ಬದ್ರಿಯಾ ಫ್ರೆಂಡ್ಸ್ ದುಬೈ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಯಶಸ್ವಿ ರಕ್ತದಾನ ಶಿಬಿರ
ದುಬೈ: ಬದ್ರಿಯಾ ಫ್ರೆಂಡ್ಸ್ ದುಬೈ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ 6ನೇ ವರ್ಷದ ಪಾದರ್ಪಣೆ ರಕ್ತದಾನ ಶಿಬಿರ ಲತೀಫಾ ಆಸ್ಪತ್ರೆ ಬ್ಲಡ್ ಡೊನೇಷನ್ ಸೆಂಟರ್ ಹೂದ್ ಮೆಹ್ತಾ ದುಬೈ ಬೃಹತ್ ರಕ್ತದಾನ ಶಿಬಿರ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ಅಬ್ದುಲ್ ಲತೀಫ್ ಮುಲ್ಕಿ ಉಪಾಧ್ಯಕ್ಷರು ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ ಮಾತನಾಡುತ್ತಾ ಬದ್ರಿಯ ಫ್ರೆಂಡ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ಸತತ 6ನೇ ಬಾರಿ ಒಟ್ಟು ಸೇರಿ ಒಂದು ಅದ್ಬುತ ಕೆಲಸ ಮಾಡುತ್ತಾ ಇದ್ದಾರೆ ಇವರಿಗೆ ಇನ್ನೂ ಮುಂದೆ ಕೂಡ ಇಂತ ಕೆಲಸ ಮಾಡಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಲಿ ಎಂದು ಆಶಿಸಿದರು.
ಮೊಹಮ್ಮದ್ ಶಾಫಿ ಮ್ಯಾನೇಜರ್ ಕರ್ನಾಟಕ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಯು.ಎ.ಇ ಮಾತನಾಡುತ್ತಾ ಬದ್ರಿಯ ಫ್ರೆಂಡ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ)ಮಾಡುವ ಕೆಲಸವನ್ನು ಮೆಚ್ಚಿ ಇನ್ನೂ ಮುಂದೆ ಕೂಡ ಇಂತ ಕೆಲಸ ಮಾಡಲಿ ತಿಳಿಸಿದರು.ನಾನು ಕೂಡ ಈ ರಕ್ತದಾನ ಗ್ರೂಪಿನ ಸದಸ್ಯನಾಗಿದ್ದು ಯಾವುದೇ ಸಮಯದಲ್ಲಿ ರಕ್ತದ ಬೇಡಿಕೆ ಬಂದಾಗ ತಕ್ಷಣ ಅದಕ್ಕೆ ಬೇಕಾದ ರಕ್ತದ ಪೂರೈಕೆ ಆಗಿದೆ ಅಂತ ಮರು ಉತ್ತರ ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡದ ಕಾರ್ಯನಿರ್ವಾಹಕರಿಂದ ಬರುತ್ತದೆ. ನಾವು ನೋಡಿದ ಸಂಘಟನೆಯಲ್ಲಿ ದಿನದ 24 ಗಂಟೆ ವರ್ಷದ 365 ದಿನ ಸಮಾಜ ಸೇವೆಯಲ್ಲಿ ಕಾರ್ಯನಿರ್ವಹಿಸುವ ಒಂದು ಸಂಘಟನೆ ಇದ್ದರೆ ಅದು ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡ ಮಾತ್ರ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.ರಕ್ತದಾನ ಮಹಾ ದಾನ ವಾಗಿದ್ದು ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಕೇವಲ ದಾನದ ರೂಪದಲ್ಲಿ ಮಾತ್ರ ಪಡೆಯಲು ಸಾಧ್ಯ. ಹಾಗಾಗಿ ರಕ್ತದಾನ ಅತ್ಯಂತ ಪುಣ್ಯದ ಕೆಲಸ. ಒಂದು ರೀತಿಯ ಜೀವದಾನವೂ ಹೌದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಕ್ತರ್ ಹುಸೈನ್ ಟ್ರಷ್ಟಿ ಹಿದಾಯ ಫೌಂಡೇಶನ್ ಯುನೈಟೆಡ್ ಅರಬ್ ಎಮಿರೇಟ್ಸ್, ಅನ್ವರ್ ಸಾದತ್ ಬದ್ರಿಯ ಫ್ರೆಂಡ್ಸ್ ಕಾರ್ಯ ಕಾರಿಣಿ ಮಂಡಳಿ ಮುಖ್ಯಸ್ಥ ರು ಯು.ಎ.ಇ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಯು.ಎ.ಇ ಇದರ ಕಾರ್ಯನಿರ್ವಾಹಕರಾದ ಶಂಶುದ್ದೀನ್ ಪಿಲಿಗೂಡು,ರಾಝಿಕ್ ‘ಡಿ’ವಿಟ್ಲ, ,ಬದ್ರಿಯ ಫ್ರೆಂಡ್ಸ್ ಯು.ಎ.ಇ ಪರವಾಗಿ ಮೊಹಮ್ಮದ್ ಇರ್ಷಾದ್ ಓರಿಯನ್,ಅಬ್ದುಲ್ ರಹಿಮಾನ್ ಪೊಯ್ಯಾಲ್ ಬಾಗವಹಿಸಿದ್ದರು.
ಈ ರಕ್ತದಾನ ಶಿಬಿರದಲ್ಲಿ 96 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಮತ್ತು ಬದ್ರಿಯ ಫ್ರೆಂಡ್ಸ್ ಇದರ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕಮವನ್ನು ಮೊಹಮ್ಮದ್ ಆಶಿಕ್ ಬಂದರ್ ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಯು.ಎ.ಇ.ಇದರ ಮುಖ್ಯ ಕಾರ್ಯನಿರ್ವಾಹಕ ನಝೀರ್ ಬಿಕರ್ನಕಟ್ಟೆ ವಂಧಿಸಿದರು.
ಬ್ಲಡ್ ಡೋ
ನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಮತ್ತು ಬದ್ರಿಯ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಮಹಮ್ಮದ್ ಅಲ್ತಾಫ್ 6ನೇ ವರ್ಷಕ್ಕೆ ಚಾಲನೆ ನೀಡಿದ ಬದ್ರಿಯ ಫ್ರೆಂಡ್ಸ್ ಮತ್ತು ಬ್ಲಡ್ ಡೋನರ್ಸ್ ಯು.ಎ.ಇ ಘಟಕಕ್ಕೆ ಧನ್ಯವಾದ ತಿಳಿಸಿದ್ದಾರೆ.