ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ  ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್

Spread the love

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ  ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಮುಂಬಯಿ : ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ಪ್ರಾದೇಶಿಕ ಸಮಿತಿಯಿಂದ ಪ್ರಥಮ ಬಾರಿ ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯುತ್ತಿದ್ದು ಸಮುದಾಯದ ಹಿರಿ ಕಿರಿಯರ ಕ್ರೀಡಾ ಪ್ರತಿಭೆಯನ್ನು ಗುರುತುಸಿವುದು ಪ್ರಶಂಸನೀಯ. ಬಂಟರ ಸಂಘದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಧ್ಯಕ್ಷರಾಗಿದ್ದ ಡಾ. ಪಿ. ವಿ. ಶೆಟ್ಟಿಯವರ ಪ್ರೋತ್ಸಾಹದಿಂದ ಇಂದಿನ ಕ್ರೀಡೆಯು ನಡೆಯುತ್ತಿದ್ದು ಬಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಯವರು ನುಡಿದರು.

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ. 3 ರಂದು ಬೆಳಿಗ್ಗೆ ಬೋರಿವಲಿ ಪಶ್ಚಿಮದ ನ್ಯೂ ಎಮ್. ಎಚ್. ಬಿ. ಕಾಲೋನಿಯ ಬೊರಿವಲಿ ಮಲಯಾಳಿ ಸಮಾಜದ ವಿಕೆ ಮೇನನ್ ಸ್ಕೂಲಿನ, ಟಿ ಎಸ್ ಜಿ ಸ್ಪೋರ್ಟ್ಸ್ ಅರೀನಾ, ಇಲ್ಲಿ ಜರಗಿದ್ದು ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟಿಸಿ ಎಲ್ಲರಿಗೂ ದೀಪಾವಳಿ ಹಾಗೂ ನೂತನ ವರ್ಷದ ಸುಭಾಷಯಗಳನ್ನಿತ್ತರು.

ಎಲ್ಲರನ್ನು ಸ್ವಾಗತಿಸಿ ಮಾತನಾಡಿದ ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಬಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಮಾಜಿ ಸಂಸದ ಗೋಪಾಲ ಶೆಟ್ಟಿ ಯವರು ಮಾತನಾಡುತ್ತಾ ನಮ್ಮ ದೇಶದ ರಾಷ್ಟ್ರೀಯ ಗೀತೆಯಂತೆ ಬಂಟ ಗೀತೆಗೂ ಬಹಳ ಮಹತ್ವವಿದೆ ಹಾಗೂ ಅರ್ಥಪೂರ್ಣವಾಗಿದೆ. ಬಂಟ ಗೀತೆಯ “ನಮ ಬಂಟೆರ್, ನಮ ವೀರೆರ್ ನಮ ಶೂರೆರ್…. ” (ನಾವು ಬಂಟರು, ನಾವು ವೀರರು, ನಾವು ಶ್ರೂರರು) ಈ ಪದಗಳಿಗೆ ತಕ್ಕಂತೆ ನಾವು ಇದ್ದು, ನಾನು ಇದನ್ನು ಖಂಡಿತವಾಗಿಯೂ ಕಾರ್ಯರೂಪಕ್ಕೆ ತರಲಿರುವೆನು. ಡಾ. ಪಿ. ವಿ. ಶೆಟ್ಟಿಯವರಂತವರ ಪ್ರೋತ್ಸಾಹ ನಮ್ಮ ಯುವಜನಾಂಗಕ್ಕಿದ್ದು, ಇಂದಿನ ಬಂಟ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಬಾಗವಹಿಸಿದ ಯುವ ಜನಾಂಗಕ್ಕೆ ಹಾಗೂ ಬಂಟರ ಸಂಘಕ್ಕೆ ಶುಭ ಹಾರೈಸುತ್ತಾ ಬಂಟ್ಸ್ ಕ್ರೀಡಾ ಕೂಟದಲ್ಲಿ ಬಾಗವಹಿಸಿದವರು, ರಾಷ್ಟ್ರಿಯ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆಯುದರಲ್ಲಿ ಸಂದೇ್ಹವಿಲ್ಲ ಎಂದು ನುಡಿದರು.

