ಬಾಟ್ಲಿ ನೀರಿನಲ್ಲಿ ಮಾಲಿನ್ಯ ಕೋಕಾಕೋಲಾ ಕಂಪೆನಿ 5000 ನಷ್ಟ ಪರಿಹಾರ ನೀಡಲು ಬಳಕೆದಾರ ವೇದಿಕೆ ಆದೇಶ
ಮಲಪ್ಪುರಂ: ಕೊಕಾಕೋಲ ಕಂಪೆನಿಯ ಕಿನ್ಲೆ ಬಾಟ್ಲಿ ನೀರಿನಲ್ಲಿ ಮಾಲಿನ್ಯ ಪತ್ತೆಯಾದ ಘಟನೆಯಲ್ಲಿ ಬಳಕೆದಾರನಿಗೆ ನೀಡಬೇಕಾದ ನಷ್ಟ ಪರಿಹಾರವನ್ನು 5000 ರೂಪಾಯಿಗೆ ಮಿತಿಗೊಳಿಸಿ ಕೇರಳ ರಾಜ್ಯ ಬಳಕೆದಾರರ ವಿವ ಾದಪರಿಹಾರ ಆಯೋಗದ ಆದೇಶ ನೀಡಿದೆ.
ಮಲಪ್ಪುರಂ ಜಿಲ್ಲೆಯ ಬಳಕೆದಾರನಿಗೆ ಪರಿಹಾರ ಫೋರಂ ತೀರ್ಪಿನಲ್ಲಿ ನೀಡಲು ಹೇಳಿದ ಮೊತ್ತವನ್ನು ಪ್ರಶ್ನಿಸಿ ಹಿಂದುಸ್ಥಾನ್ ಕೋಕಾಕೋಲಾ ಬಿವರೇಜಸ್ ಪ್ರೈವೆಟ್ ಲಿಮಿಟೆಡ್ ಸಲ್ಲಿಸಿದ ಅಪೀಲ್ ನಲ್ಲಿ ಆಯೋಗ ಪರಿಹಾರ ಮೊತ್ತವನ್ನು ಐದು ಸಾವಿರ ರೂಪಾಯಿಗೆ ಮಿತಿಗೊಳಿಸಿ ಆದೇಶ ಹೊರಡಿಸಿದೆ. ನಷ್ಟ ಪರಿಹಾರವ ಮೊತ್ತವನ್ನು ಆದೇಶ ಹೊರಡಿಸಿದ ಒಂದು ತಿಂಗಳೊಳಗೆ ಬಳಕದೆದಾರ ತಿರೂರ್ ಪೂಕ್ಕ ಎಂಬಲ್ಲಿನ ಕೆ.ವಿ.ಸುರೇಶ್ ಬಾಬು ಎಂಬವರಿಗೆ ನೀಡಬೇಕೆಂದು ಆಯೋಗದ ಸದಸ್ಯರಾದ ಕೆ ಚಂದ್ರದಾಸ್ ನಾಡಾರ್, ವಿ ವಿ ಜೋಸ್ ಆದೇಶಿಸಿದ್ದಾರೆ.
2013 ಜೂನ್ 24 ರಂದು ಸುರೇಶ್ ಬಾಬು ಮಲಪ್ಪುರಂ ರೆಸ್ಟೋರೆಂಟಿನಿಂದ 20 ರೂಪಾಯಿಗೆ ಖರೀದಿಸಿದ್ದ ಕಿನ್ಲೆ ಮಿನರಲ್ ವಾಟರ್ ಬಾಟ್ಲಿಯಲ್ಲಿ ಬಣ್ನ ವ್ಯತ್ಯಾಸವನ್ನು ಗಮನಿಸಿದ್ದರು. ನಂತರ ಬಾಟ್ಲಿಯ ಕಂಪೆನಿ ಮತ್ತು ರೆಸ್ಟೊರೇಂಟ್ ಮಾಲಕರನ್ನು ಇದಿರು ಕಕ್ಷಿಯನ್ನಾಗಿಸಿ ಜಿಲ್ಲಾ ಬಳಕೆದಾರ ಸಮಸ್ಯೆ ಪರಿಹಾರ ಫೋರಂಗೆ ದೂರು ನೀಡಿದ್ದರು. ಕಂಪೆನಿಯಿಂದ 50000 ರೂಪಾಯಿ ವಸೂಲು ಮಾಡಲು ಫೋರಂ ತೀರ್ಪು ನೀಡಿತು. 40000 ರೂಪಾಯಿಯನ್ನು ಮುಖ್ಯಮಂತ್ರಿ ಸಂತ್ರಸ್ತ ಪರಿಹಾರ ನಿಧಿಗೆ ಕೊಡಲು ಮತ್ತು ಹತ್ತು ಸಾವಿರ ರೂಪಾಯಿಯನ್ನು ಬಳಕೆದಾರನಿಗೆ ಕೊಡಲು ಆದೇಶಿಸಿತ್ತು.
ಇದರ ವಿರುದ್ದ ಕೊಕಕೋಲ ಕಂಪೆನಿ ಸಲ್ಲಿಸಿದ್ದ ಅಪೀಲಿನಲ್ಲಿ ಬಳಕೆದಾರನಿಗೆ ನೀಡುವ ನಷ್ಟ ಪರಿಹಾರವನ್ನು ಐದು ಸಾವಿರ ರೂಪಾಯಿಗೆ ಮಿತಿಗೊಳಿಸಲಾಗಿದೆ.