ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ 853 ಲೋಡ್ ಅಕ್ರಮ ಮರಳು ವಶ
ಮಂಗಳೂರು: ಬಜ್ಪೆ ಠಾಣಾ ವ್ಯಾಪ್ತಿಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 35 ಲಕ್ಷ ಮೌಲ್ಯದ 853ಲೋಡ್ ಮರಳನ್ನು ಮಂಗಳವಾರ ಪೋಲಿಸ್ ಅಧಿಕಾರಿಗಳ ತಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ಮುಟ್ಟುಗೋಲು ಹಾಕಿದ್ದಾರೆ.
ಬಡಗುಳಿಪಾಡಿ ಗ್ರಾಮದ ನಾಲ್ಕು ಕಡೆಗಳಲ್ಲಿ ಒಟ್ಟು 313, ಮೊಗರು ಗ್ರಾಮದ ನಾರ್ಲಪದವಿನಲ್ಲಿ ಎರಡುಕಡೆ ಒಟ್ಟು 233 ಲೊಡ್ ಮೂಡುಪೆರಾರ ಗ್ರಾಮದ ಚರ್ಚ್ ಬಳಿ ಎರಡುಕಡೆ ಒಟ್ಟು 307 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯ ವಿಶೇಷ ತಂಡದಲ್ಲಿ ಶ್ರೀ ಗೋಪಾಲಕೃಷ್ಣ ನಾಯಕ್ . ಎ.ಸಿ.ಪಿ., ಸಿಸಿಆರ್ ಬಿ., ಪೊಲೀಸ್ ನಿರೀಕ್ಷಕರಾದ ಶ್ರೀ ಶ್ರೀನಿವಾಸ್, ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಪರಶಿವಮೂರ್ತಿ, ಸೈಬರ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ರೀ ರಾಜಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಶ್ರೀ ಬಿ.ಕೆ ಮೂರ್ತಿ, ಕಂದಾಯ ಇಲಾಖೆಯ ಗ್ರಾಮ ಕರಣಿಕರಾದ ಮುತ್ತಪ್ಪ ಮತ್ತು ದಿನೇಶ್ ಕುಮಾರ್, ಹಾಗೂ ಮಂಗಳೂರು ಸಿಸಿಬಿ ಘಟಕದ ಪಿ.ಎಸ್.ಐ ಶ್ರೀ ಕಬ್ಬಳ್ ರಾಜ್, ಶ್ರೀ ಶಶಿಧರ್ ಶೆಟ್ಟಿ, ಶ್ರೀ ಚಂದ್ರಶೇಖರ್, ಶ್ರೀ ಚಂದ್ರಹಾಸ್, ಶ್ರೀ ಚಂದ್ರ, ಶ್ರೀ ಸುಬ್ರಮಣ್ಯ, ಶ್ರೀ ರಾಮ ಪೂಜಾರಿ, ಶ್ರೀ ರಾಜೇಂದ್ರ ಪ್ರಸಾದ್, ಶ್ರೀ ಅಬ್ದುಲ್ ಜಬ್ಬಾರ್, ಶ್ರೀ ಆಶಿತ್ ಡಿಸೋಜಾ, ಶ್ರೀ ತೇಜ ಕುಮಾರ್, ಶ್ರೀ ರಿತೇಶ್, ಸೈಬರ್ ಪೊಲೀಸ್ ಠಾಣೆಯ ಕುಮಾರ್ ಹಾಗೂ ಬಜಪೆ ಪೊಲೀಸ್ ಠಾಣೆಯ ರಾಜೇಶ್, ಶ್ರೀ ಯೋಗೀಶ್, ಶ್ರೀ ಕಿಷ್ಟಪ್ಪ ರಾಥೋಡ್ ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.