ಬಂಟ್ವಾಳ: ವೈಯುಕ್ತಿಕ ವಿಚಾರಕ್ಕೆ ವ್ಯಕ್ತಿಯ ಮೇಲೆ ತಲವಾರು ದಾಳಿ – ಪ್ರಕರಣ ದಾಖಲು

Spread the love

ಬಂಟ್ವಾಳ: ವೈಯುಕ್ತಿಕ ವಿಚಾರಕ್ಕೆ ವ್ಯಕ್ತಿಯ ಮೇಲೆ ತಲವಾರು ದಾಳಿ – ಪ್ರಕರಣ ದಾಖಲು

ಮಂಗಳೂರು: ಮೊಬೈಲ್ ಅಂಗಡಿಗೆ ಬೀಗ ಹಾಕಿ  ಮುಚ್ಚುತ್ತಿರುವ  ವೇಳೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನಿಗೆ ತಲವಾರಿನಿಂದ ದಾಳಿ ನಡೆಸಿದ ಘಟನೆ ದ‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ‌ನಗರ ಪೋಲೀಸ್ ‌ಠಾಣಾ ವ್ಯಾಪ್ತಿಯ ನೆಹರು‌ನಗರ  ಎಂಬಲ್ಲಿ ಮಧ್ಯರಾತ್ರಿ ವೇಳೆ ‌ನಡೆದಿದೆ.

ನೆಹರು ನಗರ ನಿವಾಸಿ ತಸ್ಲೀಮ್ ಎಂಬಾತನ ಮೇಲೆ ತಲವಾರಿನಿಂದ ದಾಳಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಈತನನ್ನು ಮಂಗಳೂರು ‌ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿದೆ.

ತಸ್ಲೀಮ್ ಎಂಬಾತ ಪಾಣೆಮಂಗಳೂರು ‌ನೆಹರು ನಗರದಲ್ಲಿರುವ ಹೈವೆ ಹೋಟೆಲ್‌ ‌ಪಕ್ಕದಲ್ಲಿ ಮೊಬೈಲ್ ಶಾಪ್ ಹೊಂದಿದ್ದು, ಅಂಗಡಿ ಬಂದ್ ಮಾಡುವ ಸಂದರ್ಭದಲ್ಲಿ ಈತನಿಗೆ ತಲವಾರಿನಿಂದ ಕಡಿದಿದ್ದಾರೆ ಎನ್ನಲಾಗಿದೆ. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಅಟ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ‌ಲಭ್ಯವಾಗಿದೆ. ಈತನ‌ ಸ್ನೇಹಿತ ಮತ್ತು ಇದೇ ಪರಿಸರದ ಹ್ಯಾರೀಶ್ ಎಂಬಾತ ತಲವಾರಿನಿಂದ ‌ಕಡಿದು ಪರಾರಿಯಾಗಿದ್ದಾನೆ ಎಂದು ‌ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.  ಇದೀಗ ‌ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಎಸ್.ಐ.ರಾಮಕೃಷ್ಣ ಬೇಟಿ ನೀಡಿ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments