Home Mangalorean News Kannada News ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಬ್ಲಾಕ್ ಕಾಂಗ್ರೆಸ್ ದೂರು ಸಲ್ಲಿಕೆ

ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಬ್ಲಾಕ್ ಕಾಂಗ್ರೆಸ್ ದೂರು ಸಲ್ಲಿಕೆ

Spread the love

ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಬ್ಲಾಕ್ ಕಾಂಗ್ರೆಸ್ ದೂರು ಸಲ್ಲಿಕೆ

ಮಂಗಳೂರು: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಬಗ್ಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಅತ್ಯಂತ ಅವಹೇಳಕಾರಿಯಾದ ಮಾತನಾಡಿದ್ದಾರೆ ಎಂದು  ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ಬ್ಲಾಕ್ ಕಾಂಗ್ರೆಸ್ ವತಿಯಿಂದ ನೀಡಿರುವ ದೂರಿನಲ್ಲಿ ರಮಾನಾಥ ರೈ ಅವರ ಘನತೆ, ಗೌರವ, ವ್ಯಕ್ತಿತ್ವವನ್ನು ಲೆಕ್ಕಿಸದೆ ಅವರ ಬಗ್ಗೆ ಕೀಳಭಿರುಚಿಯ ಶಬ್ದ ಬಳಕೆ ಮಾಡಿದ್ದಾರೆ ಎಂದಿದ್ದಾರೆ.

 ಸಂಜೀವ ಮಠಂದೂರು ಅವರು ಉದ್ದೇಶಪೂರ್ವಕವಾಗಿಯೇ ಸಚಿವರ ಬಗ್ಗೆ ಮಾನಹಾನಿಕರ ಮಾತುಗಳನ್ನು ಸಾರ್ವಜನಿಕವಾಗಿ ಆಡಿದ್ದಾರೆ. ಅಲ್ಲಾದೆ ಇಂಥ ಕೀಳು ಮಟ್ಟದ ಭಾಷೆಯ ಪ್ರಯೋಗ ಮಾಡುವ ಮೂಲಕ ಜನರ ಭಾವನೆಗಳನ್ನು ಕೆರಳಿಸಿದ್ದಾರೆ ಎಂದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿಯೋಗದಲ್ಲಿ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.


Spread the love

Exit mobile version