ಬಿಜೆಪಿ ಯುವ ಮೋರ್ಚಾ ವತಿಯಿಂದ ಚಾಯ್ ಪೆ ಚರ್ಚಾ
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರಕಾರ ಪದಗ್ರಹಣ ಮಾಡಿ ಯಶಸ್ವಿ ಮೂರನೇ ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ವತಿಯಿಂದ “ಚಾಯ್ ಪೆ ಚರ್ಚಾ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯುವ ಜನತೆಗೆ ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಚರ್ಚಿಸಲಾಯಿತು. ಈ ಯೋಜನೆಗಳನ್ನು ಚಹಾದ ಜೊತೆ ಸಾರ್ವಜನಿಕರಿಗೆ ಪರಿಚಯಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಂದೀಪ ಶೆಟ್ಟಿ ಮರವೂರು, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಡೆ, ಹರೀಶ್ ಶೆಟ್ಟಿ ಶಿಲ್ಪಾ, ಮಂಗಳೂರು ನಗರ ದಕ್ಷಿಣ ಯುವ ಮೋರ್ಚಾ ಉಪಾಧ್ಯಕ್ಷ ಮಧು ಶೆಟ್ಟಿ, ಚರಿತ್ ಪೂಜಾರಿ, ಅವಿನಾಶ್ ಸುವರ್ಣ, ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿಗಳಾದ ಪ್ರಕಾಶ್ ಗರೋಡಿ, ಮೋಹಿತ್ ಶೆಟ್ಟಿ, ಶ್ಯಾಮ್, ಉದಯ ಅಮೀನ್, ಮಂಜು, ರಕ್ಷಿತ್ ಶೆಟ್ಟಿ ಬೆಳ್ತಂಗಡಿ ಭಾಗವಹಿಸಿದ್ದರು.