Home Mangalorean News Kannada News ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕರಾವಳಿಯ ಅಂಗಾರ, ಸುನೀಲ್, ಹಾಲಾಡಿಗೆ ಸ್ಥಾನ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕರಾವಳಿಯ ಅಂಗಾರ, ಸುನೀಲ್, ಹಾಲಾಡಿಗೆ ಸ್ಥಾನ

Spread the love

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕರಾವಳಿಯ ಅಂಗಾರ, ಸುನೀಲ್, ಹಾಲಾಡಿಗೆ ಸ್ಥಾನ

ನವದೆಹಲಿ: ರಾಜ್ಯದ ವಿಧಾನಸಭಾ ಚುನಾವಣೆ ಮೇ 12 ರಂದು ನಡೆಯಲಿದ್ದು, ರಾಷ್ಟ್ರಿಯ ಪಕ್ಷವಾದ ಬಿಜೆಪಿ ತನ್ನ ಪಕ್ಷದಿಂದ ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿ, ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯುವ ಸಲುವಾಗಿ ಮೊದಲ 72 ಕ್ಷೇತ್ರಗಳ ಪಟ್ಟಿ ಅಂತಿಮಗೊಳಿಸಿ ನವದೆಹಲಿಯಲ್ಲಿ ಭಾನುವಾರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಜೆಪಿ ನಡ್ಡಾ ನವದೆಹಲಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನುವಾರ ನಡೆದ ಪಕ್ಷ ದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 72 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ.

ಪಕ್ಷ ದ ಕೇಂದ್ರ ಕಚೇರಿಯಲ್ಲಿ ಸಂಜೆ 6.30ಕ್ಕೆ ಆರಂಭವಾದ ಸಭೆ ರಾತ್ರಿ 9 ಗಂಟೆವರೆಗೆ ನಡೆದರೂ ಸುಮಾರು 30 ಹೆಸರುಗಳ ಬಗ್ಗೆ ರಾಜ್ಯ ನಾಯಕರು ಮತ್ತು ಚುನಾವಣಾ ಸಮಿತಿಯ ನಡುವೆ ಸಹಮತ ಏರ್ಪಡಲಿಲ್ಲ. ಹಾಗಾಗಿ ಕೇವಲ 82 ಅಭ್ಯರ್ಥಿಗಳ ಹೆಸರುಗಳಿಗೆ ಮಾತ್ರ ಸಮಿತಿಯ ಒಪ್ಪಿಗೆಯ ಮುದ್ರೆ ಬಿದ್ದಿದೆ ಎನ್ನಲಾಗಿದೆ.

ಬಿಜೆಪಿಯ ಹಾಲಿ ಶಾಸಕರು, ಇತರ ಪಕ್ಷ ಗಳಿಂದ ಪಕ್ಷ ಕ್ಕೆ ವಲಸೆ ಬಂದಿರುವ ಶಾಸಕರು, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವರು ಮತ್ತು ಕಡಿಮೆ ಅಂತರದಿಂದ ಪರಾಭವಗೊಂಡಿರುವವರು ಸೇರಿದಂತೆ ರಾಜ್ಯದ ನಾಯಕರು ಒಟ್ಟು 140 ಹೆಸರುಗಳ ಜತೆ ದಿಲ್ಲಿಗೆ ಆಗಮಿಸಿದ್ದರೆನ್ನಲಾಗಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಮಧ್ಯಾಹ್ನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತಿತರ ಪ್ರಮುಖ ನಾಯಕರ ಜತೆ ಎರಡು ಸುತ್ತಿನ ಪೂರ್ವಭಾವಿ ಸಭೆಯ ನಂತರ ಅಂತಿಮವಾಗಿ ಸುಮಾರು 110 ಹೆಸರುಗಳ ಜತೆಗೆ ಸಭೆಗೆ ತೆರಳಲಾಗಿತ್ತು ಎನ್ನಲಾಗಿದೆ.

