Home Mangalorean News Kannada News ಬಡಕಬೈಲ್: ಗೋಣಿ ಚೀಲ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ; ಅಪಾರ ನಷ್ಟ

ಬಡಕಬೈಲ್: ಗೋಣಿ ಚೀಲ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ; ಅಪಾರ ನಷ್ಟ

Spread the love

ಬಡಕಬೈಲ್: ಗೋಣಿ ಚೀಲ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ; ಅಪಾರ ನಷ್ಟ

ಬಂಟ್ವಾಳ : ಗೋಣಿ ಚೀಲ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರ ಮಧ್ಯರಾತ್ರಿ ತಾಲೂಕಿನ ಬಡಕಬೈಲ್ ಎಂಬಲ್ಲಿ ನಡೆದಿದೆ.

ಘಟನೆಯಿಂದಾಗಿ ಇಲ್ಲಿನ ನಿವಾಸಿ ಮುಹಮ್ಮದ್ ಯಾನೆ ಮೋನಾಕ ಎಂಬವರ ಗೋಣಿ ಚೀಲ ದಾಸ್ತಾನು ಇರಿಸುವ ಗೋದಾಮು ಸಂಪೂರ್ಣ ಸುಟ್ಟು ಹೋಗಿದ್ದು, ಪಕ್ಕದ ಹಮೀದ್ ಹಾಗೂ ಸರ್ಪುದ್ದೀನ್ ಎಂಬವರ ಮನೆಗೂ ಬೆಂಕಿ ತಗುಲಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ.

ತಡರಾತ್ರಿ ಘಟನೆ ಈ ಘಟನೆ ನಡೆದಿದ್ದು ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹಾಗೂ ಸಾರ್ವಜನಿಕರು ಹರಸಾಹಸ ಪಡಬೇಕಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಘಟನೆ ಗೆ ಕಾರಣ ಎನ್ನಲಾಗುತ್ತಿದೆ.


Spread the love

Exit mobile version