Home Mangalorean News Kannada News ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎನ್ನುವ ಕಾಲ ಇದು- ಪುರುಷೋತ್ತಮ ಬಿಳಿಮಲೆ

ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎನ್ನುವ ಕಾಲ ಇದು- ಪುರುಷೋತ್ತಮ ಬಿಳಿಮಲೆ

Spread the love

ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎನ್ನುವ ಕಾಲ ಇದು- ಪುರುಷೋತ್ತಮ ಬಿಳಿಮಲೆ

ಇಂದು ತುಳುನಾಡಿನ ದೈವವಾದ ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ರಾಮಾಯಣದ ಬಗ್ಗೆ ಮಾತನಾಡಿದರೆ ತಮ್ಮ ಭಾವನೆಗಳಿಗೆ ಧಕ್ಕೆಯಾಯಿತು ಎನ್ನುತ್ತಾರೆ. ಹಾಗಾದರೆ ಬಬ್ಬರ್ಯನ ಇತಿಹಾಸವನ್ನು ತಿರುಚಿದರೆ ನಮಗೆ ನೋವಾಗುವುದಿಲ್ಲವೇ? ಆದರೆ ನಮ್ಮ ಧ್ವನಿ ಯಾಕೆ ಕೇಳುತ್ತಿಲ್ಲ ಎಂದು ಖ್ಯಾತ ಜಾನಪದ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದರು.