ಸಮಾರೋಪ :

ಯುವ ಜನಾಂಗವು ಇಂದಿನ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಮುಂಜಾನೆಯಿಂದ ದಿನಪೂರ್ತಿ ಬಹಳ ಉತ್ಸಾಹದಿಂದ ಇಂದಿನ ಟೂರ್ನಮೆಂಟ್ ನ ಯಶಸ್ಸಿಗೆ ಕ್ರೀಯಾಶೀಲರಾಗಿದ್ದು ಬಾಗವಹಿಸಿದ ಹಾಗು ವಿಜೇತರಾದ ಎಲ್ಲರಿಗೂ ಅಭಿನಂದನೆಗಳು. ಟೂರ್ನಮೆಂಟ್ ನ್ನು ಆಯೋಜಿಸಿದ ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಪ್ರತಿಯೊಬ್ಬಗಿಗೂ ಕೃತಜ್ನತೆಗಳು. ಇಂದು ಬಾಗವಹಿಸಿದ ಎಲ್ಲರ ಸ್ಪೂರ್ತಿ ಉತ್ಸಾಹವನ್ನು ನೋಡಿದಾಗ ಮುಂದಿನ ವರ್ಷ ಇದಕ್ಕಿಂತಲೂ ಅದ್ದೂರಿಯಾಗಿ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಾವು ಆಯೋಜಿಸೋಣ ಎಂದು ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ಮುಂಬಯಿ ಕ್ರೆಕೆಟ್ ಅಸೋಷಿಯೇಶನಿನ ಮಾಜಿ ಜೊತೆ ಕಾರ್ಯದರ್ಶಿ ಡಾ. ಪಿ. ವಿ. ಶೆಟ್ಟಿ ಯವರು ನುಡಿದರು.

ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರೂ ಬಾಬಾ ಗ್ರೂಪ್ಸ್ ನ ಪ್ರಮುಖರರಾದ ಮಹೇಶ್ ಎಸ್. ಶೆಟ್ಟಿ ಮತ್ತು ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿ ಯವರು ಬ್ಯಾಡ್ಮಿಂಟನ್ ಟೂರ್ನಮೆಂಟ್ ಅತ್ಯುತ್ತಮ ಆಟಗಾರರಿಗೆ ವಿಶೇಷ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.

ಟೂರ್ನಮೆಂಟ್ ನಲ್ಲಿ 170 ಕ್ಕಿಂತಲೂ ಅಧಿಕ ಹಿರಿ ಕಿರಿಯರು ಭಾಗವಹಿಸಿದ್ದರು. ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರು ಆಗಮಿಸಿ ಎಲ್ಲರಿಗೂ ಶುಭ ಹಾರೈಸಿದರು.

ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ, ಸಂಘದ ಮಾಜಿ ಅಧ್ಯಕ್ಷರಾದ ಡಾ. ಪಿ. ವಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ, ಗೌ. ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಪಶ್ಚಿಮ ವಲಯ ಸಂಚಾಲಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್, ಜೊತೆ ಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಲ್ಲಾರ್, ಪ್ರಾದೇಶಿಕ ಸಮಿತಿಯ ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಪ್ರಾದೇಶಿಕ ಸಮಿತಿಯ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಧೀರಜ್ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಂಚಾಲಕರಾದ ನಿಟ್ಟೆ ಮುದಣ್ಣ ಜಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ರಮೇಶ್ ಎಚ್. ಶೆಟ್ಟಿ ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ, ರವೀಂದ್ರ ಎಸ್. ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ , ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ರೇಖಾ ವೈ ಶೆಟ್ಟಿ, ಸಲಹೆಗಾರರಾದ ಶೈಲಜಾ ಎ. ಶೆಟ್ಟಿ, ಕಾರ್ಯದರ್ಶಿ ಸರಿತಾ ಮಹೇಶ್ ಶೆಟ್ಟಿ ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಎಚ್ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಹರೀಶ್ ಶೆಟ್ಟಿ, ಸಾಂಸ್ಕೃತಿಯ ಸಮಿತಿಯ ಗೀತಾ ಎಸ್. ಶೆಟ್ಟಿ, ಸದಸ್ಯತನ ಸಮಿತಿಯ ಪ್ರವೀಣ್ ಜೆ. ಶೆಟ್ಟಿ, ಮೆಡಿಕಲ್ ಸಮಿತಿಯ ರಾಜ ಶೇಖರ ವಿ ಶೆಟ್ಟಿ, ಐಟಿಯ ಪ್ರಜ್ವಲ್ ಬಿ ಶೆಟ್ಟಿ, ಎ ಎಂಪ್ಲಾಯ್ಮೆಂಟ್ ನ ಸುನಿಲ್ ಶೆಟ್ಟಿ, ಮೇರೇಜ್ ಸೆಲ್ ನ ವಿದ್ಯಾ ಆರ್. ಶೆಟ್ಟಿ ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಪ್ರಜ್ವಲ್ ಎಸ್. ಶೆಟ್ಟಿ, ಕಾರ್ಯದರ್ಶಿ ಸಮೀಕ್ಷಾ ಶೆಟ್ಟಿ, ಕೋಶಾಧಿಕಾರಿ ರಿನಿತ್ ಶೆಟ್ಟಿ ಹಾಗೂ ಸಲಹಾ ಸಮಿತಿಯ ಎಲ್ಲಾ ಸದಸ್ಯರು, ಕಾರ್ಯಾಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ರಘುನಾಥ ಎನ್ ಶೆಟ್ಟಿ, ಧನಂಜಯ ಕುಲಕರ್ಣಿ ಮತ್ತು ನಿಶದ್ ಕೋರಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ವಿಜೇತರು –
