ಬಂಟ್ವಾದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ – ದೂರು ದಾಖಲು
ಮಂಗಳೂರು: ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಬಂಟ್ವಾಳ ಠಾಣೆಯಲ್ಲಿ ದೂರು ನೀಡಿರುವ ಗಣೇಶ ರೈ ರವರು ತನ್ನ ಸ್ನೇಹಿತರ ಜತೆ ಬಂಟ್ವಾಳದ ಬಡ್ಡಕಟ್ಟೆ ಅಶೋಕ ಹೋಟೇಲ್ ಗೆ ಊಟಕ್ಕೆಂದು ಕಾರಿನಿಂದ ಇಳಿದು ಹೋಗುತ್ತಿರುವಾಗ ಪಿರ್ಯಾದಿದಾರರ ಪರಿಚಯದ ಸುರೇಂದ್ರ ಬಂಟ್ವಾಳ, ಮನೋಹರ, ಪ್ರದೀಪ, ಸತೀಶ ಹಾಗೂ ಇತರ ಇಬ್ಬರು ಪಿರ್ಯಾದಿದಾರರನ್ನು ತಡೆದು ತುಳು ಭಾಷೆಯಲ್ಲಿ ನಿಮ್ಮದು ಭಾರಿ ಹಿಂದುತ್ವವೊ ಎಂದು ಹೇಳಿ ಕೈಯಿಂದ ಹಲ್ಲೇ ಮಾಡಿದಾಗ ಪಿರ್ಯಾದಿದಾರರು ಮೂಗಿಗೆ ತಾಗಿ ರಕ್ತ ಗಾಯವಾಗಿರುತ್ತದೆ ಮನೊಹರನು ಕೈಯಿಂದ ಪುಷ್ಪರಾಜನ ಬಲ ತೋಡೆಗೆ ಹೊಡೆದಿದ್ದು ಆರೋಪಿಗಳು ಕೈಗಳಿಂದ ಪಿರ್ಯಾದಿದಾರರ ಕುತ್ತಿಗೆಗೆ ಹೊಡೆದು ನೊವುಂಟು ಮಾಡಿದ್ದು, ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರ, ಅಂಗಿಯ ಕಿಸೆಯಲ್ಲಿದ್ದ10000/- ರೂ ನಗದು ಹಾಗೂ ಮೊಬೈಲ್ ನ್ನು ದೊಚಿಕೊಂಡಿದ್ದು ಸುರೇಂದ್ರ ನು ತಲ್ವಾರನ್ನು ಹಿಡಿದು ಕೊಂಡು ಬರುವುದನ್ನು ಕಂಡು ಪಿರ್ಯಾದಿದಾರರು ಮತ್ತು ಅವರ ಸ್ನೇಹಿತರು ಅಲ್ಲಿಂದ ಓಡಿ ಹೋಗಿ ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂದು ದೂರು ನೀಡಿದ್ದಾರೆ.
ಗಣೇಶ್ ರೈ ಅವರು ನೀಡಿದ ದೂರನ್ನು ಸ್ವೀಕರಿಸಿದ ಬಂಟ್ವಾಳ ನಗರ ಠಾಣ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.