ಬಲ್ಮಠದಲ್ಲಿ  ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ `ಮೈಲ್‍ಸ್ಟೋನ್ 25′ ವಾಣಿಜ್ಯ ಸಂಕೀರ್ಣ ಉದ್ಘಾಟನೆ

Spread the love

ಬಲ್ಮಠದಲ್ಲಿ  ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ `ಮೈಲ್‍ಸ್ಟೋನ್ 25′ ವಾಣಿಜ್ಯ ಸಂಕೀರ್ಣ ಉದ್ಘಾಟನೆ
 

ಮಂಗಳೂರು: ನಗರದ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯು ನಗರದ ಬಲ್ಮಠದ ಕಲೆಕ್ಟರ್ಸ್ ಗೇಟ್ ಬಳಿ ನಿರ್ಮಿಸಿರುವ ಪ್ರತಿಷ್ಠಿತ `ಮೈಲ್‍ಸ್ಟೋನ್ 25′ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ಗುರುವಾರ ಲೋಕಾರ್ಪಣೆಗೊಂಡಿತು.

ಮಣಿಪಾಲ್ ಮೀಡಿಯಾ ನೆಟ್‍ವರ್ಕ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಟಿ. ಸತೀಶ್ ಯು. ಪೈ ಮತ್ತು `ತರಂಗ’ ವಾರ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್. ಪೈ ಅವರು ಈ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಲ್ಲಡ್ಕದ ಶ್ರೀ ರಾಮ ವಿದ್ಯಾಕೇಂದ್ರ ಟ್ರಸ್ಟ್‍ನ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸಂಕೀರ್ಣದ ಪ್ರವೇಶ ಆವರಣದಲ್ಲಿ ಗಣೇಶ ದೇವರ ವಿಗ್ರಹವನ್ನು ಅನಾವರಣ ಮಾಡಿದರು. ಯೇನಪೆÇಯ ಡೀಮ್ಡ್ ವಿ.ವಿ.ಯ ಕುಲಪತಿ ಅಲ್‍ಹಾಜ್ ಯೇನಪೆÇಯ ಅಬ್ದುಲ್ಲ ಕುಂಞÂ ಅವರು ಇದೇ ಸಂಕೀರ್ಣದ 5ನೇ ಅಂತಸ್ತಿನಲ್ಲಿ ನಿರ್ಮಾಣಗೊಂಡಿರುವ ಲ್ಯಾಂಡ್‍ಟ್ರೇಡ್ಸ್‍ನ ನೂತನ ಕಚೇರಿಯನ್ನು ಉದ್ಘಾಟಿಸಿದರು.