ಭಾರತೀಯ ಸಂಸ್ಕøತಿಯನ್ನು ಇಟ್ಟಿಗೆಗೆ ಸೀಮಿತಗೊಳಿಸಿದವರು ಬಿಜೆಪಿಯ ಮಂದಿ. ಇಂದು ಕರಾವಳಿಯಲ್ಲಿ ಯಕ್ಷಗಾನ ಕೂಡ ದಾರಿತಪ್ಪಿದೆ. ರಾಮ ವಿಜಯ ಎನ್ನುವುದು ರಾವಣ ವಧೆ, ವಾಲಿವಧೆ ಎಂದು ನೆಗೆಟಿವ್ ಶೀರ್ಷಿಕೆಗಳಿಂದ ಗುರುತಿಸಲ್ಪಡುತ್ತಿದೆ. ಅದಕ್ಕೆ ಕರಾವಳಿಯಲ್ಲಿ ಖಳರಿಗೆ ಮಣೆ ಹಾಕುತ್ತಿರುವುದೇ ಕಾರಣ ಎಂದು ಬಿಳಿಮಲೆಯವರು ಖೇದ ವ್ಯಕ್ತಪಡಿಸಿದರು. ಅವರು ಮಂಗಳೂರಿನ ನಂತೂರಿನಲ್ಲಿ ನಡೆದ ಐದನೇ ವರ್ಷದ ಜನನುಡಿ ಕಾರ್ಯಕ್ರಮದ ಸಂವಾದಗೋಷ್ಠಿಯಲ್ಲಿ ಅವರು ಅಂಬೇಡ್ಕರ್ ವಿಚಾರ ಧಾರೆಯ ಬಗ್ಗೆ ಮಾತನಾಡುತ್ತಿದ್ದರು. ಬ್ಯಾಂಕ್ ಲೂಟಿ ಮಾಡಿ ಕೋಟಿಗಟ್ಟಲೆ ಹಣದೊಂದಿಗೆ ಪರಾರಿಯಗುತ್ತಾರೆ. ಅದನ್ನು ತಡೆಯಲಾರದವರು ರೈತರ ಸಾವಿಗೆ ಉತ್ತರ ನೀಡಲಾಗದೇ ಹೋಗಿದ್ದಾರೆ. ಈಗಲೇ ಹೀಗಾದರೆ ವರ್ತಮಾನದ ಭಾರತದ ಅಪಾಯ ಹೇಗಿರಬಹುದು. ಇಡೀ ದೇಶ ಜೆಎನ್ ಯು ವನ್ನು ನಾಶ ಮಾಡಲು ಹೊರಟಿದೆ ಎನ್ನಬಹುದು. ಸಂವಿಧಾನದ ಬದಲು ಮನುಸ್ಮøತಿ ತರಲು ಮುಂದಾಗಿದೆ. ದೇಶವೇ ಎಬಿವಿಪಿ ಸಂಘಟನೆಗಳ ಬೆಂಬಲಕ್ಕೆ ನಿಂತಾಗ ಕೋಮುವಾದಿಗಳ ವಿರುದ್ಧ ಹೋರಾಡಲೇಬೇಕಾಗಿತ್ತು. ಭಕ್ತರು ದೇವರನ್ನು ನೋಡುವಾಗ ಕಣ್ಣುಮುಚ್ಚುವಂಥವರು. ಅವರು ಕಮ್ಯುನಿಸ್ಟ್ ವಿರೋಧಿಸಬೇಕು ಎಂದುಕೊಂಡವರೇ ಹೊರತು ಕಮ್ಯುನಿಸ್ಟ್ ಅಂದರೆ ಏನು ಎಂದು ತಿಳಿದವರಲ್ಲ. ಕೋಮುವಾದವನ್ನು ವಿರೋಧಿಸುವವರೆಲ್ಲ ಒಂದಾಗಬೇಕು. ಜೆಎನ್ ಯುನಲ್ಲಿ ಕೋಮುವಾದದ ವಿರುದ್ಧ ಹೋರಾಡುವ 21 ಗುಂಪುಗಳಿಗೆ ಬಹುಜನ ಸಮಾಜಪಕ್ಷದ ಬೆಂಬಲವಿಲ್ಲ. ಮುಂದಿನ ಚುನಾವಣೆಯಲ್ಲಿ ಮಾಯಾವತಿ ಅಮಿತ್ ಷಾಗೆ ಬೆಂಬಲ ನೀಡಿದರೂ ಅಚ್ಚರಿಯಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ಮಾಕ್ರ್ಸ್‍ವಾದಿಗಳಂತೆ ಅಧಾರ್ಮಿಕ ಅಲ್ಲ ಎನ್ನುತ್ತಾರೆ ಡಾ.ಅಂಬೇಡ್ಕರ್. ಧರ್ಮವನ್ನು ಒಪ್ಪಿಕೊಂಡು ಅದರಲ್ಲಿನ ಹುಳುಕುಗಳನ್ನು ಪ್ರಶ್ನೆ ಮಾಡಬೇಕು ಎನ್ನುವುದು ಅಂಬೇಡ್ಕರ್ ವಾದ. ಆ ನಿಟ್ಟಿನಲ್ಲಿ ನೋಡುವುದಾದರೆ, ಎಲ್ಲ ಹಿಂದುಗಳು ಒಂದು ಎನ್ನುವವರನ್ನು ನಾವು ಪ್ರಶ್ನಿಸಬಹುದು. ಎಲ್ಲರಿಗೂ ಒಂದೇ ಎನಿಸುವಂಥ ಒಂದು ಧರ್ಮಗ್ರಂಥ ಹಿಂದೂಗಳಿಗೆ ಇಲ್ಲವೇಕೆ ಎನ್ನುವುದು ತಮ್ಮ ಪ್ರಶ್ನೆ ಎಂದು ಪುರುಷೋತ್ತಮ ಬಿಳಿಮಲೆಯವರು ಪ್ರಶ್ನಿಸಿದರು.
ಭವಿಷ್ಯದ ಭಾರತದಲ್ಲಿ ಮಾಕ್ರ್ಸ್, ಅಂಬೇಡ್ಕರ್, ಗಾಂಧಿ ಮತ್ತು ಲೋಹಿಯಾ ಪಾತ್ರದ ಬಗ್ಗೆ ಗೋಷ್ಠಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತ ಜಿ.ರಾಜಶೇಖರ್ ಅವರು ಮಾರ್ಕ್ಸ್‍ವಾದದ ತಿರುಳನ್ನು ಸರಳವಾಗಿ ಮುಂದಿಡುವ ಪ್ರಯತ್ನ ಮಾಡಿದರು. ಎಲ್ಲದರಲ್ಲಿಯೂ ಸಮಾನತೆಗಾಗಿ ಹೋರಾಡಿದ ವ್ಯಕ್ತಿಯಾಗಿ ಮಾರ್ಕ್ಸ್ ಇರುವುದಾಗಿ ಅವರು ನೆನಪಿಸಿದರು. ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಎದುರಿಸಿದ್ದು ಮಾಕ್ರ್ಸ್‍ವಾದಿ ಕಮ್ಯುನಿಷ್ಟರು ಎಂದ ರಾಜಶೇಖರ್ ಅವರು ಭವಿಷ್ಯದ ಬದಲಾವಣೆಯನ್ನು ಅದರಲ್ಲೇ ಕಾಣುವ ಭರವಸೆ ವ್ಯಕ್ತಪಡಿಸಿದರು. ಲೋಹಿಯಾ ಬಗ್ಗೆ ಡಾ. ಡಿ ಡೊಮಿನಿಕ್ ಮಾತನಾಡಿದರು. ಮುಜಾಫರ್ ಅಸ್ಸಾದಿಯವರು ಗಾಂಧಿಯ ಬಗ್ಗೆ ಮಾತನಾಡುತ್ತಾ ಮಹಾತ್ಮನ ಕುರಿತಾದ ನಂಬಿಕೆ ಹೇಗೆ ಕಾಲಕಾಲಕ್ಕೆ ಬದಲಾಗಿದೆ ಎನ್ನುವುದನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾ ಹೊಸ ರಾಜಕಾರಣದಲ್ಲಿ ಮಹಾತ್ಮಾ ಗಾಂಧಿಯವರ ಅಗತ್ಯವಿದೆ ಎಂದರು. ಭಾನುವಾರದ ಕಾರ್ಯಕ್ರಮದಲ್ಲಿ ಸಾಹಿತ್ಯ ಮನರಂಜನೆಗಳ ಜೊತೆಗೆ ಇನ್ನಷ್ಟು ಸಂವಾದಗೋಷ್ಠಿಗಳು ನಡೆಯಲಿರುವುದಾಗಿ ಜನನುಡಿ ತಂಡ ತಿಳಿಸಿದೆ.


Spread the love
1 Comment
Inline Feedbacks
View all comments
Oringial R.Pai
5 years ago

A bunch of marxists questioning sanathana dharma followers while remaining totally silent on social issues in Islamic and christian population. This is why nobody respects these fake intellectuals. You have to be honest and consistent in your criticism.

wpDiscuz
Exit mobile version