ಬಂಟ್ವಾಳ: ಆಶಾ ಕಾರ್ಯಕರ್ತೆಗೆ ಬೆದರಿಕೆ – ಆರೋಪಿಗಳ ಬಂಧನ
ಬಂಟ್ವಾಳ: ಕೊರೋನಾ ವೈರಸ್ ಮುಂಜಾಗೃತಾ ಕರ್ತವ್ಯದ ನಿಮಿತ್ತ ವಿದೇಶದಿಂದ ಆಗಮಿಸಿರುವ ವ್ಯಕ್ತಿಗಳ ಮಾಹಿತಿ ಪಡೆಯುವ ಸಲುವಾಗಿ ತೆರಳಿದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂದು ಗುರುತಿಸಲಾಗಿದೆ.
ಏಪ್ರಿಲ್ 1 ಆರೋಗ್ಯ ಇಲಾಖೆಯ ಅಡಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ಅಮ್ಟಾಡಿ ಗ್ರಾಮದ ತುಳಸಿ (48) ಎಂಬವರು ಕೊರೋನಾ ವೈರಸ್ ಮುಂಜಾಗೃತಾ ಕರ್ತವ್ಯದ ನಿಮಿತ್ತ ವಿದೇಶದಿಂದ ಆಗಮಿಸಿರುವ ಕಿನ್ನಿಬೆಟ್ಟು ಪರಿಸರದ ನಿತೇಶ ಹಾಗೂ ಕಲಾಯಿ ಪರಿಸರದ ಜಯಂತ ಎಂಬವರುಗಳ ಆರೋಗ್ಯವನ್ನು ಮೊಬೈಲ್ ಮೂಲಕ ಕರೆ ಮಾಡಿ ವಿಚಾರಿಸಿರುತ್ತಾರೆ.
ಆ ದಿನ ಸಂಜೆ ಸಮಯ ಸುಮಾರು 06.00 ಗಂಟೆಗೆ ಕರ್ತವ್ಯದಲ್ಲಿ ಇರುವ ಸಮಯ ಸದ್ರಿ ವಿದೇಶದಿಂದ ಆಗಮಿಸಿರುವ ನಿತೇಶ ಎಂಬಾತನ ಸಂಬಂಧಿ ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂಬವರು ಸದರಿ ಆಶಾ ಕಾರ್ಯಕರ್ತೆಗೆ ಮೊಬೈಲ್ ಮೂಲಕ ಕರೆಮಾಡಿ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆಏಪ್ರಿಲ್ 2 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.