Home Mangalorean News Kannada News ಬಜೆಟಿನಲ್ಲಿ ಕ್ರೈಸ್ತ ಸಮುದಾಯಕ್ಕೆ 200 ಕೋಟಿ ಅನುದಾನ- ಜೋಯ್ಲಸ್ ಡಿಸೋಜಾ ಅಭಿನಂದನೆ

ಬಜೆಟಿನಲ್ಲಿ ಕ್ರೈಸ್ತ ಸಮುದಾಯಕ್ಕೆ 200 ಕೋಟಿ ಅನುದಾನ- ಜೋಯ್ಲಸ್ ಡಿಸೋಜಾ ಅಭಿನಂದನೆ

Spread the love

ಬಜೆಟಿ ನಲ್ಲಿ ಕ್ರೈಸ್ತ ಸಮುದಾಯಕ್ಕೆ 200 ಕೋಟಿ ಅನುದಾನ- ಜೋಯ್ಲಸ್ ಡಿಸೋಜಾ ಅಭಿನಂದನೆ

ಮಂಗಳೂರು: ಮುಖ್ಯಮಂತ್ರಿ    ಬಿ.ಎಸ್. ಯಡಿಯೂರಪ್ಪ ಅವರು ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‍ನಲ್ಲಿ 200 ಕೋಟಿ ರೂಪಾಯಿಗಳನ್ನು ಘೋಷಿಸಿರುವುದನ್ನು ಕ್ರೈಸ್ತ ಸಮುದಾಯವು ಕೃತಜ್ಞತಾಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜೋಯ್ಲಸ್ ಡಿ’ಸೋಜಾ ಹೇಳಿದ್ದಾರೆ.

2011-12ರ ಬಜೆಟ್‍ನಲ್ಲಿ ಅಂದು ಮುಖ್ಯಮಂತ್ರಿಗಳಾಗಿದ್ದ   ಯಡಿಯೂರಪ್ಪರವರು ಕರ್ನಾಟಕದ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಕ್ರೈಸ್ತ ಸಮುದಾಯಕ್ಕಾಗಿ ರೂ. 50 ಕೋಟಿಯನ್ನು ಮೀಸಲಿರಿಸಿದ್ದರು. ಇದೀಗ ಪ್ರಸ್ತುತ ವರ್ಷ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ರೂ. 200 ಕೋಟಿ ಮೀಸಲಿರಿಸಿರುವುದು ಕ್ರೈಸ್ತ ಸಮುದಾಯದ ಬಗ್ಗೆ ಸನ್ಮಾನ್ಯ ಯಡಿಯೂರಪ್ಪ ಅವರಿಗೆ ಇರುವ ಕಾಳಜಿಯ ಪ್ರತೀಕ. ಇದಕ್ಕಾಗಿ ಕರ್ನಾಟಕದ ಕ್ರೈಸ್ತ ಸಮುದಾಯದ ಪರವಾಗಿ ಮುಖ್ಯಮಂತ್ರಿಗಳಾದ  ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Spread the love

Exit mobile version