Home Mangalorean News Kannada News ಬಿಜೆಪಿಗರು ರಾಜ್ಯ ಇಬ್ಭಾಗವಾಗಬೇಕು ಎನ್ನುವುದು ಕೇವಲ ಅಧಿಕಾರ ದಾಹಕ್ಕೆ ಅಷ್ಟೇ ಅಭಿವೃದ್ಧಿಗಲ್ಲ : ರವಿ ಶೆಟ್ಟಿ  

ಬಿಜೆಪಿಗರು ರಾಜ್ಯ ಇಬ್ಭಾಗವಾಗಬೇಕು ಎನ್ನುವುದು ಕೇವಲ ಅಧಿಕಾರ ದಾಹಕ್ಕೆ ಅಷ್ಟೇ ಅಭಿವೃದ್ಧಿಗಲ್ಲ : ರವಿ ಶೆಟ್ಟಿ  

Spread the love

ಬಿಜೆಪಿಗರು ರಾಜ್ಯ ಇಬ್ಭಾಗವಾಗಬೇಕು ಎನ್ನುವುದು ಕೇವಲ ಅಧಿಕಾರ ದಾಹಕ್ಕೆ ಅಷ್ಟೇ ಅಭಿವೃದ್ಧಿಗಲ್ಲ : ರವಿ ಶೆಟ್ಟಿ  

ಉಡುಪಿ :  ರಾಜಕೀಯ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸುವ ಒಂದು ಪ್ರಯತ್ನವನ್ನು ವಿರೋಧ ಪಕ್ಷ ಬಿಜೆಪಿ ಮಾಡುತ್ತಿರುವುದು ಬಹಳ ವಿಷಾದನೀಯ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಸೌಲಭ್ಯವನ್ನು ಕುಮಾರಸ್ವಾಮಿ ಸರ್ಕಾರ ನೀಡಿದ್ದರೂ ಯಾವುದೇ ಸೌಲಭ್ಯ ನೀಡಿಲ್ಲ ಪ್ರತ್ಯೇಕ ರಾಜ್ಯವನ್ನು ಮಾಡುತ್ತೇವೆ ಎಂಬ ಒಂದು ಕೂಗನ್ನು ಎಬ್ಬಿಸಿರುವ ಬಿಜೆಪಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಹಾಕದೆ ಜವಾಬ್ದಾರಿಯುತ ಪ್ರತಿಪಕ್ಷದಲ್ಲಿ ನಿಂತು ಅಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ನಡೆಸಬೇಕಿತ್ತು ಅದನ್ನು ಹೊರತುಪಡಿಸಿ . ರಾಜ್ಯದ ಏಕೀಕರಣಕ್ಕೆ ಭಂಗ ಬರುವಂತಹ ಹೇಳಿಕೆ ನೀಡುತ್ತಿರುವುದು ಅವರ ಅಧಿಕಾರ ದಾಹಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಬೈಂದೂರು ಜೆಡಿಎಸ್ ಮುಖಂಡ ರವಿ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಪ್ರತ್ಯೇಕ ರಾಜ್ಯಕ್ಕೆ ಕೂಗು ಹಾಕುತ್ತಿರುವ ಬಿಜೆಪಿಯ ಹಲವಾರು ಸಂಸದರು ಕರ್ನಾಟಕದಲ್ಲಿ ಹಲವಷ್ಟು ಗ್ರಾಮಗಳನ್ನು ದತ್ತು ಗ್ರಾಮವಾಗಿ ಪಡೆದಿದ್ದಾರೆ ಅದರ ಸ್ಥಿತಿ ಇಂದು ತ್ರಿಶಂಕು ಸ್ವರ್ಗವಾಗಿದೆ ಅದಕ್ಕೆ ಉದಾಹರಣೆ ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಗ್ರಾಮವು ಒಂದು . ಇವರಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದಿದ್ದರೆ ಇಂತಹ ಗ್ರಾಮಗಳ ಅಭಿವೃದ್ಧಿ ಆಗಬೇಕಿತ್ತು ಅದನ್ನು ಹೊರತುಪಡಿಸಿ . ಸಾಮಾನ್ಯ ಜನರ ದಿಕ್ಕು ತಪ್ಪಿಸುವಂತಹ ಪ್ರಯತ್ನ ಮಾಡುತ್ತಿರುವುದು ಖಂಡನೀಯ . ಈ ರೀತಿಯ ಒಳಸಂಚು ಜನರಿಗೆ ತಿಳಿಯುತ್ತದೆ ಇಂತಹ ಅಧಿಕಾರದಾಹಿ ಜನಗಳಿಗೆ ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸುತ್ತಾರೆ . ಅಭಿವೃದ್ಧಿಯ ಬಗ್ಗೆ ಗಮನ ಹರಿಸಬೇಕಾದ ಗೌರವಾನ್ವಿತ ಸಂಸದೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವರ ಗೌರವಕ್ಕೆ ಶೋಭೆ ತರುವಂಥದ್ದು ಅಲ್ಲ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಕುಂದಾಪುರ ಬೈಂದೂರು ರಸ್ತೆಯ ಅವ್ಯವಸ್ಥೆ ನೋಡಿದರೆ ಜನರ ಬಗ್ಗೆ ಇವರಿಗಿರುವ ಕಾಳಜಿ ಎನೆಂಬುದು ಗೊತ್ತಾಗುತ್ತದೆ

ಮೊದಲು ಅದನ್ನು ಅವರು ಸರಿ ಮಾಡಲಿ. ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ರೈತರ ಸಾಲ ಮನ್ನಾ ಮಾಡಿ ರೈತರ ಪರ ಸರಕಾರ ಎಂಬುದನ್ನು ನಿರೂಪಿಸಿದ ಕುಮಾರಸ್ವಾಮಿಯ ಬಗ್ಗೆ ಮಾತನಾಡುವ ಮೊದಲು ಕೇಂದ್ರ ಸರ್ಕಾರದಿಂದ ರೈತರಿಗೆ ಏನು ಮಾಡಿದ್ದೀರಿ ಎಂಬುದನ್ನು ಜನರ ಮುಂದಿಡಿ ಎಂದು ಬೈಂದೂರು ಜೆಡಿಎಸ್ ಮುಖಂಡ ರವಿ ಶೆಟ್ಟಿ ಆಗ್ರಹಿಸಿದ್ದಾರೆ.


Spread the love

Exit mobile version