ಮಹಿಳೆಯರ ಡಬ್ಬಲ್ಸ್ ಚೇತನಾ ಶೆಟ್ಟಿ ಮತ್ತು ಸಕಿತಾ ಶೆಟ್ಟಿ (ಪ್ರಥಮ), ಸಾರಿಕಾ ಶೆಟ್ಟಿ ಮತ್ತು ಸ್ಮಿತಾ ಶೆಟ್ಟಿ (ರನ್ನರ್ಸ್ ಅಪ್),
ಮಹಿಳೆಯರ ಸಿಂಗಲ್ಸ್ ಸಕಿತಾ ಶೆಟ್ಟಿ (ಪ್ರಥಮ), ಸರಿತಾ ಶೆಟ್ಟಿ (ರನ್ನರ್ಸ್ ಅಪ್),
ಪುರುಷರ ಡಬ್ಬಲ್ಸ್ ವೇಣುಗೋಪಾಲ ಶೆಟ್ಟಿ ಮತ್ತು ಹೇಮಂತ್ ಶೆಟ್ಟಿ (ಪ್ರಥಮ), ಹರೀಶ್ ಶೆಟ್ಟಿ ಮತ್ತು ಹಿತೇಂದ್ರ ಶೆಟ್ಟಿ (ರನ್ನರ್ಸ್ ಅಪ್),
ಪುರುಷರ ಸಿಂಗಲ್ಸ್ ಪ್ರವೀಣ್ ಶೆಟ್ಟಿ (ಪ್ರಥಮ), ಹರೀಶ್ ಶೆಟ್ಟಿ (ರನ್ನರ್ಸ್ ಅಪ್),
ಪುರುಷರ ಡಬ್ಬಲ್ಸ್ (60ಕ್ಕಿಂತ ಮೇಲ್ಪಟ್ಟವರು) ಡಾ. ಆರ್. ಕೆ. ಶೆಟ್ಟಿ ಮತ್ತು ನಾರಾಯಣ ಶೆಟ್ಟಿ (ಪ್ರಥಮ), ಪ್ರಕಾಶ್ ಶೆಟ್ಟಿ ಮತ್ತು ಪ್ರಸಾದ್ ಶೆಟ್ಟಿ (ರನ್ನರ್ಸ್ ಅಪ್),
ಪುರುಷರ ಸಿಂಗಲ್ಸ್ (60ಕ್ಕಿಂತ ಮೇಲ್ಪಟ್ಟವರು) ಡಾ. ಆರ್. ಕೆ. ಶೆಟ್ಟಿ (ಪ್ರಥಮ), ನಾರಾಯಣ ಶೆಟ್ಟಿ (ರನ್ನರ್ಸ್ ಅಪ್),
ಮಹಿಳೆಯರ ಓಪನ್ ಕೆಟಗರಿ ಡಬ್ಬಲ್ಸ್ ನಿಖಿತಾ ಶೆಟ್ಟಿ ಮತ್ತು ಸೃಷ್ಟಿ ಶೆಟ್ಟಿ (ಪ್ರಥಮ), ಶ್ರಾವಿ ಶೆಟ್ಟಿ ಮತ್ತು ಭೂಮಿಕಾ ಶೆಟ್ಟಿ (ರನ್ನರ್ಸ್ ಅಪ್),
ಮಹಿಳೆಯರ ಓಪನ್ ಕೆಟಗರಿ ಸಿಂಗಲ್ಸ್ ನಿಖಿತಾ ಶೆಟ್ಟಿ (ಪ್ರಥಮ), ಪ್ರೇರಣಾ ಭಂಡಾರಿ (ರನ್ನರ್ಸ್ ಅಪ್),
ಪುರುಷರ ಡಬ್ಬಲ್ಸ್ ಓಪನ್ ಕೆಟಗರಿ ವಿಕಾಸ್ ಶೆಟ್ಟಿ ಮತ್ತು ಗೌತಮ್ ಶೆಟ್ಟಿ (ಪ್ರಥಮ), ತುಷಾರ್ ಶೆಟ್ಟಿ ಮತ್ತು ಕ್ಷಿತಿಜ್ ಶೆಟ್ಟಿ (ರನ್ನರ್ಸ್ ಅಪ್),
ಪುರುಷರ ಸಿಂಗಲ್ಸ್ ಓಪನ್ ಕೆಟಗರಿ ಶರದ್ ಶೆಟ್ಟಿ (ಪ್ರಥಮ), ಕ್ಷಿತಿಜ್ ಶೆಟ್ಟಿ (ರನ್ನರ್ಸ್ ಅಪ್),
ಮಿಕ್ಸ್ ಡಬ್ಬಲ್ಸ್ ಓಪನ್ ಕೆಟಗರಿ ಕನವ್ ಶೆಟ್ಟಿ ಮತ್ತು ಸಮಾ ಶೆಟ್ಟಿ (ಪ್ರಥಮ), ಶರದ್ ಶೆಟ್ಟಿ ಮತ್ತು ಪ್ರೇರಣಾ ಭಂಡಾರಿ (ರನ್ನರ್ಸ್ ಅಪ್),
ಹುಡುಗರು (15 ರ ಕೆಳಗೆ) ಸಿಂಗಲ್ಸ್ ಭಾವೀಶ್ ಶೆಟ್ಟಿ (ಪ್ರಥಮ), ವಿಹಾನ್ ಶೆಟ್ಟಿ (ರನ್ನರ್ಸ್ ಅಪ್),
ಹುಡುಗಿಯರು (15 ರ ಕೆಳಗೆ) ಸಿಂಗಲ್ಸ್ ಸ್ವಾಸ್ತಿ ಶೆಟ್ಟಿ (ಪ್ರಥಮ), ಶ್ರಾವಿ ಶೆಟ್ಟಿ (ರನ್ನರ್ಸ್ ಅಪ್),
ಹುಡುಗರು (20ರ ಕೆಳಗೆ) ಸಿಂಗಲ್ಸ್ ಕನವ್ ಶೆಟ್ಟಿ (ಪ್ರಥಮ), ಸ್ವಾಸ್ತಿಕ್ ಶೆಟ್ಟಿ (ರನ್ನರ್ಸ್ ಅಪ್),
ಹುಡುಗಿಯರು (20 ರ ಕೆಳಗೆ) ಸಿಂಗಲ್ಸ್ ಸಮಾ ಶೆಟ್ಟಿ (ಪ್ರಥಮ), ಸೃಷ್ಟಿ ಶೆಟ್ಟಿ (ರನ್ನರ್ಸ್ ಅಪ್),
ಹುಡುಗರು (10ರ ಕೆಳಗೆ) ಸಿಂಗಲ್ಸ್ ಯುವಾನ್ ಶೆಟ್ಟಿ (ಪ್ರಥಮ), ಶೌರ್ಯ ಶೆಟ್ಟಿ (ರನ್ನರ್ಸ್ ಅಪ್),

ವರದಿ : ಈಶ್ವರ ಎಂ. ಐಲ್
ಚಿತ್ರ : ಪ್ರತೀಕ್ ರವೀಂದ್ರ ಶೆಟ್ಟಿ


Spread the love