬ್ದಾರಿಯುತ ನಾಗರಿಕನನ್ನಾಗಿ ಬೆಳೆಸುವ ಧ್ಯೇಯವನ್ನಿಟ್ಟುಕೊಂಡಿದೆ.
ಈ ಶೈಕ್ಷಣಿಕ ಬೆಳವಣಿಗೆಯ ಉಗಮವಾದದ್ದು 1983ನೇ ಇಸವಿಯಲ್ಲಿ. ತಮ್ಮ ಕಾಲಘಟ್ಟದ ಸರಹದ್ದನ್ನು ಮೀರಿದ ದ್ರಷ್ಟಿಕೋನವನ್ನಿಟ್ಟುಕೊಂಡು ಅತೀ ವಂದನೀಯ ಧರ್ಮಗುರುಗಳಾದ ದಿವಂಗತ್ ಅಲೋಸಿಯಸ್ ರೊಸಾರಿಯೋರವರು 30 ವಿದ್ಯಾರ್ಥಿಗಳೊಂದಿಗೆ ಶಿಶುವಿಹಾರವನ್ನು ಸ್ಥಾಪಿಸಿದರು. 1985ರ ಸಮಯದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯಿಂದ ಮಾನ್ಯತೆಯನ್ನು ಪಡೆಯುವುದಲ್ಲಿ ಯಶಸ್ವಿಯಾದರು.
ಜೀವನದ ಉದ್ದೇಶ ನಿಂತ ನೀರಾಗದೆ ಮುಂದೆ ಸಾಗುವಂತಿರಬೇಕು. ಅದೇ ರೀತಿ ಶಿಕ್ಶಣದಲ್ಲಿ ಅನ್ವೇಷಣೆ ಅತ್ಯಗತ್ಯ. 2016ರಲ್ಲಿ ಅತೀ ವಂದನೀಯ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊರವರು ಸಿಬಿಯಸ್ಇ ಪಟ್ಯಕ್ರಮವನ್ನು ಅಳವಡಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು. ಶಾಲೆಗೆ ಬೆನ್ನೆಲುಬುನಂತಿದ್ದ ಆಡಳಿತ ಮಂಡಳಿಯ ಸದಸ್ಯರು ಈ ಹರಸಾಹಸದಲ್ಲಿ ತಮ್ಮ ಪರಿಪೂರ್ಣ ಸಹಕಾರ ನೀಡಿದರು. 2018 ರ ಸಪ್ಟೆಂಬರ್ 7ರಂದು ಸಿಬಿಯಸ್ಇ ಪಟ್ಯಕ್ರಮಕ್ಕೆ ಬೇಕಾಗುವ ಮೂಲಸೌಕರ್ಯಗಳ ಕಟ್ಟಡಕ್ಕೆ ಬಿಷಪರಾದಂತಹ ಜೆರಾಲ್ಡ್ ಐಸಾಕ್ರವರು ನಡೆಸಿಕೊಟ್ಟರು.
2018ರ ಮೇ 25 ಶಾಲೆಯ ಐತಿಹಾಸಿಕ ದಿನಗಳಲ್ಲಿ ಪ್ರಾಮುಖ್ಯವಾದ ದಿನ ಏಕೆಂದರೆ ಅಂದು ಕೇಂದ್ರಿಯ ಮಾನವ ಸಂಪನ್ಮೂಲ ಇಲಾಖೆ ಹಾಗೂ ಶಿಕ್ಷಣ ಇಲಾಖೆಯು ಶಾಲೆಗೆ ಸಿಬಿಯಸ್ಇ ಮಾನ್ಯತೆಯನ್ನು ಪಡೆದುಕೊಂಡಿತು. ಇಲಾಖೆಯಿಂದ ಪಡೆದ ಮಾನ್ಯತೆ ಸಂಖೆ 830838. ಪ್ರಸ್ತುತವಾಗಿ ಶಾಲೆಯ ಸಂಚಾಲಕರಾಗಿರುವ ವಂದನೀಯ ಡೇನಿಸ್ ಡೆಸ್ಸಾರವರ ಮಾರ್ಗದರ್ಶನ ಹಾಗೂ ಕ್ಲಪ್ತ ಸಲಹೆಗಳಿಂದ್ ಶಾಲೆ ಸರಾಗವಾಗಿ ಮುನ್ನಡೆಯುತ್ತಿದೆ.
