Home Mangalorean News Kannada News ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಜ್ಜಾಗಿ- ವೇದವ್ಯಾಸ ಕಾಮತ್ ಕರೆ

ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಜ್ಜಾಗಿ- ವೇದವ್ಯಾಸ ಕಾಮತ್ ಕರೆ

Spread the love

ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಜ್ಜಾಗಿ- ವೇದವ್ಯಾಸ ಕಾಮತ್ ಕರೆ

ಮಂಗಳೂರು: ಯುವ ಸಮುದಾಯದ ಸಲಹೆಗಳನ್ನು ಸ್ವೀಕರಿಸಿ, ಹಿರಿಯರ ಸೂಚನೆಗಳನ್ನು ಪಾಲಿಸಿ ಎಲ್ಲಾ ವರ್ಗದ ಕಾರ್ಯಕರ್ತರ ಸಹಕಾರದೊಂದಿಗೆ ರಾಜ್ಯದಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಮಂಗಳೂರು ನಗರ ದಕ್ಷಿಣದ ಮತದಾರರು ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅವರು ಮರೋಳಿ ವಾರ್ಡ್ ನಂಬ್ರ 37 ರಲ್ಲಿ ಪರಿಸರದ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕತ್ತಲೆ ಕವಿದಿರುವ ರಾಜ್ಯದಲ್ಲಿ ಭರವಸೆಯ ಬೆಳಕು ಮೂಡಲು ಬಿಜೆಪಿ ಅಧಿಕಾರಕ್ಕೆ ಬರುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಮಂಡಲದ ಅಧ್ಯಕ್ಷ ಜಗನ್ನಾಥ ದೊಡ್ಡಮನೆ, ಉಪಾಧ್ಯಕ್ಷರಾದ ಶ್ರೀನಿವಾಸ ಶೇಟ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಸೂರ್ಯ, ರಮೇಶ್, ಪುನೀತ್, ಸಂತೋಷ್, ತಾರನಾಥ್, ಅರುಣ್ ಬಜ್ಜೋಡಿ, ದೇವದಾಸ್ ದೊಡ್ಡಮನೆ ಮುಂತಾದ ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
drona
6 years ago

Adare modalu yeddiyannu chaddi sametha oddodisuvudu athi mukhya sarvajna.

wpDiscuz
Exit mobile version