ಲ್ಯಾಂಡ್ ಟ್ರೇಡ್ಸ್‍ನ ಮಾಲಕ ಕೆ. ಶ್ರೀನಾಥ್ ಹೆಬ್ಬಾರ್ ಸ್ವಾಗತಿಸಿ, 27 ವರ್ಷಗಳ ಹಿಂದೆ 1992 ಅ.28 ರಂದು ಸಂಸ್ಥೆಯು ಆರಂಭವಾಗಿದ್ದು, ಗ್ರಾಹಕರಿಗೆ ಅವರ ಹಣಕ್ಕೆ ಸೂಕ್ತ ಮೌಲ್ಯ ಒದಗಿಸುವುದು ಸಂಸ್ಥೆಯ ಧ್ಯೇಯ. ಈ ಧ್ಯೇಯವನ್ನು ಈಡೇರಿಸಿದ ತೃಪ್ತಿ ನಮಗಿದೆ ಎಂದರು. ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಸ್ಥಾಪನೆಯ 25 ವರ್ಷಗಳು ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಸಾರ್ಥಕ ಎರಡೂವರೆ ದಶಕಗಳ ಯಶಸ್ವೀ ಪರಂಪರೆಯ ನೆನಪಿಗಾಗಿ ಈ `ಮೈಲ್‍ಸ್ಟೋನ್ 25′ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ. 14-7-2016ರಂದು ಶಿಲಾನ್ಯಾಸಗೊಂಡು ಲ್ಯಾಂಡ್ ಟ್ರೇಡ್ಸ್ ಪರಂಪರೆಯಂತೆ ಘೋಷಿತ ಅವಧಿಯೊಳಗೆ ಈ ವಿಸ್ತೃತ ಹಾಗೂ ವಿಶಿಷ್ಟ ವಾಸ್ತು ಶೈಲಿಯ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯ ಒದಗಿಸುವ ಪ್ರಯತ್ನ ಶ್ಲಾಘನೀಯ: ಸಂಧ್ಯಾ ಎಸ್. ಪೈ
ಕಳೆದ 70 ವರ್ಷಗಳಲ್ಲಿ ಮಂಗಳೂರು ಬಹಳಷ್ಟು ಬದಲಾಗಿದ್ದು, ಮುಂಬಯಿನಂತೆ ಹೈರೈಸ್ ಬಿಲ್ಡಿಂಗ್‍ಗಳು ಮಂಗಳೂರನ್ನು ಆವರಿಸಿವೆ. ಹಂಚಿನ ಮನೆಗಳು ಬಹುತೇಕ ಆ್ಯಂಟಿಕ್ ಎನಿಸಿವೆ. ಅಲ್ಲದೆ 10 ವರ್ಷಗಳಿಂದೀಚೆಗೆ ಬಿಲ್ಡರ್‍ಗಳಿಂದ ಗ್ರಾಹಕರಿಗೆ ಅತ್ಯುತ್ತಮವಾದುದನ್ನು ಒದಗಿಸುವ ಪ್ರಯತ್ನದಿಂದಾಗಿ ಜನರಿಗೆ ಆಧುನಿಕ ಸೌಲಭ್ಯಗಳು ಲಭಿಸುವಂತಾಗಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಸಂಧ್ಯಾ ಎಸ್. ಪೈ ಅವರು ಹೇಳಿದರು. ಲ್ಯಾಂಡ್ ಟ್ರೇಡ್ಸ್‍ನ ಶ್ರೀನಾಥ್ ಹೆಬ್ಬಾರ್ ಅವರು ಆಕರ್ಷಕ, ಆಧುನಿಕ ಸೌಲಭ್ಯಗಳನ್ನು ಜೋಡಿಸಿ ಯೂಟಿಲಿಟಿ ಯೂಸ್‍ಫುಲ್ ಮನೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದ್ದಾರೆ ಎಂದು ಅಭಿನಂದಿಸಿ ಅವರಿಂದ ಇನ್ನಷ್ಟು ಉತ್ತಮ ಯೋಜನೆಗಳು ಬರಲಿ ಎಂದು ಹಾರೈಸಿದರು.

ನಗರ ಪ್ರದೇಶಗಳಲ್ಲಿ ಜನರು ಪ್ರಸ್ತುತ ತಮ್ಮ ಭದ್ರತೆ ಹಾಗೂ ಜೀವನ ನಿರ್ವಹಣೆ ಅನುಕೂಲತೆಗಳಿಗಾಗಿ ಫ್ಲ್ಯಾಟ್‍ಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಹು ಮಹಡಿ ವಸತಿ ಸಮುಚ್ಛಯಗಳಿಗೆ ನಗರ ವ್ಯಾಪ್ತಿಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀನಾಥ್ ಹೆಬ್ಬಾರ್ ಅವರು ಕಠಿನ ಪರಿಶ್ರಮದಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶಸ್ಸು ಗಳಿಸಿದ್ದು, ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಅಲ್‍ಹಾಜ್ ಯೇನಪೆÇಯ ಅಬ್ದುಲ್ ಕುಂಞÂ ಅವರು ಹೇಳಿ ಶುಭ ಕೋರಿದರು.

ಬಿಲ್ಡರ್‍ಗಳು ಆಕರ್ಷಕ ಕಟ್ಟಡಗಳನ್ನು ಒದಗಿಸುವ ಮೂಲಕ ಮಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ತಮ್ಮ ಬದ್ಧತೆಯ ಸೇವೆಯಿಂದಾಗಿ ಶ್ರೀನಾಥ್ ಹೆಬ್ಬಾರ್ ಅವರು ಗ್ರಾಹಕರ ವಿಶ್ವಾಸ ಗಳಿಸಿದ್ದಾರೆ ಎಂದು ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.

