ಬಿಜೆಪಿಯವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ – ವಿಕಾಸ್ ಹೆಗ್ಡೆ
ಕುಂದಾಪುರ: ರಾಜಕಾರಣ ಬೇರೆ ಧರ್ಮ ಬೇರೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಬ್ಬ ಅಪ್ಪಟ ಹಿಂದೂ ಅದರ ಜೊತೆಯಲ್ಲಿ ಒಬ್ಬ ಅಂಬೇಡ್ಕರ್ ಕೊಟ್ಟ ಸಂವಿಧಾನದ ಆಶಯಗಳನ್ನು ಏತ್ತಿ ಹಿಡಿಯುವ ಜಾತ್ಯತೀತ ಮನಸ್ಥಿತಿಯ ನಾಯಕ. ಬಿಜೆಪಿ ನಾಯಕರುಗಳು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಬಿಜೆಪಿಯವರು ಮಾತ್ರ ಹಿಂದೂಗಳು ಉಳಿದವರು ಯಾರೂ ಹಿಂದೂಗಳಲ್ಲಾ ಎನ್ನುವ ಭಾವನೆ ಬಿಜೆಪಿಯವರಲ್ಲಿದೆ. ರಾಜಕೀಯವನ್ನು ಧರ್ಮದ ಜೊತೆ ಬೆರೆಸಿ ಧರ್ಮ ಹಾಗೂ ದೇವರನ್ನು ಬೀದಿಗೆ ತಂದವರು ಬಿಜೆಪಿಯವರು. ಇವತ್ತು ರಾಜ್ಯದಲ್ಲಿ ಒಡೆದ ಮನೆಯಾಗಿರುವ ಬಿಜೆಪಿಗೆ ನಾಯಕತ್ವದ ಕೊರತೆಯಿದ್ದು ಅದನ್ನು ನೀಗಿಸಲು ಡಿ ಕೆ ಶಿವಕುಮಾರ್ ರಂತಹ ಜನಪರ ಕಾಳಜಿಯ ನಾಯಕರಿಗೆ ಗಾಳ ಹಾಕುವ ಕೆಲಸ ಬಿಜೆಪಿ ನಾಯಕರುಗಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಲವು ಬಣಗಳಾಗಿ ಹಂಚಿ ಹೋಗಿರುವ ಬಿಜೆಪಿ ಒಡೆದ ಮನೆಯಾಗಿದೆ. ಬಿಜೆಪಿ ನಾಯಕರುಗಳದ್ದು ಬೂಟಾಟಿಕೆಯ ಹಿಂದುತ್ವ. ಕೇವಲ ಅಧಿಕಾರಕ್ಕಾಗಿ ಧರ್ಮ, ಧರ್ಮದ ನಡುವೆ, ಜಾತಿ ಜಾತಿಯ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಬಿಜೆಪಿ ನಾಯಕರುಗಳಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಹಾರೈಸಿದ್ದಾರೆ.