ಮೊದಲ ಪಟ್ಟಿಯಲ್ಲಿ ಕುಂದಾಪುರದ ಮಾಜಿ ಶಾಸಕ ಕಳೆದ ಬಾರಿ ಪಕ್ಷೇತರಾಗಿ ಸ್ಪರ್ಧಿಸಿ ಜಯಗಳಿಸಿ ಬಿಜೆಪಿ ಸೇರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳದ ಸುನೀಲ್ ಕುಮಾರ್, ಸುಳ್ಯದ ಅಂಗಾರ ಬಿಟ್ಟರೆ ಬೇರೆ ಯಾವುದೇ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಸೂಚಿತವಾಗಿಲ್ಲ. ಸಂಸದರಾದ ಬಿ ಎಸ್ ಯಡ್ಯೂರಪ್ಪ ಮತ್ತು ಶ್ರೀರಾಮುಲು ಅವರಿಗೆ ವಿಧಾನಸಭೆಗೆ ಟಿಕೇಟ್ ಲಭಿಸಿದೆ. ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ 72 ಮಂದಿಯ ವಿವರ

ನಿಪ್ಪಾಣಿ- ಶಶಿಕಲಾ ಜೊಲ್ಲೆ
ಅಥಣಿ – ಲಕ್ಷಣ್ ಸವದಿ
ಕಾಗವಾಡ – ಭರಮ ಗೌಡ ಎಚ್ ಕಾಗೆ
ಕುಡಚಿ – ಪಿ ರಾಜೀವ್
ರಾಯ್ ಭಾಗ್ – ದುರ್ಯೋಧನ ಐಹೋಳೆ
ಹುಕ್ಕೇರಿ – ಉಮೇಶ್ ಕತ್ತಿ
ಅರಬಾವಿ – ಬಾಲಚಂದ್ರ ಜಾರಕಿ ಹೋಳಿ
ಬೆಳಗಾಂ ಗ್ರಾಮಂತರ – ಸಂಜಯ್ ಪಾಟೀಲ್
ಬೈಲಹೊಂಗಲ- ಡಾ ವಿಶ್ವನಾಥ ಪಾಟೀಲ್
ಸವದತ್ತಿ – ವಿಶ್ವನಾಥ ಮಾಮನಿ
ಮುಧೋಳ್-ಗೋವಿಂದ ಕಾರಜೋಳ
ಮುದ್ದೇ ಬಿಹಾಳ – ಎ ಎಸ್ ಪಾಟೀಲ್ ನಡಹಳ್ಳಿ
ಬಬಲೇಶ್ವರ –ವಿಜುಗೌಡ ಪಾಟೀಲ್
ಬಿಜಾಪುರ ನಗರ – ಬಸವನಗೌಡ ಪಾಟೀಲ್ ಯತ್ನಾಳ್
ಸಿಂಧಗಿ – ರಮೇಶ್ ಭೂಷಣ್
ಅಫ್ಜಲ್ ಪುರ-ಮಾಲಿಕಯ್ಯ ಗುತ್ತೇದಾರ್
ಶ್ರಂಗೇರಿ- ಡಿ ಎನ್ ಜೀವರಾಜ್
ಚಿಕ್ಕಮಗಳೂರು – ಸಿ ಟಿ ರವಿ
ತುಮಕೂರು ಗ್ರಾಮಾಂತರ – ಬಿ ಸುರೇಶ್ ಗೌಡ
ಕೆಜಿಎಫ್ – ವೈ ಸಂಪಂಗಿ
ಯಲಹಂಕ – ಎಸ್ ಆರ್ ವಿಶ್ವನಾಥ್
ರಾಜರಾಜೇಶ್ವರಿ ನಗರ್ – ಪಿ ಎಮ್ ಮುನಿರಾಜು ಗೌಡ
ದಾಸರಹಳ್ಳ- ಎಸ್ ಮುನಿರಾಜು
ಮಲ್ವೇಶ್ವರಮ್ – ಡಾ ಸಿ ಎನ್ ಅಶ್ವಥ್ ನಾರಾಯಣ
ಹೆಬ್ಬಾಳ – ಡಾ ವೈ ಎ ನಾರಾಯಣ ಸ್ವಾಮಿ
ಸಿವಿ ರಾಮನ್ ನಗರ- ಎಸ್ ರಘು
ರಾಜಾಜೀನಗರ- ಎಸ್ ಸುರೇಶ್ ಕುಮಾರ್
ಗೋವಿಂದರಾಜ ನಗರ – ವಿ ಸೋಮಣ್ಣ
ಚಿಕ್ಕಪೇಟೆ- ಉದಯ್ ಗರುಡಾಚಾರ್
ಬಸವನಗುಡಿ- ರವಿ ಸುಬ್ರಹ್ಮಣ್ಯ
ಪದ್ಮನಾಭನಗರ- ಆರ್ ಅಶೋಕ್
