ಬಜಪೆ ಪೊಲೀಸರ ಕಾರ್ಯಚರಣೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಜಪೆ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕಲ್ಲಾಡಿ ನಿವಾಸಿ ಜಯಾನಂದ ಕುಲಾಲ್ (48) ಎಂದು ಗುರುತಿಸಲಾಗಿದೆ.
ಬಜಪೆ ಪೊಲೀಸ್ ಠಾಣೆಯ ಪಿಎಸ್ ಐ ಕುಮಾರೇಶನ್ ರವರು ರೌಂಡ್ಸ್ ಮಾಡುತ್ತಾ ಮಂಗಳೂರು ತಾಲೂಕು ಮೊಗರು ಗ್ರಾಮದ ತಾರೆಮಾರ್ ಎಂಬಲ್ಲಿ ಗಂಜಿಮಠ ಕಡೆಯಿಂದ ಮುತ್ತೂರು ಕಡೆಗೆ ಹಾದು ಹೋಗಿರುವ ರಸ್ತೆಯ ಬದಿಯಲ್ಲಿರುವ ಜಯಾನಂದ ಕುಲಾಲ್ ರವರ ಅಂಗಡಿಯ ಬಳಿ ಬಂದಾಗ ಸಮವಸ್ತ್ರದಲ್ಲಿದ್ದ PSI ರವರನ್ನು ನೋಡಿ ಅಂಗಡಿಯ ಬಳಿಯಿದ್ದ ಗಿರಾಕಿಗಳು ಓಡಿ ಹೋಗಿದ್ದು ಅನುಮಾನಗೊಂಡ ಪಿ.ಎಸ್.ಐ ರವರು ಜಯಾನಂದ್ ಕುಲಾಲ್ ರವರ ಅಂಗಡಿಯ ಒಳಗಡೆ ಹೋಗಿ ನೋಡಿದಾಗ ಶೋಕೇಸ್ ನ ಅಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ 90 ML ನ ಒಟ್ಟು 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳಿರುವುದು ಕಂಡು ಬಂದಿರುತ್ತದೆ.
ಮದ್ಯ ಮಾರಾಟದ ಬಗ್ಗೆ ಕೇಳಿದಾಗ ಪರವಾಣಿಗೆ ಇಲ್ಲ ಎಂದು ತಿಳಿಸಿರುತ್ತಾರೆ. ಅದರಂತೆ ಪಿ.ಎಸ್.ಐ ರವರು ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ಮಾಲಿಕ ಜಯಾನಂದ ಕುಲಾಲ್ ರವರನ್ನು ದಸ್ತಗಿರಿ ಮಾಡಿ, 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮದ್ಯ ಮಾರಾಟ ಮಾಡಿ 550/- ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಂಡು ಆಪಾಧಿತನ ವಿರುದ್ದ ಕಾನೂನು ಕ್ರಮ ಜರುಗಿಸಿದ್ದಾರೆ
ಈ ಪತ್ತೆ ಕಾರ್ಯವನ್ನು ಬಜಪೆ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ&ಸು-3) ಕುಮಾರೇಶನ್ ರವರು ಠಾಣೆಯ ಅಪರಾಧ ಪತ್ತೆ ವಿಭಾಗ ಸಿಬ್ಬಂದಿಯವರ ಜೊತೆ ನಡೆಸಿರುತ್ತಾರೆ.