ಫ್ರೆಂಡ್ಸ್ ಗ್ರೂಪ್ ಖಾರ್ವಿಕೇರಿ ವತಿಯಿಂದ ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕ್ ಅವರಿಗೆ ಸನ್ಮಾನ
ಕುಂದಾಪುರ: ಫ್ರೆಂಡ್ಸ್ ಗ್ರೂಪ್ ಖಾರ್ವಿಕೇರಿ, ಕುಂದಾಪುರ ಇವರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಸಮಾಜ ಭಾಂಧವರಿಗಾಗಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟದ ಸಮಾರೋಪ ಸಮಾರಂಭ ಭಾನುವಾರ ಜರುಗಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಠಾಣಾಧಿಕಾರಿ ಹರೀಶ್ ಅವರು ಕುಂದಾಪುರದ ಖಾರ್ವಿ ಸಮಾಜವು ಕಳೆದ 34 ವರುಷಗಳಿಂದ ದೀಪಾವಳಿ ಪ್ರಯುಕ್ತ ಅದ್ಧೂರಿ ಕಬಡ್ಡಿ ಪಂದ್ಯಾಟವನ್ನು ನಡೆಸಿಕೊಂಡು ಬಂದಿದ್ದು ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಿಜವಾಗಿಯೂ ಅಭಿನಂದನೀಯ. ಖಾರ್ವಿ ಸಮಾಜ ಸದಾ ಶಾಂತಿ ಮತ್ತು ಸ್ನೇಹಕ್ಕೆ ಹೆಸರು ವಾಸಿಯಾಗಿದ್ದು, ಸಮಾಜದಲ್ಲಿ ಇಂತಹ ಕ್ರೀಡಾಕೂಟಗಳು ಬಹಳ ಅದ್ಧೂರಿಯಾಗಿ ನಡೆಸಿಕೊಟ್ಟಾಗ ಒಂದಷ್ಟು ಕ್ರೀಡೆಗೆ ಗೌರವ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ರವಿಕಿರಣ್ ಮುರ್ಡೇಶ್ವರ,ಪುರಸಭೆ ಸದಸ್ಯರಾದ ಸಂದೀಪ್ ಖಾರ್ವಿ, ದಿನಕರ್ ಪಟೇಲ್,ನಾಗರಾಜ ಅನೇಕ ಅತಿಥಿಗಳು ಉಪಸ್ಥಿತರಿದ್ದರು.