Home Mangalorean News Kannada News ಬಿಜೆಪಿಗೆ ಸಾಮರ್ಥ್ಯವಿದ್ದರೆ ವಿದೇಶಕ್ಕೆ ಬೀಫ್ ರಫ್ತು ನಿಷೇಧಿಸಲಿ: ಯು.ಟಿ.ಖಾದರ್

ಬಿಜೆಪಿಗೆ ಸಾಮರ್ಥ್ಯವಿದ್ದರೆ ವಿದೇಶಕ್ಕೆ ಬೀಫ್ ರಫ್ತು ನಿಷೇಧಿಸಲಿ: ಯು.ಟಿ.ಖಾದರ್

Spread the love

ಬಿಜೆಪಿಗೆ ಸಾಮರ್ಥ್ಯವಿದ್ದರೆ ವಿದೇಶಕ್ಕೆ ಬೀಫ್ ರಫ್ತು ನಿಷೇಧಿಸಲಿ: ಯು.ಟಿ.ಖಾದರ್

ಮಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಗೋಹತ್ಯೆ ನಿಷೇಧ ನೀತಿಯಲ್ಲಿ ಗೊಂದಲವಿದೆ ಎಂದು ರಾಜ್ಯ ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಗೋಹತ್ಯೆ ನಿಷೇಧದ ವಿಚಾರದಲ್ಲಿ ಸರಕಾರ ಎಲ್ಲಾ ಜನರ ಭಾವನೆಯನ್ನು ಗೌರವಿಸುತ್ತದೆ. ಈ ಹಿಂದಿನ 1960ರ ಪ್ರಾಣಿ ಹಿಂಸಾ ತಡೆ ಕಾಯಿದೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಿ ಕೊಲ್ಲಲು ಅವಕಾಶವಿರಲಿಲ್ಲ ಆದರೆ ಇದೇ ಸಂದರ್ಭದಲ್ಲಿ ನಿರುಪಯುಕ್ತವಾದ ದನವನ್ನು ಸೂಕ್ತ ಕ್ರಮಗಳೊಂದಿಗೆ ಏನು ಮಾಡಬೇಕೆಂದು ಸೂಚಿಸಲಾಗಿತ್ತು. ಆದರೆ ಪ್ರಸಕ್ತ ಗೋಹತ್ಯೆ ನಿಷೇಧ ನೀತಿಯಲ್ಲಿ ಗೋಮಾಂಸ ಸೇವನೆಗೆ ನಿಷೇಧ ಹೇರಲಾಗಿಲ್ಲ. ನಿರುಪಯುಕ್ತ ದನಗಳನ್ನು ಏನು ಮಾಡಬೇಕೆಂದು ತಿಳಿಸಿಲ್ಲ, ಇನ್ನೊಂದು ಕಡೆ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಕಂಪೆನಿಗಳಿಗೆ ವಿನಾಯತಿ, ಅವಕಾಶವನ್ನು ಬಿಜೆಪಿ ನೀಡಿದೆ. ದೇಶದಲ್ಲಿ ಬಿಜೆಪಿ ಈ ರೀತಿಯಲ್ಲಿ ನಿಲುವಿನಿಂದ ಗೊಂದಲ ಸೃಷ್ಟಿಸುತ್ತದೆ. ಬಿಜೆಪಿಗೆ ಸಾಮರ್ಥ್ಯವಿದ್ದರೆ ಕೋಟ್ಯಾಂತರ ರೂಪಾಯಿಗಳ ಬೀಫ್ ವಿದೇಶಕ್ಕೆ ರಫ್ತು ಮಾಡುವ ಕಂಪೆನಯನ್ನು ಏಕೆ ನಿಲ್ಲಿಸಲಿಲ್ಲ. ಈ ನೀತಿಯ ಹಿಂದೆ ಬಿಜೆಪಿಯ ರಾಜಕೀಯ ಇದ್ದು, ರಾಜ್ಯದಲ್ಲಿ ಈ ಕಾಯಿದೆಯನ್ನು ಅನುಷ್ಠಾನದ ಕುರಿತು ಸರಕಾರ ಎಡ್ವೋಕೇಟ್ ಜನರಲ್ ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.


Spread the love

Exit mobile version