ಬಂಟ ಸಂಘದಿಂದ ವಾಯ್ಲೆಟ್ ಪಿರೇರಾ ಸೇರಿದಂತೆ 7 ಸಾಧಕ ಮಹಿಳೆಯರಿಗೆ ಸಿರಿ ಪ್ರಶಸ್ತಿ ಪ್ರದಾನ
ಮಂಗಳೂರು: ತುಳುನಾಡು ಮಾತೃ ಪ್ರಧಾನವಾದ ಪುಣ್ಯ ನೆಲ, ಈ ಮಣ್ಣಿನಲ್ಲಿ ತಾಯಿಗೆ ವಿಶೇಷವಾದ ಸ್ಥಾನಮಾನ ನೀಡಲಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸುನೀತಾ ಎಂ. ಶೆಟ್ಟಿ ಹೇಳಿದರು.
ಅವರು ಮಂಗಳವಾರ ಬಂಟರ ಯಾನೆ ನಾಡವರ ಮಾತೃಸಂಘ ಮಹಿಳಾ ವಿಭಾಗ ಮತ್ತುತುಳುವೆರೆ ಆಯನ ಕೂಟದ ಸಹಯೋಗದಲ್ಲಿ ನಗರದ ಬಂಟ್ಸ್ ಹಾಸ್ಟೆಲಿನ ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ನಡೆದ ಪಗ್ಗು ಪದಿನೆಣ್ಮ ಸಿರಿದಿನ ಕಾರ್ಯಕ್ರಮದಲ್ಲಿ ತುಳು ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಬಿಸು ಳುವರೆ ಹೊಸರ ವರ್ಷ, ತುಳುವರ ತಿಂಗಳು ಪಗ್ಗುವಿನ ಮೂಲಕ ಆರಂಭವಾಗುತ್ತದೆ. ಸಿರಿ ಎಂಬದು ಸಂಪತ್ತು, ಸಿರಿ ತುಳುನಾಡಿನ ಆದರ್ಶ, ತುಳುನಾಡಿನ ವಿಚಾರಗಳ ಬಗ್ಗೆ ಮುಂದಿನ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಆಚರಣೆಗಳು ನಿರಂತರ ನಡೆಯುತ್ತಿರಬೇಕು ಎಂದರು.
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ ಚಿನ್ನಪ್ಪಗೌಡ, ಮುಖ್ಯ ಅತಿಥಿಗಾಳಿದ್ದರು. ಡಾ. ರತಿದೇವಿ,ಜಯಲಕ್ಷ್ಮೀ ಹೆಗ್ಡೆ, ತುಳುವೆರೆ ಆಯನೊ ಕೂಟ ಅಧ್ಯಕ್ಷ ಡಾ. ರಾಜೇಶ್ ಮುಖ್ಯ ಅತಿಥಿಗಳಾಗಿದ್ದರು.
ಸಿರಿಪಾಡ್ದನ ಉಳಿಸುವಲ್ಲಿ ವಿಶೇಷ ಸೇವೆ ಸಲ್ಲಿಸಿದ ಕರ್ಗಿ ಶೆಡ್ತಿ ಆಳದಂಗಡಿ, ಲೀಲಾ ಶೆಡ್ತಿ ಮಾಳ, ವಿವಿಧ ಕ್ಷೇತ್ರದ ಡಾ. ರತಿ ದೇವಿ, ವನಜಾ ವೈಲೆಟ್ ಪಿರೇರಾ, ಖೈರುನ್ನೀಸಾ, ಸಿ.ಎಸ್.ರಾಧಿಕಾ, ಸುಧಾರತ್ನ, ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃಸಂಘದ ಮಹಿಳಾ ವಿಭಾಗದ ಅಧ್ಯಕ್ಷ ಡಾ. ಆಶಾಜ್ಯೋತಿ ರೈ ಸ್ವಾಗತಿಸಿ, ಕವಿತಾ ಶೆಟ್ಟಿ ಮತ್ತು ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.