ಶಿಶುವಿಹಾರದಿಂದ ಹತ್ತನೇ ತರಗತಿವರೆಗೆ ಪೂರ್ಣ ಪ್ರಮಾಣದ ಸಹಶೈಕ್ಷಣಿಕ ಶಲೆ ಇದಾಗಿದೆ. 1000 ವಿಧ್ಯಾರ್ಥಿಗಳನ್ನು ಹಾಗೂ 85 ಅರ್ಹ ಹಾಗೂ ಪರಿಣತಿ ಹೊಂದಿದ ಶಿಕ್ಷಕರನ್ನು ಒಳಗೊಂಡಿದೆ. ಸಾರಿಗೆ, ಪೌಷ್ಟಿಕಾಂಷ, ಯುಕ್ತ ಅಕ್ಷರ ದಾಸೋಹ, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ ಅದೇ ರೀತಿ ಚಟುವಟಿಕೆಗಳ ಹಾದಿಯಲ್ಲಿ ಕೀಬೋರ್ಡ್, ಕರಾಟೆ, ಭರತನಾಟ್ಯ, ಕರಕುಶಲ, ಹೊಲಿಗೆ, ಹೋಮ್ ಸಾಯನ್ಸ್, ಯೋಗ ಹಾಗೂ ಚಿತ್ರಕಲೆಯಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿಧ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣ ಗೊಳಿಸುವಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್ ಬುಲ್ ಬುಲ್ಸ್ ಯಶಸ್ವಿಯಾಗಿದೆ. ರಾಷ್ಟೀಯ ಹಾಗೂ ಧಾರ್ಮಿಕ ಹಬ್ಬಗಳನ್ನು ಆಚರಿಸುವ ಮೂಲಕ ರಾಷ್ಟ್ರಿಯ ಭಾವಕ್ಯತೆಯನ್ನು ಮೂಡಿಸಲಾಗುತ್ತಿದೆ.
ವಿಶಾಲವಾದ ಹಸಿರಿನ ವಾತಾವರಣದ ನಡುವೆ ಈ ಶಾಲೆ ಕಂಗೊಳಿಸುತ್ತಿದೆ. ಇಲ್ಲಿನ ಮೂಲ ಸೌಕರ್ಯಗಳು ಅನುಪಮ. ಅತ್ಯಾಧುನಿಕ ತಂತ್ರಜ್ನಾನಗಳನ್ನು ಒಳಗೊಂಡಿದೆ. ಸ್ವಚ್ಚತೆ ಹಾಗೂ ನೈರ್ಮಲ್ಯದಲ್ಲೂ ಮುಂಚೂಣಿಯಲ್ಲಿದೆ. ಸಭೆಗಳು, ಪೋಷಕರೊಂದಿಗೆ ನಿರಂತರವಾದ ಸಂವಹನವನ್ನು ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದೆ. ಶಾಲೆಯ ಯಶಸ್ವಿನ ಗುಟ್ಟು ಶಿಕ್ಷಕರ ಹಾಗೂ ಪ್ರಾಂಷುಪಾಲರ ನಡುವಿನ ಬಾಂಧವ್ಯದಲ್ಲಿ ಅಡಗಿದೆ. ಮುಖ್ಯೋಪಧ್ಯಾಯರು ನಾವಿಕನಂತೆ ಉನ್ನತ ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ನಿಧನಗತಿಯ ಹಾಗೂ ಮನೋವ್ಯಕುಶಲತೆಯ ಸಮಸ್ಯೆಯಿಂದ ಬಳಲುತ್ತಿರುವ ಕೆಲವು ವಿಧ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಆಪ್ತಸಮಾಲೋಚಕರನ್ನು ನೇಮಿಸಲಾಗಿದೆ. ವಿಧ್ಯಾರ್ಥಿಗಳಿಗೆ ಪ್ರಾರ್ಥಮಿಕ ಚಿಕಿತ್ಸೆಯನ್ನು ಒದಗಿಸಲು ದಾದಿಯನ್ನು ನೇಮಿಸಲಾಗಿದೆ. ಶಾಲೆಯ ಗುಮಾಸ್ತರು, ಕಾವಲುಗಾರರು, ವಾಹನ ಚಾಲಕರು ಹಾಗೂ ಅಡುಗೆ ಸಿಬ್ಬಂದಿವರ್ಗದವರೆಲ್ಲರೂ ಮಕ್ಕಳ ಅವಶ್ಯಕತೆಗಲನ್ನು ಪೂರೈಸುವಲ್ಲಿ ಪೂರ್ಣಪ್ರಮಾಣದ ಸಹಕಾರವನ್ನು ನೀಡುತ್ತಿದ್ದಾರೆ. 