ಬಂದ್ ಬೆಂಬಲಿಸದ್ದಕ್ಕೆ ಉಡುಪಿಯಲ್ಲಿ ಬಡ ಅಂಗಡಿಯಾತನ ತರಕಾರಿಯನ್ನು ರಸ್ತೆಗೆಸೆದ ಕಾಂಗ್ರೆಸ್ ಕಾರ್ಯಕರ್ತರು!
ಉಡುಪಿ: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಉಡುಪಿಯಲ್ಲಿ ಕೆಲವೊಂದು ಅವಾಂತರಗಳನ್ನೇ ಸೃಷ್ಟಿಸಿತು.
ಬೆಳ್ಳಂಬೆಳಗ್ಗೆ ನಗರದಲ್ಲಿ ಪಾದಯಾತ್ರೆ ಮಾಡಿ ತೆರಿದಿರುವ ಅಂಗಡಿಗಳಿಗೆ ಬಲತ್ಕಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಬಾಗಿಲು ಹಾಕಲು ಆರಂಭಿಸಿದ್ದರು. ಕೆಎಸ್ ಆರ್ ಟಿ ಸಿ ಬಸ್ ತಡೆದು, ಬಸ್ ತಡೆದು ಎಚ್ಚರಿಕೆ ನೀಡಿದರು. ಹೋಟೆಲ್, ಅಂಗಡಿಗಳಿಗೆ ತೆರಳಿ ಶಟರ್ ಎಳೆದು ಅಂಗಡಿ ಮುಚ್ಚಿಸಿದರು.
ಮುಂದೆ ಸಾಗಿ ಕಾಂಗ್ರೆಸ್ ಕಾರ್ಯಕರ್ತರು ರಥಬೀದಿ ಪರಿಸರದಲ್ಲಿ ತರಕಾರಿ ಅಂಗಡಿಯ ಮುಂದೆ ಹೋಗಿ ಬಂದ್ ಮಾಡುವಂತೆ ಕೋರಿಕೊಂಡಿದ್ದು, ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂಬುದಾಗಿ ಅಂಗಡಿ ಮಾಲಿಕ ಹೇಳಿದ್ದಕ್ಕೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿಯಲ್ಲಿದ್ದ ತರಕಾರಿಯನ್ನು ರಸ್ತೆಯೆಲ್ಲೆಡೆ ಚೆಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ ಅಲ್ಲದೆ ಅದನ್ನು ಕಾಲಿನಲ್ಲಿ ಮೆಟ್ಟಿಕೊಂಡು ನಾಶಪಡಿಸಿದ್ದಾರೆ.
ಕಾಂಗ್ರೆಸಿಗರ ಈ ಕೃತ್ಯದ ಫೋಟೊ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದು, ಕಾಂಗ್ರೆಸಿಗರು ಬಡ ತರಕಾರಿ ಅಂಗಡಿಯವನ ಮೇಲೆ ನಡೆಸಿದ ವರ್ತನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
Pramod Madhwaraj should take complete responsibility for this Cong I goonda act and reimburse the losses to the public. He also owes public apology. Uneducated fools.