ಕಟ್ಟಡ ನಿರ್ಮಾಪಕರು ಸಮಯಕ್ಕೆ ಸರಿಯಾಗಿ ಹಾಗೂ ಅಚ್ಚು ಕಟ್ಟಾಗಿ ಕಟ್ಟಡ ನಿರ್ಮಾಣವನ್ನು ಪೂರ್ತಿಗೊಳಿಸುವ ಬದ್ಧತೆಯೊಂದಿಗೆ ಶಿಸ್ತು ಪಾಲಿಸ ಬೇಕು. ಶ್ರೀನಾಥ್ ಹೆಬ್ಬಾರ್ ಅವರು ಈ ಎಲ್ಲಾ ಗುಣ ವಿಶೇಷಗಳನ್ನು ಹೊಂದಿದ್ದು, ಜನರ ನಂಬಿಕೆಗೆ ಪಾತ್ರರಾಗಿದ್ದಾರೆ ಎಂದು ಇನ್ನೋರ್ವ ಅತಿಥಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಭಿನಂದಿಸಿದರು.

ಸರಳತೆ ಮತ್ತು ಕಾರ್ಯ ನಿಷ್ಠೆಯಿಂದ ಯಶಸ್ಸು ಬರುತ್ತದೆ ಎನ್ನುವುದಕ್ಕೆ ಶ್ರೀನಾಥ್ ಹೆಬ್ಬಾರ್ ಮೇಲ್ಪಂಕ್ತಿಯಾಗಿದ್ದಾರೆ ಎಂದು ಮತ್ತೋರ್ವ ಅತಿಥಿ ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು. ಮಂಗಳೂರಿನಲ್ಲಿ ವಿವಿಧ ರಂಗಗಳಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿ ಇಲ್ಲಿನ ಆರ್ಥಿಕ ಚಟುವಟಿಕೆಗೆ ಚೇತನ ಲಭಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ. ಎಸ್. ಅವರು, ಲ್ಯಾಂಡ್ ಟ್ರೇಡ್ಸ್ ಹಲವಾರು ಲ್ಯಾಂಡ್ ಮಾರ್ಕ್ ಕಟ್ಟಡಗಳನ್ನು ಒದಗಿಸಿದ ಸಂಸ್ಥೆಯಾಗಿದೆ ಎಂದು ಅಭಿನಂದಿಸಿದರು.

ಬ್ಯಾಂಕ್ ವತಿಯಿಂದ ಗೌರವಾರ್ಪಣೆ: ಕಟ್ಟಡ ನಿರ್ಮಾಣ, ಗುಣ ಮಟ್ಟ ಮತ್ತು ಡೆಲಿವರಿಯಲ್ಲಿ ಕಾರ್ಯ ತತ್ಪರತೆ, ಗ್ರಾಹಕ ಸ್ನೇಹಿ ನಿಲುವು ಶ್ರೀನಾಥ್ ಅವರನ್ನು ಉತ್ತಮ ಬಿಲ್ಡರ್‍ನನ್ನಾಗಿ ಮಾಡಿಸಿದೆ. ಹಲವು ಔದ್ಯಮಿಕ ಏರಿಳಿತಗಳನ್ನು ಕಂಡರೂ ಬ್ಯಾಂಕ್ ವ್ಯವಹಾರದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು. ಇದೇ ವೇಳೆ, ಶ್ರೇಷ್ಠ ಗ್ರಾಹಕರೆಂಬ ನೆಲೆಯಲ್ಲಿ ಶ್ರೀನಾಥ್ ಅವರನ್ನು ಮಹಾಬಲೇಶ್ವರ ಎಂ. ಎಸ್. ಅವರು, ಶಾಲು ಹೊದಿಸಿ ಗೌರವಿಸಿ ಶುಭ ಹಾರೈಸಿದರು.

ಸ್ಥಳೀಯ ಕಾಪೆರ್Çರೇಟರ್ ನವೀನ್ ಆರ್. ಡಿ’ಸೋಜಾ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದರು.