ಜಯನಗರ್- ಬಿ ಎನ್ ವಿಜಯಕುಮಾರ್
ಮಹದೇವಪುರ-ಅರವಿಂದ ಲಿಂಬಾವಳಿ
ಬೊಮ್ಮನಹಳ್ಳಿ-ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ – ಎಮ್ ಕೃಷ್ಣಪ್ಪ
ಆನೇಕಲ್ – ಎ ನಾರಾಯಣ ಸ್ವಾಮಿ
ಹೊಸಕೋಟ್ –ಶರತ್ ಬಚ್ಚೇಗೌಡ
ಚೆನ್ನಪಟ್ಟಣ-ಸಿಪಿ ಯೋಗೇಶ್ವರ್
ಶ್ರೀರಂಗಪಟ್ಟಣ-ನಂಜುಡೇಗೌಡ
ಸುಳ್ಯ –ಎಸ್ ಅಂಗಾರ
ಮಡಿಕೇರಿ- ಅಪ್ಪಚ್ಚು ರಂಜನ್
ಶರಾಪುರ- ನರಸಿಂಹ ನಾಯಕ್
ಗುಲ್ಬರ್ಗಾ ದಕ್ಷಿಣ-ದತ್ರಾತ್ರೇಯ ಪಾಟೀಲ್ ರೇವೂರ
ಆಲಂದ-ಸುಭಾಶ್ ಗುತ್ತೇದಾರ್
ಬಸವಕಲ್ಯಾಣ-ಮಲ್ಲಿಕಾರ್ಜುನ ಖೂಬಾ
ಔರಾದ್- ಪ್ರಭು ಚೌಹಾಣ್
ರಾಯಚೂರು ಗ್ರಾಮಾಂತರ- ತಿಪ್ಪರಾಜು ಹವಾಲ್ದಾರ್
ರಾಯಚೂರು – ಡಾ. ಶಿವರಾಜ್ ಪಾಟೀಲ್
ದೇವದುರ್ಗ – ಶಿವಾನಗೌಡ ನಾಯಕ್
ಲಿಂಗಸೂರು – ಮಾನಪ್ಪ ವಜ್ಜಲ್
ಕುಷ್ಟಗಿ-ದೊಡ್ಡನಗೌಡ ಪಾಟೀಲ್
ಧಾರವಾಡ –ಅಮೃತ್ ದೇಸಾಯಿ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ –ಜಗದೀಶ್ ಶೆಟ್ಟರ್
ಹುಬ್ಬಳ್ಳೀ ಧಾರವಾಡ ವೆಸ್ಟ್ – ಅರವಿಂದ ಬೆಲ್ಲದ್
ಕಾರವಾರ- ರೂಪಾಲಿ ನಾಯಕ್
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ಹಾನಗಲ್ – ಸಿ ಎಮ್ ಉದಾಸಿ
ಶಿಗ್ಗಾಂವ್-ಬಸವರಾಜ ಬೊಮ್ಮಾಯಿ
ಹಿರೇಕೆರೂರ್- ಯು ಬಿ ಬಣಕಾರ್
ವಿಜಯನಗರ- ಗವಿಯಪ್ಪ
ಕಂಪ್ಲಿ- ಟಿ ಎಚ್ ಸುರೇಶ್ ಬಾಬು
ಸಂಡೂರು-ಬಿ ರಾಘವೇಂದ್ರ
ಮೊಳಕಾಲ್ಮೂರು- ಬಿ ಶ್ರೀರಾಮುಲು
ಚಿತ್ರದುರ್ಗ –ಜಿ ಎಚ್ಚ ತಿಪ್ಪಾರೆಡ್ಡಿ
ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್
ಹೊಸದುರ್ಗ-ಗೂಳಿಹಟ್ಟಿ ಡಿ ಶೇಖರ್
ದಾವಣಗೆರೆ ಉತ್ತರ- ಎಸ್ ಎ ರವೀಂದ್ರನಾಥ್
ಶಿವಮೊಗ್ಗ- ಕೆ ಎಸ್ ಈಶ್ವರಪ್ಪ
ಶಿಕಾರಿಪುರ- ಬಿ ಎಸ್ ಯಡ್ಯೂರಪ್ಪ
ಕುಂದಾಪುರ-ಹಾಲಾಡಿ ಶ್ರೀನಿವಾಸ ಶೆಟ್ಟಿ
ಕಾರ್ಕಳ – ವಿ ಸುನೀಲ್ ಕುಮಾರ್


Spread the love

Exit mobile version