ಬಿಜೆಪಿ ಸಿದ್ಧಾಂತ, ಕಾರ್ಯ ಪದ್ಧತಿ ಕಾರ್ಯಕರ್ತರ ಜೀವಾಳ : ನಳಿನ್ ಕುಮಾರ್ ಕಟೀಲು

Spread the love

ಬಿಜೆಪಿ ಸಿದ್ಧಾಂತ, ಕಾರ್ಯ ಪದ್ಧತಿ ಕಾರ್ಯಕರ್ತರ ಜೀವಾಳ : ನಳಿನ್ ಕುಮಾರ್ ಕಟೀಲು

ಉಡುಪಿ : ತನ್ನ ಜೀವಿತವನ್ನೇ ದೇಶಕ್ಕಾಗಿ ಮುಡಿಪನ್ನಾಗಿರಿಸಿ, ರಾಷ್ಟ್ರೀಯ ವಿಚಾರಧಾರೆಯನ್ನು ಪ್ರತಿಪಾಧಿಸುತ್ತಾ, ದೇಶದಲ್ಲಿ ಬಿಜೆಪಿ ಬಲಿಷ್ಠವಾಗಿ ನೆಲೆಯೂರಲು ಬೀಜಾಂಕುರ ಮಾಡಿದ ಸಂಸ್ಥಾಪಕರಲ್ಲಿ ಒಬ್ಬರಾದ ಪಂ|| ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ಅಂಗವಾಗಿ ಬಿಜೆಪಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳ ಮುಖ್ಯವಾದ ವಿಸ್ತಾರಕ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕರೆನೀಡಿದರು.

ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ವಿಸ್ತಾರಕರನ್ನು ಹೊರಡಿಸುವ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಪಕ್ಷಕ್ಕಾಗಿ ಪೂರ್ಣಾವಧಿ ಕೆಲಸ ಮಾಡುವ ವಿಸ್ತಾರಕ ಯೋಜನೆಯ ಪರಿಕಲ್ಪನೆ ಸಂಘಟನೆಯ ಆತ್ಮ ಎಂದು ಹೇಳಿದ ಅವರು, ಒಂದು ವರ್ಷ ಪೂರ್ತಿ, ಆರು ತಿಂಗಳು ಅಥವಾ 15 ದಿನಗಳ ಕಾಲ ಪಕ್ಷದ ಕೆಲಸಕ್ಕಾಗಿ ಸಮಯ ಕೊಡಲು ಬದ್ಧರಾಗಿರಬೇಕೆಂದರು. ಪಕ್ಷದ ಸಿದ್ಧಾಂತ, ವಿಚಾರಧಾರೆ, ಕಾರ್ಯಪದ್ಧತಿ ಮತ್ತು ಕಾರ್ಯಕರ್ತರ ನಡವಳಿಕೆಗಳ ಬಗ್ಗೆ ಅವರು ತಿಳಿ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷರು ಮಟ್ಟಾರ್ ರತ್ನಾಕರ ಹೆಗ್ಡೆ ಸ್ವಾಗತಿಸಿ ಉಡುಪಿ ಜಿಲ್ಲೆಯಲ್ಲಿ ವಿಸ್ತಾರಕ ಯೋಜನೆಯ ಬಗ್ಗೆ ಕೈಗೊಂಡ ಕ್ರಮಗಳ ಬಗೆಗಿನ ಸೂಕ್ತ ಪರಿಚಯ ನೀಡಿದರು.

ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಂಗಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರ್ ನವೀನ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಯಶ್‍ಪಾಲ್ ಸುವರ್ಣ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ಯಾಮಲಾ ಎಸ್. ಕುಂದರ್, ಕಿರಣ್ ಕುಮಾರ್ ಕೊಡ್ಗಿ, ಬಿ. ಎಂ. ಸುಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು


Spread the love
1 Comment
Inline Feedbacks
View all comments
7 years ago

After a long time people of India slowly started to forget the reality n the quality of the Congress but this is not true that this same people were continuing in this new boat…………………..