ಸಮ್ಮಾನ: ಕಟ್ಟಡದ ಆರ್ಕಿಟೆಕ್ಟ್ ಆಗಿರುವ ಆರ್ಕಿಟೆಕ್ನಿಕ್ಸ್‍ನ ಪೀಟರ್ ಮಸ್ಕರೇನ್ಹಸ್, ಕಟ್ಟಡ ನಿರ್ಮಾಣದ ಕಂಟ್ರಾಕ್ಟರ್ಸ್ ಎಂಫೇರ್ ಕನ್‍ಸ್ಟ್ರಕ್ಷನ್ಸ್‍ನ ಉಪಾಧ್ಯಕ್ಷÀ್ಷ ಜೆ. ರಾಜೇಶ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿ ನಿರ್ವಹಿಸಿದ ಸಾಗರ್ ಎಲೆಕ್ಟ್ರಿಕಲ್ಸ್‍ನ ಕೇಶವ ಅಮೀನ್ ಅವರನ್ನು ಸಮ್ಮಾನಿಸಲಾಯಿತು. ಯೋಜನೆಯ ಜಂಟಿ ಪಾಲುದಾರ ಹಾಗೂ ಭೂಮಾಲಕ ವಕೀಲರಾದ ಭಾಸ್ಕರ್ ಎಸ್. ಕಟ್ಟೆಮಾರ್ ವೇದಿಕೆಯಲ್ಲಿದ್ದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಕ್ರಿಸ್ಟಿನಾ ಅವರು ವಂದಿಸಿದರು.

`ಮೈಲ್‍ಸ್ಟೋನ್ 25′
`ಮೈಲ್‍ಸ್ಟೋನ್ 25′ ಕಟ್ಟಡವು ನೆಲ ಅಂತಸ್ತು ಮತ್ತು 5 ಅಂತಸ್ತುಗಳ ಅತ್ಯಾಕರ್ಷಕ ವಾಣಿಜ್ಯ ಸಂಕೀರ್ಣ ಆಗಿದ್ದು, ತಳಭಾಗದಲ್ಲಿ ಮೂರು ಅಂತಸ್ತುಗಳಲ್ಲಿ ವಾಹನ ನಿಲುಗಡೆ ಪ್ರದೇಶವಿದೆ. ಎರಡು ಮಿತ್ಸುಬಿಷಿ ಸ್ವಯಂಚಾಲಿತ ಲಿಫ್ಟ್‍ಗಳು, ಒಂದು ಸರ್ವಿಸ್ ಎಲಿವೇಟರ್, ಎಲಿವೇಟರ್ ಹವಾನಿಯಂತ್ರಿತ ವ್ಯವಸ್ಥೆ, ಪೂರಕವಾಗಿ ಹೆವಿಡ್ಯೂಟಿ ಪವರ್ ಜನರೇಟರ್‍ಗಳಿವೆ.

ಪ್ರಮುಖ ಪ್ರದೇಶದಲ್ಲಿದ್ದು, ಅತ್ಯಾಧುನಿಕ ವಿನ್ಯಾಸದಿಂದಾಗಿ ಹೂಡಿಕೆದಾರರು, ಉದ್ಯಮಿಗಳಿಗೆ ಅನುಕೂಲಕರವಾಗಿದೆ. ವಿಶಾಲವಾದ ನೆಲ ಅಂತಸ್ತು ಮೆಗಾ ಶೋರೂಮ್‍ಗಳಿಗೆ ರಿಟೇಲ್ ವ್ಯವಹಾರಕ್ಕೆ ಪೂರಕವಾಗಿದೆ. ಮೇಲಿನ ಅಂತಸ್ತುಗಳು ಕಾಪೆರ್Çರೇಟ್ ಕಚೇರಿಗಳು, ಕನ್ಸಲ್ಟೆಂಟ್ ಚೇಂಬರ್ಸ್, ವೈದ್ಯರು- ಚಾರ್ಟೆರ್ಡ್ ಎಕೌಂಟೆಂಟ್‍ಗಳ ಸಹಿತ ವೃತ್ತಿಪರರಿಗೆ ಸೂಕ್ತವಾಗಿದೆ.


Spread the love