ಬಂಟ್ವಾಳ: ಹೋಮ್ ಕ್ವಾರಂಟೈನ್ ಉಲ್ಲಂಘನೆ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

Spread the love

ಬಂಟ್ವಾಳ: ಹೋಮ್ ಕ್ವಾರಂಟೈನ್ ಉಲ್ಲಂಘನೆ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ: ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ಕಾಣೆಮಾರ್ ನಿವಾಸಿಯಾದ ಸಾಹಿದ್ (32) ಎಂಬಾತನಿಗೆ ದಿನಾಂಕ 09.07.2020 ರಿಂದ 23.07.2020 ರ ವರೆಗೆ ಹೋಮ್ ಕಾರಂಟೈನ್ ಇರುವಂತೆ ತುಂಬೆ ಗ್ರಾಮ ಪಂಚಾಯತ್ ನಿಂದ ನೋಟಿಸು ಕೂಡ ಜ್ಯಾರಿ ಮಾಡಲಾಗಿರುತ್ತದೆ. ಆದರೆ ಜುಲೈ 14 ರಂದು ಬಂಟ್ವಾಳ ಪೊಲೀಸ್ ಠಾಣಾ ಸಿಬ್ಬಂದಿ ಮದ್ಯಾಹ್ನ 12.30 ಗಂಟೆ ಸುಮಾರಿಗೆ ಹೋಮ್ ಕಾರಂಟೈನಲ್ಲಿದ್ದ ಸಾಹಿದ್ ನನ್ನು ಪರಿಶೀಲಿಸಲಾಗಿ ಸದರಿ ವ್ಯಕ್ತಿಯು ಮನೆಯಲ್ಲಿರದಿದ್ದು, ಈ ಬಗ್ಗೆ ಮನೆಯವರ ಬಳಿ ಕೇಳಲಾಗಿ ಕೊರೋನಾ ನಿಮಿತ್ತ ಸರ್ಕಾರ ಅದೇಶಿಸಿರುವ ಹೋಮ್ ಕಾರಂಟೈನ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಜನರೊಂದರೆ ಬೆರೆತಿರುವುದು ತಿಳಿದು ಬಂದಿದೆ

ಸದರಿ ಆರೋಪಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ : 269,270, 271 ಐಪಿಸಿ ಮತ್ತು ಕಲಂ 5(1) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love