ಬಕ್ರೀದ್ ಹಬ್ಬ: ಬಾವುಟ ಗುಡ್ಡೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು

Spread the love

ಬಕ್ರೀದ್ ಹಬ್ಬ: ಬಾವುಟ ಗುಡ್ಡೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು

ಮಂಗಳೂರು : ಆಗಸ್ಟ್ 22 ರಂದು ಮುಸ್ಲಿಂ ಬಾಂವರು ಬಕ್ರೀದ್ ಹಬ್ಬವನ್ನು ಆಚರಿಸಲಿದ್ದು, ಸದ್ರಿ ಹಬ್ಬದ ದಿನದಂದು ಬೆಳಿಗ್ಗೆ 7 ಗಂಟೆಗೆ ಬಾವುಟ ಗುಡ್ಡೆ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಸದ್ರಿ ಪ್ರದೇಶದ ಸುತ್ತಮುತ್ತ ಸೂಕ್ತ ಸಂಚಾರ ಸುವ್ಯವಸ್ಥೆ ಬಂದೋಬಸ್ತ್ ನಿರ್ವಹಿಸಬೇಕಾಗಿದ್ದು, ಕಾರ್ಯಕ್ರಮದ ಸಮಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಠಿಯಿಂದ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಆಗಸ್ಟ್ 22 ರ ಬಕ್ರೀದ್ ಹಬ್ಬದಂದು ಬೆಳಿಗ್ಗೆ 6-30 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಮಂಗಳೂರು ಇವರು ಆದೇಶಿಸಿದ್ದಾರೆ.

ಬೆಳಿಗ್ಗೆ 06-30 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಹಂಪನಕಟ್ಟೆಯಿಂದ ಬಾವುಟಗುಡ್ಡೆಯ ಮುಖಾಂತರ ಡಾ | ಅಂಬೇಡ್ಕರ್ ವೃತ್ತದ ಕಡೆಗೆ ಸಂಚರಿಸಬೇಕಾದ ವಾಹನಗಳು ಕೆ. ಎಸ್. ಆರ್. ರಸ್ತೆ ಮುಖಾಂತರ ಸಂಚರಿಸುವುದು. ಸಿಟಿ ಸೆಂಟರ್ ಕಡೆಯಿಂದ ಬಾವುಟಗುಡ್ಡೆ ಕಡೆಗೆ ಬರುವ ರಸ್ತೆಯಲ್ಲಿ ಹಾಗೂ ಸಿಟಿ ಸೆಂಟರ್ ಪಾರ್ಕಿಂಗ್‍ನಿಂದ ಬಾವುಟಗುಡ್ಡೆಗೆ ಬರುವ ರಸ್ತೆಯಲ್ಲಿ ಮೇಲ್ಕಾಣಿಸಿದ ಸಮಯದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬಾವುಟಗುಡ್ಡೆಯ ನಗರ ಕೇಂದ್ರ ಗ್ರಂಥಾಲಯದಿಂದ ವಿಜಯಾ ಬ್ಯಾಂಕ್ ತನಕ ರಸ್ತೆಯ ಎಡಬದಿ ಮಾತ್ರ ವಾಹನಗಳನ್ನು ತಾತ್ಕಾಲಿಕವಾಗಿ ಪಾರ್ಕ್ ಮಾಡುವುದು.

ಮೇಲಿನ ಈ ನಿರ್ಬಂಧನೆಗಳು ವಿ.ಐ.ಪಿ. ವಾಹನಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ. ಈ ಆದೇಶದನ್ವಯ ಸದ್ರಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಅವಶ್ಯವಿರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ, ಮಂಗಳೂರು ನಗರ ಇವರು ಮೋಟಾರು ವಾಹನ ಕಾಯಿದೆ 1988 ರ ಸೆಕ್ಷನ್ 116 ರ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.


Spread the love