ಬನ್ನಂಜೆಯವರ ಗಂಟ್ಕಲ್ವೆರ್ ಚಿತ್ರಕ್ಕೆ ಮೂಹೂರ್ತ
ಸ್ನೇಹ ಕೃಪಾ ಮೂವೀಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಸುಧಾಕರ ಬನ್ನಂಜೆ ನಿರ್ದೇಶನದ ಗಂಟ್ ಕಲ್ವೆರ್ ಎಂಬ ತುಳು ಚಿತ್ರದ ಮೂಹೂರ್ತ ಸಮಾರಂಭವು ಕದ್ರಿ ಶ್ರೀಮಂಜುನಾಥೇಶ್ವರ ದೇವಸ್ಥಾನದಲ್ಲಿ ಜರಗಿತು.
ಮಾಜಿ ಸಚಿವ ಕೃಷ್ಣ ಪಾಲೆಮಾರ್ ಕ್ಯಾಮೆರಾಕ್ಕೆ ಚಾಲನೆ ನೀಡಿದರು. ಡಾ.ಸಾಯಿದತ್ತ ರಘುನಾಥ ಗುರೂಜಿ ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಪೆರ್Çರೇಟರ್ ಅಶೋಕ್ ಡಿ.ಕೆ, ನಿರ್ದೇಶಕ ಡಾ.ರಿಚರ್ಡ್ ಕ್ಯಾಸ್ಟೊಲಿನೋ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ನವೀನ್ ಪಡೀಲ್, ಮನಪಾ ಸದಸ್ಯ ಎಂ.ಗಣೇಶ್ ಮಣ್ಣಗುಡ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪಳ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಉಡುಪಿ ಬಿರ್ತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಗಂಗಾಧರ್ ಬಿರ್ತಿ ಉಪಸ್ಥಿತರಿದ್ದರು.
ಚಿತ್ರದಲ್ಲಿ ನವೀನ್ ಡಿ.ಪಡೀಲ್, ವಿಜೇಶ್ ಶೆಟ್ಟಿ, ಸ್ಮಿತಾ ಸುವರ್ಣ, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಕಾರ್ಕಳ ಶೇಖರ್ ಭಂಡಾರಿ, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ವಿ.ಕೆ.ಪ್ರಶಾಂತ ಎಳ್ಳಂಪಳ್ಳಿ, ಗಿರೀಶ್ ಶೆಟ್ಟಿ ಕಟೀಲ್, ಯಾದವ ಮಣ್ಣಗುಡ್ಡೆ, ಶೇಖರ ಪಾಂಗಳ, ಸುರೇಶ್ ಯು.ಪಿ, ಸಂದೀಪ್, ವಸಂತ ಮುನಿಯಾಲ್, ದಿಶಾ.ಜೆ.ಪುತ್ರನ್, ಮೈತ್ರಿ ಭಟ್, ರಾಜಾ ರಾಮ್ ಶೆಟ್ಟಿ ಉಪ್ಪಳ, ನಾಗೇಶ್ ಡಿ.ಶೆಟ್ಟಿ ಮೂಡಬಿದ್ರೆ, ಸುಧೀರ್ ಕೊಠಾರಿ, ಪ್ರದೀಪ್ ಆಳ್ವ ಕದ್ರಿ, ಪ್ರಜ್ವಲ್ ಪಾಂಡೇಶ್ವರ್, ಸುರೇಂದ್ರ ಬಂಟ್ವಾಳ್, ಶಶಿ ಬೆಳ್ಳಾಯರು. ಶೈಲೇಶ್ ಕೋಟ್ಯಾನ್, ಕ್ಲ್ಯಾಡಿ ಡಿಮೆಲ್ಲೋ, ಮಾಸ್ಟರ್ ಪ್ರೇರಣ್, ಮಾಸ್ಟರ್ ಹಿಂಪನ್ ಪದ್ಮನಾಭ್, ಬ್ರಿಜೇಶ್, ಮುಂತಾದವರು ಅಭಿನಯಿಸಲಿ ದ್ದಾರೆ. ಛಾಯಾಗ್ರಹಣ ಶಂಕರ್, ಸಂಗೀತ ಹರ್ಷವರ್ಧನ್, ಕಲೆ ತಮ್ಮ ಲಕ್ಷ್ಮಣ, ಸಹ ನಿರ್ದೇಶನ ವಿ.ಕೆ.ಪ್ರಶಾಂತ ಎಳ್ಳಂಪಳ್ಳಿ, ರಾಮದಾಸ್ ಸಸಿಹಿತ್ಲು, ಸಂಕಲನ ಕೆ.ಗಿರೀಶ್ ಕುಮಾರ್, ನಿರ್ಮಾಣ ನಿರ್ವಹಣೆ ಸತೀಶ್ ಬ್ರಹ್ಮಾವರ, ಕಾರ್ಯಕಾರಿ ನಿರ್ಮಾಪಕರು ಕಾರ್ಕಳ ಶೇಖರ್ ಭಂಡಾರಿ, ಸಹ ನಿರ್ಮಾಪಕರು ರಾಜಾರಾಮ ಶೆಟ್ಟಿ ಉಪ್ಪಳ, ನಾಗೇಶ್ ಡಿ.ಶೆಟ್ಟಿ ಮೂಡುಬಿದ್ರೆ, ಕೃತಿ ಆರ್ ಶೆಟ್ಟಿ, ಡಾ.ವಿಶಾಲ್ ನಾಯಕ್, ಕತೆ, ಚಿತ್ರಕತೆ, ಸಂಭಾಷಣೆ ನಿರ್ದೇಶನ ಸುಧಾಕರ್ ಬನ್ನಂಜೆ ಅವರದ್ದಾಗಿದೆ.
ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆಯ ಜತೆಗೆ ನಿರ್ದೇಶದ ಜವಾಬ್ದಾರಿ ಹೊತ್ತಿರುವ ಸುಧಾಕರ ಬನ್ನಂಜೆ ಅವರು ಗಂಟ್ ಕಲ್ವೆರ್ ಸಿನಿಮಾವನ್ನು ಸುಮಾರು 50 ದಿನಗಳಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದಾರೆ.