ಬಡ ಕುಟುಂಬದ ಪರನಿಂತ ಶಾಸಕ ಹರೀಶ್ ಪೂಜಾ ವಿರುದ್ಧ ಕೇಸ್ : ಯಶ್ಪಾಲ್ ಸುವರ್ಣ ಖಂಡನೆ
ಉಡುಪಿ: ಬಡ ಕುಟುಂಬದ ಪರನಿಂತ ಬೆಳ್ತಂಗಡಿ ಶಾಸಕ ಹರೀಶ್ ಪೂಜಾ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲೆ ಮಾಡಿರುವುದನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಖಂಡಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯಕ್ಕೆ ಒಳಗಾದ ಬಡ ಕುಟುಂಬದ ಪರನಿಂತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಅಧಿಕಾರಿಗಳ ಮೂಲಕ ಕೇಸ್ ಕಾಂಗ್ರೆಸ್ ಸರಕಾರ ದಾಖಲಿಸಿದೆ.
ಓರ್ವ ಜವಾಬ್ದಾರಿಯುತ ಶಾಸಕನಾಗಿ ತನ್ನ ಕ್ಷೇತ್ರದ ಬಡ ಕುಟುಂಬದ ಪರ ನಿಂತು ದೌರ್ಜನ್ಯವನ್ನು ಖಂಡಿಸುವುದು ತಪ್ಪೇ???
ಕರಾವಳಿಯ ಬಿಜೆಪಿ ಶಾಸಕರನ್ನು ಶತಾಯ ಗತಾಯ ಕಟ್ಟಿಹಾಕುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ಶಿವಮೊಗ್ಗ ಗಲಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಲ್ಲು ತೂರಾಟ ನಡೆಸಿದ ಮತಾಂಧ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ ರಾಜ್ಯ ಸರಕಾರ, ಹರೀಶ್ ಪೂಂಜಾರ ವಿರುದ್ಧ ಕೇಸ್ ದಾಖಲಿಸಲು ಅಧಿಕಾರಿಗಳಿಗೆ ಒತ್ತಡ ಹಾಕಿದೆ.
ಇಂತಹ ನೂರು ಕೇಸ್ ಗಳನ್ನು ಬಿಜೆಪಿ ಶಾಸಕರ ವಿರುದ್ಧ ದಾಖಲಿಸಿದರೂ ಬಡ ಜನರ ಹಿತಕಾಯುವ ವಿಚಾರದಲ್ಲಿ ಎಂದಿಗೂ ರಾಜೀಯಾಗುವ ಪ್ರಶ್ನೆಯೇ ಇಲ್ಲ
ಸಂಘಟನೆಯ ಹಿನ್ನೆಲೆಯಲ್ಲಿ ಬೆಳೆದು ಬಂದ ಬಿಜೆಪಿ ಶಾಸಕರು ಕಾಂಗ್ರೆಸ್ ಸರಕಾರದ ಬೆದರಿಕೆ ತಂತ್ರಗಳಿಗೆ ಮಣಿಯುವವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.