2020ನೇ ಇಸವಿಯಲ್ಲಿ ಮೊದಲ ಸಿಬಿಯಸ್ಇ ಬ್ಯಾಚ್ನ ಮಕ್ಕಳು ಹತ್ತನೇ ತರಗತಿಯ ಸೆಂಟ್ರಲ್ ಪರೀಕ್ಷೆಯನ್ನು ಬರೆಯಲು ಸಿದ್ಧರಾದಾಗ ವಿಭಿನ್ನ ದ್ರಷ್ಟಿಕೋನವನ್ನಿಟ್ಟುಕೊಂಡಿಟ್ಟ ವಂದನೀಯ ಅಲೋಶಿಯಸ್ ರೋಜಾರಿಯೋರವರು ಹಾಗೂ ಸಿಬಿಯಸ್ಇ ಶಾಲೆಯ ಸ್ಥಾಪಕ ಅದಂತಹ ವಂದನೀಯ ಸ್ಟ್ಯಾನಿ ತಾವ್ರೋ ಇವರಿಬ್ಬರೂ ಬಿತ್ತಿದ ಬೀಜ ಫಲವನ್ನು ನೀಡುತ್ತಿದೆ.
ಶಾಲೆಗೆ ಸಿಬಿಎಸ್ಇ ಮಾನ್ಯತೆ ಹಾಗೂ ಹೊಸ ಕಟ್ಟಡದ ಉಧ್ಘಾಟನೆಯ ಸಂಭ್ರಮ ಅದೇ ರೀತಿ ಎಲ್ಲಾರೀತಿಯ ಸಹಕಾರವನ್ನು ನೀಡಿದವರಿಗೆ ಕ್ರತಜ್ನತೆಯನ್ನು ಸಲ್ಲಿಸುವ ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ ಅವರು ಉದ್ಘಾಟಿಸಲಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ, ಸಂಸದರಾದ ಆಸ್ಕರ್ ಫೆರ್ನಾಂಡಿಸ್, ಶೋಭಾ ಕರಂದ್ಲಾಜೆ, ಶಾಸಕರಾದ ಐವಾನ್ ಡಿಸೋಜ, ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಜಿಲ್ಲಾಧಿಕಾರಿಗಳಾದ ಹೆಬ್ಸಿಬಾ ರಾಣಿ ಕೊರ್ಲಪಟಿ, ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಶಿಕ್ಷಣ ಸೊಸೈಟಿಗಳ ಕಾರ್ಯದರ್ಶಿಗಳಾದ ವಂ|ಡಾ|ಲಾರೆನ್ಸ್ ಡಿಸೋಜ, ವಂ|ಎಂಟನಿ ಸೆರಾವೊ, ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ಇದರ ನಿರ್ದೇಶಕರಾದ ಮ್ಯಾಥ್ಯು ಸಿ ನೈನಾನ್, ಸ್ಥಳೀಯ ಜಿಪಂ ಮತ್ತು ತಾಪಂ ವಿಲ್ಸನ್ ರೊಡ್ರಿಗಸ್ ಮತ್ತು ಗೀತಾ ವಾಗ್ಳೆ, ಶಿರ್ವ ಪಂಚಾಯತ್ ಅಧ್ಯಕ್ಷರಾದ ವಾರೀಜಾ ಪೂಜಾರಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅನುರಾಧ ಭಟ್ ಮತ್ತು ಅಜಯ್ ವಾರಿಯರ್ ಇವರಿಂದ ಸುಶ್ರಾವ್ಯ ಸಂಗೀತ ಸಂಜೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಲೆಯ ಪ್ರಾಂಶುಪಾಲರಾದ ವಂ|ಮಹೇಶ್ ಡಿಸೋಜಾ, ಶಿರ್ವ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ಲೀನಾ ಮಚಾದೊ, 18 ಆಯೋಗಗಳ ಸಂಯೋಜಕರಾದ ಮೆಲ್ವಿನ್ ಆರಾನ್ಹಾ ಉಪಸ್ಥಿತರಿದ್ದರು.